Sunday, July 26, 2015

Daily Crimes Reported As on 26/07/2015 at 07:00 Hrs


ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ:ದಿನಾಂಕ:25/07/2015 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಕೋಣಿ ಹಾಲು ಡೈರಿಯ  ಬಳಿ  ರಾಜ್ಯ ರಸ್ತೆಯಲ್ಲಿ, ಆಪಾದಿತ ಪ್ರದೀಪ ಎಂಬವನು KA 02 HP 7491  ನೇ ಬೈಕನ್ನು ಕುಂದಾಪುರದಿಂದ ಸಿದ್ದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, ಎದುರುಗಡೆಯಿಂದ ಬಂದ ಬಸ್ಸನ್ನು ನೋಡಿ ಬೈಕನ್ನು ರಸ್ತೆಯ ತೀರ ಎಡಬದಿಗೆ ಚಲಾಯಿಸಿ, ಅದೇ ದಿಕ್ಕಿನಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಡುರ (50) ಎಂಬವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮುಡುರರವರ ಎಡಕಾಲಿನ ಕೋಲು ಕಾಲಿಗೆ, ಎಡ ಕೈ ಹಾಗೂ ಬಲ ಕೈಗೆ ಒಳ ನೋವು ಹಾಗೂ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಸತೀಶ್ ಬಿ (40) ತಂದೆ:ಬಸವ ನಾಯ್ಕ, ವಾಸ:ಶಾಲೆ ರಸ್ತೆ, ಕೋಣಿ ಗ್ರಾಮ, ಕುಂದಾಪುರ  ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 88/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
  • ಬ್ರಹ್ಮಾವರ:ದಿನಾಂಕ:23/07/2015 ರಂದು ಬೆಳಗ್ಗೆ 08:00 ಗಂಟೆಗೆ ಉಡುಪಿ ತಾಲೂಕು ಹಂದಾಡಿ ಗ್ರಾಮದ ಆಕಾಶವಾಣಿ ಹಿಂದೆ ಇರುವ ಪಿರ್ಯಾದಿದಾರರಾದ ಮೋಹನ (56) ತಂದೆ:ಹೆಚ್. ನಾರಾಯಣ ಶೆಟ್ಟಿ ವಾಸ:5-19, ಆಕಾಶವಾಣಿ ಹಿಂಬದಿ ಹಂದಾಡಿ ಗ್ರಾಮ, ಉಡುಪಿ ತಾಲೂಕುರವರ ಮನೆಯಿಂದ ಮೋಹನರವರ ಮಗನಾದ ಅತಿಥ್‌.ಎಮ್‌ (19) ಎಂಬವರು ಮನೆಯಿಂದ ತಾನು ವ್ಯಾಸಂಗ ಮಾಡುತ್ತಿದ್ದ ಎಸ್‌.ಎಮ್‌.ವಿ.ಟಿ ಕಾಲೇಜು ಬಂಲ್‌ಗೆ ಹೋಗುವುದಾಗಿ ಹೇಳಿ ಹೋದವರು ಈ ತನಕ  ವಾಪಸ್ಸು  ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.ಈ ಬಗ್ಗೆ ಮೋಹನರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 148 /15 ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: