Thursday, July 30, 2015

Daily Crime Reports As On 30/07/2015 At 17:00 Hrs



ಮಟ್ಕಾ ಜುಗಾರಿ ಪ್ರಕರಣ
  • ಉಡುಪಿ: ದಿನಾಂಕ: 30/07/2015 ರಂದು ಶ್ರೀಕಾಂತ್‌ ಕೆ ಪೊಲೀಸ್‌ ವೃತ್ತ ನಿರೀಕ್ಷಕರು ಉಡುಪಿ ವೃತ್ತರವರಿಗೆ ದೊರತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಿನಾಂಕ: 30/07/2015 ರಂದು ಬೆಳಿಗ್ಗೆ 10:40 ಗಂಟೆಗೆ ಉಡುಪಿ ಮೂಡನಿಡಂಬೂರು ಗ್ರಾಮದ ಬಿ.ಎಸ್‌ಎನ್‌ಎಲ್‌‌ ಕಛೇರಿಯ ಬಳಿ ಕಾಂಪೌಂಡ್‌ನಿಂದ ಹೊರಗೆ ರಸ್ತೆಯಲ್ಲಿ  ಸಾರ್ವಜನಿಕ ಸ್ದಳದಲ್ಲಿ   ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿದ್ದು ಸದಾಶಿವ ಶೆಟ್ಟಿ (28) ತಂದೆ: ಸಂಜೀವ ಶೆಟ್ಟಿ ವಾಸ: ಹನುಮಾನ್‌ ಗ್ಯಾರೇಜ್‌ ಬಳಿ ಚಿಟ್ಪಾಡಿ 76 ಬಡಗುಬೆಟ್ಟು ಎಂಬವನನ್ನು ವಶಕ್ಕೆ ಪಡೆದು ಅವರಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂ. 760/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬರೆಯಲು ಬಳಸಿದ ಬಾಲ್‌ ಪೆನ್‌-1 ನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 175/2015 ಕಲಂ :  78(1)(111) ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಮಣಿಪಾಲ:ಪಿರ್ಯಾದಿ ವಿನಯ ಆರ್‌ ಪದಕಿ, ತಂದೆ:ರಾಘವೇಂದ್ರ ರಾವ್‌ ಪದಕಿ, ವಾಸ: ನಂಬ್ರ 524, ಪಿ.ಜೆ ಬಡಾವಣೆ, 5ನೇ ಮೈನ್‌, ದಾವಣೆಗೆರೆ ಇವರು ದಿನಾಂಕ 30/07/15 ರಂದು ಇನ್ನೊವಾ ಕಾರು ನಂಬ್ರ ಕೆಎ 02 ಎಎ 7158 ನೇದನ್ನು ಮಣಿಪಾಲ ಆಸ್ಪತ್ರೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯ ಟ್ರೋಮ ಸೆಂಟರ್‌‌ ಎದುರು ತಲುಪುವಾಗ ಮಧ್ಯಾಹ್ನ 1:30 ಗಂಟೆಗೆ ಹಿಂಬದಿಯಿಂದ ಕೆಎ 20 1615 ನೇ ಟಿಪ್ಪರ್‌ ಲಾರಿಯನ್ನು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ. ಪರಿಣಾಮ ಪಿರ್ಯಾದಾರರ ಕಾರಿನ ಹಿಂಭಾಗ ಪೂರ್ಣ ಜಖಂಗೊಂಡು ಹಾಗೂ ಬಲಭಾಗದ ರೂಫ್‌, ಎ.ಸಿ ಹಾಗೂ ಅದರ ಕವರ್‌ ಜಖಂಗೊಂಡಿದ್ದಾಗಿರುತ್ತದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 149/15 ಕಲಂ 279 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ 
  • ಕಾರ್ಕಳ: ಪಿರ್ಯಾದಿ ಪ್ರವೀಣ್ ಪೂಜಾರಿ ಇವರ ಚಿಕ್ಕಮ್ಮನ ಮಗಳು ಮಂಗಳಾಳಿಗೆ  ದಿನಾಂಕ: 22/04/2015  ರಂದು ವರಂಗ  ವಾಸಿ ಸತೀಶ  ಎಂಬವರೊಂದಿಗೆ ವಿವಾಹವಾಗಿದ್ದು, ವಿವಾಹದ ಬಳಿಕ ಆಕೆ ತನ್ನ ಗಂಡನ ಮನೆಯಲ್ಲಿರುವ ಸಮಯ ಯಾವುದೋ  ಭೂತ ಪ್ರೇತ ಭಾದೆಯ ಮಾನಸಿಕ ಖಾಯಿಲೆಯಿಂದ ನೊಂದಿದ್ದವಳು ದಿನಾಂಕ: 21/07/2015 ರಂದು ತನ್ನ ತವರು ಮನೆಯಾದ  ಕಾರ್ಕಳ  ತಾಲೂಕು ನಿಟ್ಟೆ ಗ್ರಾಮದ ಆಚೊಟ್ಟು  ದರ್ಖಾಸು ಎಂಬಲ್ಲಿಗೆ   ಬಂದಿದ್ದಳು . ತಾಯಿ ಮನೆಯಲ್ಲಿರುವ ಸಮಯ ಆಕೆ ತನಗಿರುವ ಮಾನಸಿಕ ಖಾಯಿಲೆಯಿಂದ  ಮನನೊಂದು ದಿನಾಂಕ: 27/07/2015 ರಂದು ಬೆಳಿಗ್ಗೆ 6:30 ಗಂಟೆಯ ಮೊದಲು ಮನೆಯಲ್ಲಿ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಯಾವುದೋ ಕೀಟನಾಶಕದ ದ್ರಾವಣವನ್ನು ಕುಡಿದು ಅಸ್ವಸ್ಥಗೊಂಡಿದ್ದು ಆಕೆಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಆಕೆಯು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30/07/2015 ರಂದು ಬೆಳಿಗ್ಗೆ 08:05 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್ ಠಾಣಾ ಯುಡಿಆರ್ ನಂಬ್ರ 19/15 ಕಲಂ 174 (ಸಿ)  ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: