Saturday, August 01, 2015

Daily Crime Reports As On 01/08/2015 At 19:30 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 31/07/2015 ರಂದು 16:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಚಿಲಿಂಬಿ ಎಂಬಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಂಬ್ರ 169 ರಲ್ಲಿ ಅಪಾದಿತ ಶೇಖರ ಪೂಜಾರಿ ಎಂಬಾತನು ತನ್ನ ಅಟೋ ರಿಕ್ಷಾ ನಂಬ್ರ KA 20 D 1663 ನೇಯದನ್ನು ಮೂಡಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಷರೀಫ್ (24), ತಂದೆ:ದಿವಂಗತ ಅಬ್ದುಲ್ ರೆಹಮಾನ್, ವಾಸ: ಅತ್ತಾಜೆ ಮನೆ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು. ದ.ಕ. ಜಿಲ್ಲೆ ಇವರು ಸಹಸವಾರ ಗಣೇಶ ಎಂಬವರನ್ನು ಕುಳ್ಳಿರಿಸಿ ಕಾರ್ಕಳ ಕಡೆಯಿಂದ ಮೂಡಬಿದ್ರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA 19 EC 9886 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಷರೀಫ್‌ರವರ ಮುಖಕ್ಕೆ ತರಚಿದ ಗಾಯ ಹಾಗೂ ಬಲಕಾಲಿಗೆ ಮೂಳೆ ಮುರಿತವಾಗಿದ್ದು, ಸಹ ಸವಾರ ಗಣೇಶರವರ ತಲೆಗೆ ಹಾಗೂ ಬಲಭುಜಕ್ಕೆ ಸಾಮಾನ್ಯ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2015 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಮನೀಶ್‌ ಇವರು ಚೋಳ ಮಂಡಲಂ ಇನ್ವೆಸ್ಟ್‌ಮೆಂಟ್‌ ಮತ್ತು ಫೈನಾನ್ಸ್‌ ಕಂಪೆನಿಯ ಕುಂದಾಪುರ ಬ್ರಾಂಚ್‌ನ ಮೆನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಸಂಸ್ಥೆಯಿಂದ ಆಪಾದಿತ ಸಂದೇಶ ಶೇರಿಗಾರ್‌ ತಂದೆ: ವಾಸು ಶೇರಿಗಾರ್‌ ವಾಸ: ಡೋರ್‌ ನಂ: 3-78/1, ಮಾಣಿಬೆಟ್ಟು ಹೌಸ್‌, ಮಟ್ಟಾರು ಅಂಚೆ, ಶಿರ್ವ, ಉಡುಪಿ ತಾಲೂಕು ಇವರು ವಾಹನ ನಂಬ್ರ: ಕೆಎ 20 ಸಿ 5394 ನೇದನ್ನು ಖರೀದಿಸಲು ರೂಪಾಯಿ 6,65,600/- ನ್ನು ಸಾಲವಾಗಿ ಪಡೆದು, ಸಂಸ್ಥೆಯ ಹೈಪೋತಿಕೇಶನ್‌ ಟರ್ಮ್‌ ಮತ್ತು ಕಂಡಿಷನ್‌ನ್ನು ಉಲ್ಲಂಘಿಸಿ, ಮನೀಶ್‌ರವರ ಸಂಸ್ಥೆಗೆ ನಷ್ಟ ಮಾಡುವ ಹಾಗೂ ತಾನು ದುರ್ಲಾಭವನ್ನು ಪಡೆಯುವ ಉದ್ದೇಶದಿಂದ ಕಂಪೆನಿಯ ಆಕ್ಷೇಪಣಾ ಪತ್ರವನ್ನು ಪೋರ್ಜರಿ ಮಾಡಿ, ಸಹಿ ಮತ್ತು ಸೀಲನ್ನು ಹಾಕಿ, ಸುಳ್ಳು ದಾಖಲೆ ಮತ್ತು ಪೋರ್ಜರಿ ಮಾಡಿರುವ ದಾಖಲೆಗಳನ್ನು ಆರ್‌.ಟಿ.ಒ ಗೆ ನೀಡಿ ಆರ್‌.ಸಿ ಪುಸ್ತಕದಲ್ಲಿ Lien Entry ಯನ್ನು ತೆಗೆದು ಕಂಪೆನಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್  ಠಾಣೆ ಅಪರಾಧ ಕ್ರಮಾಂಕ 284/2015  ಕಲಂ: 420, 465, 468, 471, 473 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ:ಪಿರ್ಯಾದಿದಾರರಾದ ರಾಜೇಶ (30), ತಂದೆ: ಶಿವ, ವಾಸ: ಶ್ರೀ ದೇವಿ ಕೃಪಾ, ಮೊಗವೀರ ಪೇಟೆ, ಕೊಕ್ಕರ್ಣೆ ಅಂಚೆ, ಪೆಜಮಂಗೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಶಿವ (68) ಎಂವವರು ದಿನಾಂಕ: 22/07/2015 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಮನೆಯ ಬಳಿ ಇರುವ  ಗದ್ದೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ:31/07/2015 ರಂದು ಸಂಜೆ 6:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 41/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ:ಪಿರ್ಯಾದಿದಾರರಾದ ಆನಂದ ಗಾಣಿಗ (66), ತಂದೆ:ದಿವಂಗತ ಅಣ್ಣಪ್ಪ ಗಾಣಿಗ, ವಾಸ:ಮಂಜುನಾಥ ನಿಲಯ, ಮೂಡುಕೇರಿ, ಬಾರ್ಕೂರು ಅಂಚೆ, ಹನೇಹಳ್ಳಿ ಗ್ರಾಮ, ಉಡುಪಿ ತಾಲೂಕುರವರ ಮಗನಾದ ನವೀನ ಕುಮಾರ (35) ಎಂಬವರು 2 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅಲ್ಲದೇ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಕೆಲಸಕ್ಕೆ ಹೋಗದೇ ಇದ್ದು ಈ ಎಲ್ಲಾ ಕಾರಣಗಳಿಂದ  ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ:29/07/2015 ರ ಬೆಳಿಗ್ಗೆ  11:00  ಗಂಟೆಯಿಂದ  ದಿನಾಂಕ 01/08/2015 ರ ಬೆಳಿಗ್ಗೆ 10:00 ಗಂಟೆಯ ಮಧ್ಯದ ಅವಧಿಯಲ್ಲಿ  ಉಡುಪಿ ತಾಲೂಕು ಹನೇಹಳ್ಳಿ ಗ್ರಾಮದ ಕಂಪ ಎಂಬಲ್ಲಿರುವ ಆನಂದ ಶೆಟ್ಟಿರವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಆನಂದ ಗಾಣಿಗರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 42/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ 
                                       
  • ಕೋಟ: ಪಿರ್ಯಾದಿದಾರರಾದ ಕಿರಣ್ ಶೆಟ್ಟಿ(22) ತಂದೆ: ಚಂದ್ರಶೇಖರ ಶೆಟ್ಟಿ,ವಾಸ: ಮಾತೃಶ್ರೀ, ಜಾನುವಾರು ಕಟ್ಟೆ ಅಂಚೆ, ಬಿಲ್ಲಾಡಿ  ಗ್ರಾಮ, ಉಡುಪಿ ತಾಲೂಕು ಇವರ ತಮ್ಮ ಸುಜನ್ ಕುಮಾರ ಬಿ ಶೆಟ್ಟಿ (18) ಎಂಬುವವರು ಮಂಗಳೂರಿನ ಶ್ರೀದೇವಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದು ರಜೆಯಲ್ಲಿ ಉಡುಪಿ ತಾಲೂಕು ಬಿಲ್ಲಾಡಿ ಗ್ರಾಮದ ಜಾನುವಾರು ಕಟ್ಟೆಯ ಮನೆಗೆ ಬಂದವನು ದಿನಾಂಕ:25/07/2015 ರಂದು ಬೆಳಿಗ್ಗೆ 11:00 ಗಂಟೆಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದವನು ಕಾಲೇಜಿಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 176/2015 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಾಗಿರುತ್ತದೆ.

No comments: