Thursday, May 21, 2015

Daily Crime Reports As on 21/05/2015 at 17:00 Hrs

ಕಳವು ಪ್ರಕರಣ
  • ಮಣಿಪಾಲ: ದಿನಾಂಕ: 21.05.2015ರಂದು  14:00ಗಂಟೆಗೆ ಪ್ರಮೋದ್‌ ಶೆಟ್ಟಿ, ತಂದೆ:ಅಚ್ಚಣ್ಣ ಶೆಟ್ಟಿ, ವಾಸ: ಆಯುಷ್‌ ನಿಲಯ, ಗರಡೆಮನೆ, ಕೊಡವೂರು ಅಂಚೆ, ಉಡುಪಿ ಇವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನಂತೆ ದಿನಾಂಕ 17.05.15 ರಂದು ಮತ್ಸಗಂದಾ ರೈಲಿನಲ್ಲಿ ಮುಂಬಯಿಂದ ಉಡುಪಿಗೆ ಪ್ರಯಾಣ ಹೊರಟು, ದಿನಾಂಕ 18.05.15ರಂದು ಉಡುಪಿ ರೈಲು ನಿಲ್ದಾಣ ಎಂದು ತಿಳಿದು ಬಾರ್ಕೂರು ರೈಲು ನಿಲ್ದಾಣದಲ್ಲಿ ಸರಿಯಾಗಿ ಗೊತ್ತಾಗದೇ ಎಲ್ಲಾ ಲಾಗೇಜ್‌ಗಳನ್ನು ಇಳಿಸಿ ಸುಮಾರು ಬೆಳಿಗ್ಗೆ 05:45 ಗಂಟೆಗೆ ಇಳಿದಿರುತ್ತಾರೆ. ಬಳಿಕ ಕೂಡಲೇ ಅರಿವಾಗಿ ಅದೇ ರೈಲಿನಲ್ಲಿ ಹತ್ತಿದ್ದು, ಆಸಮಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 4 ಜನ ಅಪರಿಚತರು ಪಿರ್ಯಾದಿದಾರರ ಬ್ಯಾಗ್‌ಗಳನ್ನು ಎತ್ತಿ ರೈಲಿನೊಳಗೆ ಹಾಕಿ ಅವರ ಪೈಕಿ ಒಬ್ಬನು ಪಿರ್ಯಾದಿದಾರರು ತಂದಿದ್ದ ಕೆಂಪು ಬಣ್ಣದ ಬ್ಯಾಗಿನ ಬಳಿ ನಿಂತುಕೊಂಡಿದ್ದನು. ನಂತರ ಉಡುಪಿ ಕಡೆಗೆ ಪ್ರಯಾಣ ಮಾಡಿ ಬೆಳಿಗ್ಗೆ 6:20 ಗಂಟೆಗೆ ರೈಲಿನಿಂದ ಇಳಿದು ಮನೆಯ ಕಡೆಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಮನೆಗೆ ಹೋಗಿ ಕೆಂಪು ಬಣ್ಣದ ಬ್ಯಾಗ್‌ನ್ನು ನೋಡಿದಾಗ ಬ್ಯಾಗಿನ ಒಂದು ಬದಿ ಕತ್ತರಿಸಿ ಬ್ಯಾಗಿನ ಒಳಗಿದ್ದ ಒಟ್ಟು 279 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ವಿಚಾರ ತಿಳಿದಿರುವುದಾಗಿದೆ.  ಯಾರೋ ಕಳ್ಳರು ಬಾರ್ಕೂರು ರೈಲು ನಿಲ್ದಾಣದಿಂದ ಉಡುಪಿ ರೈಲು ನಿಲ್ದಾಣ ತಲುಪುವ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಬ್ಯಾಗನ್ನು ಕತ್ತರಿಸಿ ಅದರ ಒಳಗಿದ್ದ ಸುಮಾರು 6,50,000/- ಮೌಲ್ಯದ ಒಟ್ಟು 279 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2015 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ ನಗರ: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಶಾಲೋಮ್‌ ಕಂಪನ ಮನೆ ನಿವಾಸಿ ಫಿರ್ಯಾಧಿ ಸ್ಟ್ಯಾನಿ ಸಲ್ದಾನಾ, ಪ್ರಾಯ 51 ವರ್ಷ, ತಂದೆ ದಿವಂಗತ ಫ್ರಾನ್ಸಿಸ್‌ ಸಲ್ದಾನಾ, ವಾಸ ಶಾಲೋಮ್‌ ಕಂಪನ ಮನೆ, ಬೈಲೂರು ಅಂಚೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ಇವರ ವಾಸ್ತವ್ಯದ ಮನೆಗೆ ದಿನಾಂಕ 20/05/2015 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ 21/05/2015 ರ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ತೆಗೆದು ಒಳ ಪ್ರವೇಶಿಸಿ ಮನೆಯ ಒಳಗಿನ ಕೋಣೆಯ ಗೋದ್ರೇಜ್‌ ಕಪಾಟಿನಲ್ಲಿಟ್ಟಿದ್ದ ಸುಮಾರು 9,000/- ರೂಪಾಯಿ ನಗದು ಮತ್ತು 1). ಸುಮಾರು 8 ಗ್ರಾಂ ತೂಕದ PT ಎಂದು ಬರೆದಿರುವ ಉಂಗುರ, 2). ಸುಮಾರು 7 ಗ್ರಾಂ ತೂಕದ ಕ್ರಿಶ್ಚಿಯನ್ನರ + ಎಂಬ ಗುರುತು ಇರುವ ಚಿನ್ನದ ಉಂಗುರ ಹಾಗೂ 3). ಸುಮಾರು 5 ಗ್ರಾಂ ತೂಕದ ಪ್ಲೈನ್‌ ಉಂಗುರ ಸೇರಿ ಸುಮಾರು 20 ಗ್ರಾಂ ತೂಕದ ಸುಮಾರು 50,000/- ರೂಪಾಯಿ ಮೌಲ್ಯದ ಚಿನ್ನದ 3 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2015. ಕಲಂ 457, 380 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ:
  • ಬ್ರಹ್ಮಾವರ: ದಿನಾಂಕ ; 20/05/2015 ರಂದು  ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅರುಣ್ ಬಿ . ನಾಯಕ್ ರವರು ಹಾಗೂ ಕಛೇರಿಯ ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಖಚಿತ ವರ್ತಮಾನದ ಮೇರೆಗೆ ಉಡುಪಿ ತಾಲೂಕು ಕಚ್ಚೂರು ಗ್ರಾಮದ, ಬಾರ್ಕೂರು ಕಲ್ಲು ಚಪ್ಪರದ ಬಳಿ ಇರುವ ಗೂಡಂಗಡಿ ಸಮೀಪ  ಧಾಳಿ ನಡೆಸಿ ಮಟ್ಕಾ  ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ  ಮಾಧವ ಭಂಡಾರಿ [47] ತಂದೆ: ಕೃಷ್ಣಯ್ಯ ಭಂಡಾರಿ, ವಾಸ: ಮಾಸ್ತಿನಗರ, ಹನೇಹಳ್ಳಿ ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು  ವಶಕ್ಕೆ ಪಡೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ 1, ಬಾಲ್ ಪೆನ್ 1  ಮತ್ತು ನಗದು ರೂ 750/-  ನ್ನು ವಶಪಡಿಸಿಕೊಂಡಿದ್ದು  ಮತ್ತು ಆರೋಪಿತನು ತಾನು ಮಟ್ಕಾ ಜೂಜಾಟಕ್ಕೆ ನಡೆಸಿದ ಹಣವನ್ನು ರತ್ನಾಕರ ಎಂಬುವವನಿಗೆ ನೀಡುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/15 ಕಲಂ 78(1)(3)  ಕೆ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ: 
  • ಬ್ರಹ್ಮಾವರ: ದಿನಾಂಕ 19/04/2015ರಂದು ಸಂಜೆ 4:45ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಚೆರ್ಕಾಡಿ ಗ್ರಾಮದ ಶ್ಯಾನಾರಬೆಟ್ಟು ಎಂಬಲ್ಲಿ ಪಿರ್ಯಾದಿ ಸಂತೋಷ ಪೂಜಾರಿ (29), ದಯಾನಂದ ಪೂಜಾರಿ , ವಾಸ: ಶ್ಯಾನರ ಬೆಟ್ಟು, ಚೆರ್ಕಾಡಿ ಅಂಚೆ, ಚೆರ್ಕಾಡಿ ಗ್ರಾಮದ ಉಡುಪಿ ತಾಲೂಕು ಇವರ ಅಕ್ಕ ಉಷಾ ಪೂಜ್ತಾರಿ (32) ಎಂಬವರು ಮನೆಯ ಬಳಿ ಇರುವ ಗದ್ದೆಯಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಯಾವುದೋ ವಿಷ ಪೂರಿತ ಹಾವು ಕಾಲಿಗೆ ಕಚ್ಚಿ, ಕೊಗಿಕೊಂಡವರನ್ನು ಚಿಕ್ಸಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ,ಆಸ್ವತ್ರೆಗೆ ದಾಖಲು ಮಾಡಿದ್ದು  ಚಿಕ್ಸಿತ್ಸೆಯ ವೇಳೆ ಚಿಕ್ಸಿತ್ಸೆ ಫಲಕಾರಿಯಾಗದೇ ಉಷಾರವರು ದಿನಾಂಕ 20/05/2015ರಂದು ಬೆಳ್ಳೆಗ್ಗೆ 09:00ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 25/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ಡೌನ್ ಟೌನ್ ಬಾರ್ & ರೆಸ್ಟೋರೆಂಟ್ ನಲ್ಲಿ ಅಡುಗೆ ಕೆಲಸ ಮಾಡಿ ಕೊಂಡಿರುವ ಜಗದೀಶ್  ಶೆಟ್ಟಿ 45 ವರ್ಷ ಎಂಬವರು ಕೆಲಸ ಮುಗಿಸಿ  ನಡ್ಸಾಲು ಗ್ರಾಮದ ಅಮರ್ ಕಾಂಪ್ಲೇಕ್ಸ್ನ ಲಾಡ್ಜ್ ರೆಸಿಡೆನ್ಸಿಯ ಪಕ್ಕದಲ್ಲಿರುವ ರೂಮ್ ನಲ್ಲಿ ದಿನಾಂಕ. 20.05.2015 ರಂದು ರಾತ್ರಿ 12:00 ಗಂಟೆಗೆ ಬಂದು ಮಲಗಿದ್ದು, ದಿನಾಂಕ. 21.05.2015 ರಂದು ಬೆಳಿಗ್ಗೆ 6:00 ಗಂಟೆಗೆ ಅವರನ್ನು  ಪಿರ್ಯಾದಿ ಭಾಸ್ಕರ ರೈ ಪ್ರಾಯ 45 ವರ್ಷ, ತಂದೆ:- ಕರಿಯಪ್ಪ ರೈ ವಾಸ;- ನೀರುಕ್ಕು ಮನೆ, ನಿಡ್ಪಳ್ಳಿ ಗ್ರಾಮ, ಬೆಟ್ಟಂಪಾಡಿ ಅಂಚೆ, ಪುತ್ತೂರು ತಾಲೂಕು ದ.ಕ. ಜಿಲ್ಲೆ. ಇವರು ಎಬ್ಬಿಸಲು ಹೋದಾಗ ಮೃತ ಪಟ್ಟಿರುವುದು ಕಂಡು ಬಂದಿದ್ದು, ಮೃತರು ಮದ್ಯಪಾನ ಮಾಡುವ ಚಟವಿದ್ದು, ರಾತ್ರಿ ಮದ್ಯಪಾನ ಮಾಡಿ ಮಲಗಿದ್ದು, ದಿ.20.05.15 ರಂದು ರಾತ್ರಿ 12:00 ಗಂಟೆಯಿಂದ ದಿ. 21.05.2015 ರಂದು ಬೆಳಿಗ್ಗೆ 6:00 ಗಂಟೆಯ ನಡುವೆ ಹೃದಯಘಾತವಾಗಿ ಮೃತ ಪಟ್ಟಿರುವುದಾಗಿದೆ . ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 13/15 ಕಲಂ.174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: