Tuesday, June 09, 2015

Daily Crimes Reported as On 09/06/2015 at 17:00 Hrs

ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ:ಈ ದಿನ ದಿನಾಂಕ 09/06/2015 ರಂದು ಬೆಳಿಗ್ಗೆ ಸುಮಾರು 7:45 ಗಂಟೆಗೆ ಕುಂದಾಪುರ ತಾಲೂಕು  ಕಾಳಾವರ  ಗ್ರಾಮದ  ಕಾಳಾವರ ಬಸ್‌ ಸ್ಟಾಪ್‌‌  ಬಳಿ  ರಸ್ತೆಯಲ್ಲಿ,  ಆಪಾದಿತ   ನಿಂಗಣ್ಣ  ಬಿರಾದರ್  ಎಂಬವರು KA 20 B 9833 ನೇ ಟಿಪ್ಪರ್ ಲಾರಿಯನ್ನು ವಕ್ವಾಡಿ ಅಡ್ಡ ರಸ್ತೆಯಿಂದ ಹುಣ್ಸೆಮಕ್ಕಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಮುಖ್ಯ ರಸ್ತೆಗೆ ಬಂದು ಹುಣ್ಸೆಮಕ್ಕಿ ಕಡೆಯಿಂದ  ಕೋಟೇಶ್ವರ ಕಡೆಗೆ ಆಸಿಪ್ ಕೋಯ ಎಂಬವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ  KA 20 H 7796 ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಆಸಿಪ್ ಕೋಯ ಸ್ಕೂಟರ್ ಸಮೇತ  ರಸ್ತೆಯಲ್ಲಿ  ಬಿದ್ದು  ಅವರ ಎಡಕಾಲಿನ  ಮುಂಗಾಲು ಗಂಟಿಗೆ, ಮುಂಗಾಲು ಗಂಟಿನ  ಕೆಳಗೆ  ಕೋಲು ಕಾಲಿಗೆ ಮೂಳೆ  ಮುರಿತದ  ಗಾಯ, ಕುತ್ತಿಗೆ  ಬಳಿ,  ಮೈ ಕೈ ಗೆ  ರಕ್ತಗಾಯ  ಹಾಗೂ  ಒಳ ನೋವು ಆಗಿ ಅಂಕದಕಟ್ಟೆ  ಸರ್ಜನ್  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ನಿಸಾರ್  ಅಹಮ್ಮದ್ (45) ತಂದೆ:ಮೈದಿನ್ ಸಾಹೇಬ್, ವಾಸ:ಜೆ.ಎಂ ರಸ್ತೆ, ದರ್ಗಾ ಕಂಪೌಂಡ್, ಕಸಬಾ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 67/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣಗಳು
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿದಾರರಾದ ನೇಮು ಶೆಟ್ಟಿ (61), ತಂದೆ:ದಿವಂಗತ ಊವಯ್ಯ ಶೆಟ್ಟಿ, ವಾಸ:ದುರ್ಗಾಮನೆ, ಕೋರಿಬೆಟ್ಟು, ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಮುಲ್ಲಡ್ಕ ಗ್ರಾಮ, ಅಂಚೆ ಮುಂಡ್ಕೂರು, ಕಾರ್ಕಳ ತಾಲೂಕುರವರ ಅಕ್ಕನ ಗಂಡ ಸುಮಾರು 85 ವರ್ಷ ಪ್ರಾಯದ ಶ್ಯಾಮ ಶೆಟ್ಟಿ ಎಂಬವರು ದಿನಾಂಕ:30/05/2015 ರಂದು ಬೆಳಿಗ್ಗೆ 9:00 ಗಂಟೆಗೆ ತಾನು ವಾಸ್ತವ್ಯ ಇರುವ ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ  ದುರ್ಗಾಮನೆ ಎಂಬಲ್ಲಿಂದ  ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ  ಕಾಣೆಯಾಗಿರುತ್ತಾರೆ.ಕಾಣೆಯಾದ ಶ್ಯಾಮ ಶೆಟ್ಟಿಯವರ ಚಹರೆ-ಎಣ್ಣೆ ಕಪ್ಪು ಮೈಬಣ್ಣ, 5’,7” ಎತ್ತರ, ಬಿಳಿ ಕೂದಲು, ಬಿಳಿ ಕಪ್ಪು ಗೆರೆಯ ಅಂಗಿ , ಗೆರೆಗಳಿರುವ ಚಡ್ಡಿ , ಬಿಳಿ ವೇಸ್ಟಿ, ಮೈಮೇಲೆ ಮಚ್ಚೆ ಇರುತ್ತದೆ. ಈ ಬಗ್ಗೆ  ನೇಮು ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 103/2015 ಕಲಂ ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಪಿರ್ಯಾದಿದಾರರಾದ ಶ್ರೀಮತಿ ಕೀರ್ತಿ (22) ಗಂಡ:ಕುಮಾರ ಗೌಡ ವಾಸ:ಮೀನಾ ಅನಮೋಲಾ ಅಪಾರ್ಟ್‌ಮೆಂಟ್‌, ಪ್ಲಾಟ್ ನಂಬ್ರ 202 ಶಾಂತಿನಗರ ವಾರಂಬಳ್ಳಿ ಗ್ರಾಮ ಉಡುಪಿ ತಾಲೂಕುರವರ ಗಂಡನಾದ ಕುಮಾರ ಗೌಡ (33) ಎಂಬವರು ದಿನಾಂಕ:07/06/2015 ರಂದು 15:00 ಗಂಟೆಯಿಂದ ಮನೆ ಬಿಟ್ಟು ಹೋದವರು ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕವಾಗಿ ನೊಂದು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಕೀರ್ತಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 110/15 ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹೆಬ್ರಿ:ಪಿರ್ಯಾದಿದಾರರಾದ ಚಂದು ನಾಯ್ಕ್ (60) ತಂದೆ:ದಿವಂಗತ ಬೋಗ್ರ ನಾಯ್ಕ್‌, ವಾಸ:ರಾಗಿಹಕ್ಲು, ಹೆಬ್ರಿ ಗ್ರಾಮ, ಕಾರ್ಕಳ ತಾಲೂಕುರವರ ಮಗನಾದ ಪ್ರಕಾಶ (31) ಎಂಬವರು ಸುಮಾರು 3 ವರ್ಷಗಳಿಂದ ಹೆಬ್ರಿಯಲ್ಲಿನ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ನಿತ್ಯ ಬೆಳಿಗ್ಗೆ 7:30 ಗಂಟೆಗೆ ತನ್ನ ಕೆ.ಎ.20 ಇ.ಬಿ 4826 ನೇ ಮೋಟಾರ್‌ ಸೈಕಲ್‌ನಲ್ಲಿ ಅಂಗಡಿಗೆ ಹೋಗಿ ಮಧ್ಯಾಹ್ನ ಮನೆಗೆ ಊಟಕ್ಕೆ ಹೋಗಿ-ಬಂದು, ರಾತ್ರಿ 9:00 ಗಂಟೆಯ ಒಳಗೆ ಮನೆಗೆ ಹೋಗುತ್ತಿರುವುದಾಗಿದ್ದು, ದಿನಾಂಕ:08/೦6/2015 ರಂದು ಬೆಳಿಗ್ಗೆ 7:30 ಗಂಟೆಗೆ ಪ್ರಕಾಶರವರು ತನ್ನ ಮೋಟಾರ್‌ ಸೈಕಲ್‌ನಲ್ಲಿ ಎಂದಿನಂತೆ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಹೋದವರು ಅಂಗಡಿಗೂ ಹೋಗದೇ, ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಚಂದು ನಾಯ್ಕ್‌ರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 66/15 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಇತರ ಪ್ರಕರಣ
  • ಹಿರಿಯಡ್ಕ:ಈ ದಿನ ದಿನಾಂಕ:09/06/15 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರಾದ ಎಂ. ರಫೀಕ್‌, ಪಿ.ಎಸ್‌.ಐ, ಹಿರಿಯಡ್ಕ ಪೊಲೀಸ್‌ ಠಾಣೆರವರಿಗೆ ಗ್ರಾಮಸ್ಥರೋರ್ವರು ಹಿರಿಯಡ್ಕ ಬಸ್‌ ಸ್ಟ್ಯಾಂಡ್‌ನಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಇರುವುದಾಗಿ ದೂರವಾಣಿ ಮುಖೇನ ಮಾಹಿತಿ ನೀಡಿದ ಮೇರೆಗೆ ಪಿ.ಎಸ್‌.ಐರವರು ಸಿಬ್ಬಂದಿಯವರೊಂದಿಗೆ  ಸ್ಥಳಕ್ಕೆ ಧಾವಿಸಿ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಮ್ಮ ಹೆಸರು. ವಿಳಾಸ. ಉದ್ಯೋಗದ ಬಗ್ಗೆ ಸರಿಯಾದ ವಿವರಣೆ ನೀಡದೆ ತಡವರಿಸಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಠಾಣೆಗೆ ತಂದು ವಿಚಾರಿಸಿದಾಗ, ಅವರ ವಶದಲ್ಲಿ ಕರಗಿಸಿದ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳು ಕಂಡು ಬಂದಿದ್ದು, ಅವುಗಳನ್ನು ಹಾಸನದಲ್ಲಿ ಕಳವು ಮಾಡಿ ತಾವು ಆರು ಜನ ಹಂಚಿಕೊಂಡಿದ್ದು, ಉಳಿದ ಮೂವರು ಉಡುಪಿಯಲ್ಲಿರುವುದಾಗಿಯೂ ಅವುಗಳನ್ನು ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ ಮೇರೆಗೆ ಅವರನ್ನು ದಸ್ತಗಿರಿ ಮಾಡಿ, ಅವರ ವಶದಲ್ಲಿ ದೊರೆತ ಒಟ್ಟು 44.250 ಗ್ರಾಮ್‌ ತೂಕದ ಒಟ್ಟು 1,02,00-00 ರೂಪಾಯಿ ಮೌಲ್ಯದ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 63/15 ಕಲಂ 41 (1) (ಡಿ) ಸಿಆರ್‌ಪಿಸಿ ಜೊತೆಗೆ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    

No comments: