Monday, June 08, 2015

Daily Crime Reports As on 08/06/2015 at 19:30 Hrsಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 07/06/2015 ರಂದು ರಾತ್ರಿ 11:45 ಗಂಟೆಗೆ ಫಿರ್ಯಾಧಿದಾರರಾದ ಮೆಹಬೂಬ್, ಪ್ರಾಯ 28, ತಂದೆ ಅಮಿನ್ ಸಾಬ್, ವಾಸ: ಕಜೆ ರೋಡ್, ಕುಕ್ಕುಂದೂರು ಕಾರ್ಕಳ ತಾಲೂಕು ರವರು ತನ್ನ ಕೆ.ಎ 20 ಇಸಿ-9988 ನೇ ಮೋಟಾರು ಸೈಕಲಿನಲ್ಲಿ ಶ್ರೀಮತಿ ಬಿಬಿಜಾನ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಬೈಲೂರು ಅರ್ಚನಾ ಬಾರ್‌ನ ಎದುರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುತ್ತಿರುವಾಗ ರಮೇಶ್ ಎಂಬವರು ತನ್ನ KA-19-B-7127 ನೇ ನಂಬ್ರದ ಕಾರನ್ನು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರ ಎದುರಿನಿಂದ ಹೋಗುತ್ತಿದ್ದ ಪಿರ್ಯಾದಿದಾರರ ಸಂಬಂದಿಕರಾದ ಅಲ್ಲಾಭಕ್ಷಿಯವರು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ KA-20-EH-9873 ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದು ನಂತರ ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಕೆ.ಎ 20 ಇಸಿ-9988  ಮೋಟಾರ್ ಸೈಕಲ್ಲಿಗೂ ಸಹಾ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾರೆ. ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಮೂಳೆ ಮುರಿತದ ಗಾಯ, ಬಲಕೈ ಬಳಿ ರಕ್ತ ಗಾಯ ಹಣೆಗೆ ಗುದ್ದಿದ ಗಾಯವಾಗಿರುತ್ತದೆ. ಸಹ ಸವಾರರಾದ ಬಿಬಿಜಾನ್‌ ರವರಿಗೆ ಬಲಕೈ ಗಂಟಿನ ಬಳಿ,ಹಣೆ ಮತ್ತು ಸೊಂಟದ ಬಳಿ ಗುದ್ದಿದ ಗಾಯ, ಅಲ್ಲಾಭಕ್ಷಿರವರಿಗೆ ಬಲಕಾಲ ಗಂಟು,ಬಲಕೈ ಗಂಟು ಮತ್ತು ಎದೆಗೆ ಗುದ್ದಿದ ಗಾಯ ಹಾಗೂ ಇಮಾಮ್ ರವರಿಗೆ ತುಟಿ ಮತ್ತು  ಎಡ ಕೈ ನಡು ಬೆರಳಿಗೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಮೆಹಬೂಬ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: