Sunday, July 26, 2015

Daily Crimes Reported As on 26/07/2015 at 17:00 Hrs


ಅಪಘಾತ ಪ್ರಕರಣಗಳು
  • ಕಾಪು: ದಿನಾಂಕ 26/07/2015 ರಂದು ಪಿರ್ಯಾದಿದಾರರಾದ ಪಿ.ಜಯರಾಜ್ (44) ತಂದೆ: ಪಾಲ್ ಸತ್ಯ ಮೂರ್ತಿ ವಾಸ: ಸೇವಾಲಿಗುಡ್ಡೆ ಪೆರಮನೂರು ತೊಕ್ಕೊಟ್ಟು ಮಂಗಳೂರು ಇವರು ಬಸ್ಸು ನಂಬ್ರ ಕೆಎ 19 ಡಿ 2700 ನೇದನ್ನು ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾಯಸಿಕೊಂಡು ಬರುತ್ತಾ ಬೆಳಿಗ್ಗೆ 08:15 ಗಂಟೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮುಳೂರು ಗ್ರಾಮದ ನಾರಾಯಣ ಗುರು ಸಭಾ ಭವನದ ಎದುರು ರಾಷ್ಡ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಆರೋಪಿ ಚಾಲಕ ಟಿಎನ್ 32 ಎಬಿ 2732 ನೇ ಈಚರ್ ಕ್ಯಾಂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಪಿ.ಜಯರಾಜ್ ಚಲಾಯಿಸುತ್ತಿದ್ದ ಬಸ್ಸಿನ ಎಡಗಡೆಯಿಂದ ಬಸ್ಸನ್ನು ಓವರ್‌‌ಟೇಕ್ ಮಾಡಿ ಬಸ್ಸಿನ ಎದುರುಗಡೆ ಉಡುಪಿ ಕಡೆಗೆ ರಾಷ್ಡ್ರೀಯ ಹೆದ್ದಾರಿ 66 ರ ಎಡಬದಿಯಲ್ಲಿ ಹೋಗುತ್ತಿದ್ದ ಕೆಎ 14 ಇಹೆಚ್ 0260 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರನ್ನು ಲಾರಿಯು ಸ್ವಲ್ಪ ದೂರದವರೆಗೆ ದೂಡಿಕೊಂಡು ಹೋಗಿ, ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಮೋಟರ್ ಸೈಕಲ್ ಸವಾರ ಮತ್ತು ಸಹಸವಾರರಾದ ನಾಗರಾಜ ಹಾಗೂ ಮಲ್ಲಿಕಾರ್ಜುನ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಆರೋಪಿ ಈಚರ್ ಕ್ಯಾಂಟರ್ ಚಾಲಕನು ಲಾರಿಯನ್ನು ಸ್ವಲ್ಪ ಮುಂದೆ ನಿಲ್ಲಿಸಿ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 147/2015 ಕಲಂ 279, 304(ಎ)  ಐಪಿಸಿ ಮತ್ತು ಕಲಂ 134(ಎ)(ಬಿ) ಐ.ಎಮ್.ವಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 25/07/15 ರಂದು ಸಂಜೆ ಪಿರ್ಯಾದಿದಾರರಾದ ನಿತೇಶ್‌ (22) ತಂದೆ:ಸಂಜೀವ ಕುಲಾಲ್‌ ವಾಸ:ದೇವರ ಬೆಟ್ಟು ಪೆರ್ಡೂರು ಗ್ರಾಮ ಉಡುಪಿ ತಾಲೂಕು ಇವರು ತನ್ನ ಮಿತ್ರರೊಬ್ಬರನ್ನು  ಬೇಟಿಯಾಗಲು ಪೆರ್ಡೂರು ಗಾಂಧಿ ಶಾಲೆ ಬಳಿ ಹೋಗಿದ್ದು ಸಂಜೆ 04:15 ಗಂಟೆಗೆ ಕೆಎ 03 ಎಮ್‌ಸಿ 3754 ನೇ ಹುಂಡೈ ಸಾಂಟ್ರೋ ಕಾರನ್ನು ಅದರ ಚಾಲಕ ರಾಘವೇಂದ್ರ ಅಮೀನ್‌  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹಿರಿಯಡ್ಕ ಕಡೆಗೆ ಸೈಕಲ್‌ ಸವಾರಿ ಮಾಡಿಕೊಂಡು ಬರುತ್ತಿರುವ  ಸ್ವಸ್ತಿಕ್‌ ಎಂಬವನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಸ್ತಿಕ್‌ ಡಾಮಾರು ರಸ್ತೆಗೆ ಬಿದ್ದು ಎಡಗೈ ತಟ್ಟಿನ ಬಳಿ ತೀವ್ರ ತರದ ಜಜ್ಜಿದ ಗಾಯ ಹಾಗೂ ಬೆನ್ನಿನ ಬಳಿ ತರಚಿದ ಗಾಯ, ಸೊಂಟದ ಬಳಿ ತೀವ್ರ ತರದ ಗುದ್ದಿದ ಓಳನೋವು ಆಗಿದ್ದು ಬಾಲಕ ಸ್ವಸ್ತಿಕ್‌ ನನ್ನು ಮಣಿಪಾಲದ ಕೆಎಂಸಿ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 79/2015  U/s 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮನುಷ್ಯ ಕಾಣೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಜ್ಯೋತಿ (32) ಗಂಡ: ಎಮ್‌ಆರ್ ರಂಗನಾಥ, ವಾಸ: ಮನೆ ನಂ 3-980 ಪೈ ನಿವಾಸ ಕುಕ್ಕಿಕಟ್ಟೆ 76 ಬಡಗುಬೆಟ್ಟು ಗ್ರಾಮ ಉಡುಪಿ ಇವರ ಗಂಡ ಎಮ್‌ಆರ್ ರಂಗನಾಥ ಎಂಬವರು ದಿನಾಂಕ 09/07/2015 ರಂದು ಬೆಳಗ್ಗೆ  10:30 ಗಂಟೆಗೆ ಮನೆಯಿಂದ ಕೆಲಸದ ನಿಮಿತ್ತ ಶಿವಮೊಗ್ಗ ಮತ್ತು ದಾವಣಗೆರೆಗೆ ಹೋಗಿ ಬರುತ್ತೇನೆಂದು ಹೋದವರು ಇದುವರೆಗೆ ವಾಪಾಸು ಬಂದಿರುವುದಿಲ್ಲ, ಮನೆಯಿಂದ ಹೊರಟು ಹೋದ 3 ದಿನಗಳ ನಂತರ ಜ್ಯೋತಿ ರವರ ಮೊಬೈಲ್‌ಗೆ ಕರೆ ಮಾಡಿ ಎರಡು ದಿನಗಳಲ್ಲಿ ಮನೆಗೆ ಬರುವುದಾಗಿ ತಿಳಿಸಿರುತ್ತಾರೆ, ಆದರೆ ಮನೆಗೆ ವಾಪಾಸು ಬಂದಿರುವುದಿಲ್ಲ. ಎಮ್‌ಆರ್ ರಂಗನಾಥ ರವರ ದೂರವಾಣಿ ಸಂಖ್ಯೆ 7353590157 ಗೆ ಕರೆ ಮಾಡಿದಲ್ಲಿ ಕರೆಗಳು ಸ್ಥಗಿತಗೊಂಡಿರುತ್ತದೆ, ಈ ಬಗ್ಗೆ ಉಡುಪಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 174/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ 
  • ಶಂಕರನಾರಾಯಣ: ದಿನಾಂಕ 24/07/2015 ರಂದು 21:00 ಗಂಟೆಗೆ  ಕುಂದಾಪುರ ತಾಲೂಕಿನ  ಅಂಪಾರು ಗ್ರಾಮದ  ಮೂಡುಬಗೆ ಗಣಪತಿ ದೇವಸ್ಥಾನದ  ಬಳಿ ಪಿರ್ಯಾದಿದಾರರಾದ ನಿತೇಶ್‌ (22) ತಂದೆ:ಸಂಜೀವ ಕುಲಾಲ್‌ ವಾಸ:ದೇವರ ಬೆಟ್ಟು ಪೆರ್ಡೂರು ಗ್ರಾಮ ಉಡುಪಿ ತಾಲೂಕು ಇವರು ಮನೆಯ ಕಡೆ ನಡೆದುಕೊಂಡು  ಹೋಗುತ್ತಿರುವಾಗ  ಆರೋಪಿತರಾದ 1)ಶಂಕರ, 2)ಹರೀಶ ಮತ್ತು ಇತರರು  ಹಳೆಯ ದ್ವೇಷದಿಂದ  ನಿತೇಶ್‌ರವರನ್ನು  ಅಡ್ಡಗಟ್ಟಿ  ಮರದ ದೊಣ್ಣೆಯಿಂದ  ಹಾಗೂ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 162/2015 ಕಲಂ: 341, 323, 324 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

No comments: