Monday, August 17, 2015

Daily Crime Reports As on 17/08/2015 at 07:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 15/08/2015 ರಂದು ಬೆಳಿಗ್ಗೆ 10:00 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ವಿನಾಯಕ  ಟಾಕೀಸ್  ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ನಿತಿನ್ ಕುಮಾರ್ ಎಂಬುವವರು ನೊಂದಣಿ ನಂಬ್ರ ಇಲ್ಲದ ಹೊಸ ಕಾರನ್ನು ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ರಫೆಲ್ ಡಿಕೋಸ್ಟಾ (49), ತಂದೆ: ಜಾಕೋಬ್ ಡಿಕೋಸ್ಟಾ, ವಾಸ:  ಕಾಮತ್ ಷೋರೂಂ ಹಿಂಭಾಗ, ಹಂಗಳೂರು ಗ್ರಾಮ, ಕುಂದಾಪುರ ಇವರು  ಇಂಡಿಕೇಟರ್ ಸೂಚನೆ ನೀಡಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪಶ್ಚಿಮ ಬದಿಯಿಂದ ಪೂರ್ವ ಬದಿಗೆ ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA 20 R 5379 ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಫೆಲ್ ಡಿಕೋಸ್ಟಾ ರವರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಅವರ ತಲೆಗೆ,  ಬಲ ಭುಜಕ್ಕೆ ಗಾಯ ನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 97/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ಕಲ್ಯಾಣಿ ಕಲಿಟ ಮಾಲಿ, ಗಂಡ; ಜತಿನ್ ಮಾಲಿ, ವಾಸ: ರುಕ್ಮಿಣಿ ನಗರ , ಸದ್ಲನ್ ಪತ್ (ಡಬ್ಲ್ಯು) ಮನೆ ನಂ; 20, ದಿಸ್ಪುರ, ಗೌಹಾಟಿ-6, ಅಸ್ಸಾಂ ಇವರ ಮಗಳು ಛಾಯಾ ಸ್ಮಿತಾ ಮಾಲಿಳಿಗೆ ಸಿಕ್ಕಿಂ ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ನ ಸೀಟು ಕೊಡಿಸುವುದಾಗಿ ನಂಬಿಸಿ  ಅರೋಪಿತರಾದ 1) ಡಾ: ರಂಜನ್ ಕುಮಾರ್ ಸಿಂಗ್, 2) ಮೃನಾಲಿ ಸಿಂಗ್, ವಾಸ: 1 ನೇ ಮಹಡಿ, ಕೃಷ್ಣ ಲೀಲಾ ಹೋಟೆಲ್ ಬಿಲ್ಡಿಂಗ್, ಮಣಿಪಾಲ ಅಮರಪಲಿ ರೆಸ್ಟೋರೆಂಟ್, ಸಿಂಡಿಕೇಟ್ ಸರ್ಕಲ್, ಎನ್ ಕ್ಲೈವ್ ಬಿಲ್ಡಿಂಗ್, ಡೋಮಿನೋಜ್ ಪಿಜ್ಜಾ ಹಿಂಬದಿ ಇವರು ದಿನಾಂಕ 11/08/2014 ರಂದು ರೂಪಾಯಿ 2,80,000/- ಹಾಗೂ ದಿನಾಂಕ 08/09/2014 ರಂದು 5,64,500/- ಒಟ್ಟು ರೂಪಾಯಿ 8,44,500/- ನ್ನು ಕಲ್ಯಾಣಿ ಕಲಿಟ ಮಾಲಿ ರವರಿಂದ ಪಡೆದು, ಮಗಳಿಗೆ ಎಂಬಿಬಿಎಸ್ ಸೀಟು ಕೊಡಿಸದೇ , ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 164/2015 ಕಲಂ: 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ 12/08/2015 ರಂದು 10:00 ಗಂಟೆಯಿಂದ ದಿನಾಂಕ 16/08/2015 ರಂದು 10:00 ಗಂಟೆಯ ಮದ್ಯಾವಧಿಯಲ್ಲಿ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಗೊದ್ದನಕಟ್ಟೆ ಪೇತ್ರಿ ಎಂಬಲ್ಲಿ ಪಿರ್ಯಾದಿದಾರರಾದ ಐತ ಹರಿಜನ (60), ತಂದೆ: ಕೋಟಿ,ವಾಸ:ಗೊದ್ದನಕಟ್ಟೆ ಪೇತ್ರಿ ಚೇರ್ಕಾಡಿ ಗ್ರಾಮ ಉಡುಪಿ ತಾಲೂಕು ಇವರ ಮಗನಾದ ಗಣೇಶ (32) ಎಂಬುವವರು ಬಾವಿಗೆ ಹಾರಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 48/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

No comments: