Tuesday, June 09, 2015

Daily Crime Reports As on 09/06/2015 at 19:30 Hrsಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 09/06/2015 ರಂದು ಬೆಳಿಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರು  ಯಶೋಧರ ಭಂಡಾರಿಯವರ ಮನೆಗೆ ಹೋಗುವ ದಾರಿ ಬಳಿ ಮೋಟಾರ್ ಸೈಕಲ್ ನಂಬ್ರ KA 20 EC 3848 ನೇಯದನ್ನು ಅದರ ಸವಾರ ಶೇಖರ ಪೂಜಾರಿ ಎಂಬವರು ಧರ್ಮಸ್ಥಳದಿಂದ ಕಾರ್ಕಳಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಈದು ಕಡೆಯಿಂದ ಬಜಗೋಳಿ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಯತನದಿಂದ ಚಲಾಯಿಸಿ ರಸ್ತೆಯ ತೀರ ಎಡಬದಿಗೆ ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಂದರ ಪೂಜಾರಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ನೆಲಕ್ಕೆ ಬಿದ್ದು ಮುಖಕ್ಕೆ ತರಚಿದ ಮತ್ತು ಬಲಕೈಗೆ ಜಖಂಗೊಂಡಿರುವ ರಕ್ತಗಾಯವಾಗಿರುತ್ತದೆ. ಅಪಘಾತಕ್ಕೆ ಕಾರಣವಾದ ಮೋಟಾರ್ ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ ಎಂಬುದಾಗಿ ಸದಾನಂದ ಎನ್ (33),ತಂದೆ: ಗೋವಿಂದ ನಾಯಕ್, ವಾಸ: ವಿಜಯಾ ಬ್ಯಾಂಕ್ ಬಳಿ ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104 /2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: