Tuesday, July 28, 2015

Daily Crime Reports As On 28/07/2015 At 19:30 Hrsಅಪಘಾತ ಪ್ರಕರಣ 
  • ಬ್ರಹ್ಮಾವರ: ದಿನಾಂಕ 27/07/2015 ರಂದು ಸಂಜೆ 6:45 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಹನೇಹಳ್ಳಿ ಗ್ರಾಮದ, ಬಾರ್ಕೂರು ಕಾಲೇಜು ಬಳಿ ಆರೋಪಿ ಅನಿಲ್ ತನ್ನ ಕೆಎ 20 ಎನ್ 6814 ನೇ ನಂಬ್ರದ ಕ್ರೇನ್‌ನನ್ನು ಮಂದಾರ್ತಿ ಕಡೆಯಿಂದ ಬಾರ್ಕೂರು ಕಡೆಗೆ ರಸ್ತೆಯ ಮಧ್ಯದಲ್ಲಿ  ಚಲಾಯಿಸುತ್ತಿದ್ದವನು ಒಮ್ಮೆಲೆ ನಿರ್ಲಕ್ಷತನದಿಂದ ತೀರ ಎಡಕ್ಕೆ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಗವಾನ್ (50)  ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ , ಭಗವಾನ್‌ ರವರು ರಸ್ತೆಗೆ ಬಿದ್ದು ಎಡಕೈ ಮೊಣಗಂಟಿನ ಕೆಳಗಡೆ ತೀವ್ರ ರಕ್ತಗಾಯವಾಗಿದ್ದು, ಮುಖದ ಎಡಭಾಗಕ್ಕೆ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 149/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: 28/07/2015 ರಂದು ಸಮಯ ಮಧ್ಯಾಹ್ನ 02:00 ಗಂಟೆಗೆ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನದ ಸ್ವಾಗತ ಗೋಪುರದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ರಘು ಎಂಬವರು KA 20 C 8863  ನೇ ಟಾಟಾ ಗೂಡ್ಸ್ ವಾಹನವನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪೂರ್ವ ಬದಿಯಿಂದ ರಾಷ್ಟ್ರೀಯ ಹೆದ್ದಾರಿ 66 ರಸ್ತೆಗೆ  ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೊಲ್ಲೂರು ಕಡೆಯಿಂದ ಉಡುಪಿ ಕಡೆಗೆ ಪಿರ್ಯಾದಿದಾರರಾದ ಷಣ್ಮುಖಪ್ಪ (37) ತಂದೆ: ಚಂದ್ರಪ್ಪ ವಾಸ: ನಂದನ ಹೊಸೂರು ಗ್ರಾಮ, ಹೆಚ್.ಡಿ ಪುರ ಅಂಚೆ, ಹೊಳಲ್ ಕೆರೆ ತಾಲೂಕು , ಚಿತ್ರದುರ್ಗ ಇವರು ಕೆಂಚಪ್ಪರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 16 W 5526 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರಪ್ಪ ಹಾಗೂ ಸಹ ಸವಾರ ಕೆಂಚಪ್ಪರವರು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 91/2015  ಕಲಂ 279,337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   No comments: