Thursday, May 21, 2015

Daily Crime Reports As on 21/05/2015 at 19:30 Hrsಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 21/05/2015 ರಂದು ಸಮಯ ಸುಮಾರು ಬೆಳಿಗ್ಗೆ 10:15 ಗಂಟೆಗೆ ಕುಂದಾಪುರ  ತಾಲೂಕು,  ಕೊಟೇಶ್ವರ ಗ್ರಾಮದ  ಐತಾಳಬೆಟ್ಟು ಕ್ರಾಸ್ ಬಳಿ ರಾ.ಹೆ 66  ರಸ್ತೆಯಲ್ಲಿ ಆಪಾದಿತ    ರಮೇಶಶೆಟ್ಟಿ  ಎಂಬವರು KA 20-Q- 172ನೇ ಬೈಕನ್ನು ಕೊಟೇಶ್ವರ  ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಅದೇ  ದಿಕ್ಕಿ ಪಿರ್ಯಾದಿ ಕಲಾಂದರ ಸಾಹೇಬ್ ಇವರು ಸವಾರಿ ಮಾಡಿಕೊಂಡು  ಬರುತ್ತಿದ್ದ ಸೈಕಲ್‌‌ ಗೆ ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ  ರಸ್ತೆಗೆ ಬಿದ್ದು ಗಾಯಗೊಂಡು  ಅಂಕದಕಟ್ಟೆಯ  ಸರ್ಜನ್  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/15 ಕಲಂ: ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 21/05/2015 ರಂದು ಸಮಯ ಸುಮಾರು  ಮಧ್ಯಾಹ್ನ 1:45  ಗಂಟೆಗೆ ಕುಂದಾಪುರ  ತಾಲೂಕು,  ಹೆಮ್ಮಾಡಿ  ಗ್ರಾಮದ  ಅಮರ್ ಕಾರ್ ಕ್ಲಿನಿಕ್ ಬಳಿ ರಾ.ಹೆ 66  ರಸ್ತೆಯಲ್ಲಿ ಪಿರ್ಯಾದಿ ನಾಗರಾಜ ಇವರು  ಪ್ರಶಾಂತ ಹಾಗೂ ಕೃಷ್ಣ ರೊಂದಿಗೆ  ನಾಗರಾಜ ರವರ KA20B-9604 ಅಟೋರಿಕ್ಷಾದಲ್ಲಿ  ಪ್ರಯಾಣಿಕರಾಗಿ ಕುಳಿತು  ಕುಂದಾಪುರದಿಂದ ಗುಜ್ಜಾಡಿಗೆ ಹೋಗುತ್ತ ರಾ.ಹೆ 66 ರಸ್ತೆಯಲ್ಲಿ ಸದ್ರಿ ಅಟೋರಿಕ್ಷಾದ ಮುಂದುಗಡೆಯಲ್ಲಿ KA20-B-3874 ನೇ ಟಿಪ್ಪರ್ ಲಾರಿಯನ್ನು ಚಾಲಕ  ರಾಜು ರಾಥೋಡ್ ಎಂಬವರು ಚಲಾಯಿಸಿಕೊಂಡಿದ್ದು  ಅಟೋರಿಕ್ಷಾಕ್ಕೆ  ಮುಂದೆ ಹೋಗಲು  ಸೈಡ್ ನೀಡಿದಾಗ ಅಟೋರಿಕ್ಷಾ ಚಾಲಕ  ಟಿಪ್ಪರ್  ಅನ್ನು ಓವರ್ಟೇಕ್ ಮಾಡುತ್ತಿರುವ  ಸಮಯ ಟಿಪ್ಪರ್ ಲಾರಿಯನ್ನು ಚಾಲಕ  ರಾಜು ರಾಥೋಡ್ ಒಮ್ಮಲೆ ಅತೀವೇಗ  ಹಾಗೂ ಅಜಾಗರುಕೆಯಿಂದ ರಸ್ತೆಯ  ಬಲಕ್ಕೆ ಚಲಾಯಿಸಿ  ಅಟೋರಿಕ್ಷಾದ  ಎಡಬದಿಗೆ ಡಿಕ್ಕಿ ಹೊಡೆದ  ಪರಿಣಾಮ  ಅಟೋರಿಕ್ಷಾ  ರಸ್ತೆಯ  ಬಲಕ್ಕೆ ತಿರುಗಿ  ಅಡ್ಡ ಬಿದ್ದು ಪಿರ್ಯಾದಿ  ಹಾಗೂ ಅಟೋರಿಕ್ಷಾ  ಚಾಲಕ ಗಾಯಗೊಂಡು ಕುಂದಾಪುರ  ಚಿನ್ಮಯಿ    ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/15 ಕಲಂ: ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಶಂಕರನಾರಾಯಣ:  ಫಿರ್ಯಾದಿ ಸದಿಯ ಕುಲಾಲ ಇವರು ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಜನ್ಸಾಲೆ ಅಂಚೆ ಕಛೇರಿ ಬಳಿ ಅಂಗಡಿಯನ್ನು ಹೊಂದಿದ್ದು, ಯಾರೋ ಕಳ್ಳರು ದಿನಾಂಕ: 09/05/2015 ರಂದು ಮಧ್ಯಾಹ್ನ 1.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರ ಬಾಬ್ತು ಅಂಗಡಿಯ ಮಾಡಿನ ಸಿಮೆಂಟ್ ಶೀಟ್‌ನ್ನು ಎತ್ತಿ ಮುರಿದು ಒಳ ಪ್ರವೇಶಿಸಿ ಕ್ಯಾಶ್ ಡ್ರವರ್ ನಲ್ಲಿದ್ದ ಸುಮಾರು 1,500/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೇ ದಿನಾಂಕ: 20/05/2015 ರಂದು ಕೂಡಾ ಮಧ್ಯಾಹ್ನ 1.30 ಗಂಟೆಯಿಂದ 2.30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಬಾಬ್ತು ಅಂಗಡಿಯ ಮಾಡಿನ ಸಿಮೆಂಟ್ ಶೀಟನ್ನು ಎತ್ತಿ ಮುರಿದು ಒಳಪ್ರವೇಶಿಸಿ ಸುಮಾರು 200/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ.  ಈ ಬಗ್ಗೆ ಶಂಕರನಾರಾಯಣ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/15 ಕಲಂ: ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಬ್ರಹ್ಮಾವರ: ದಿನಾಂಕ ; 21/05/2015 ರಂದು ಬ್ರಹ್ಮಾವರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅನಂತಪದ್ಮನಾಭ ಕೆ.ವಿ ರವರು ಠಾಣಾ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವುವಾಗ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ, ಬ್ರಹ್ಮಾವರದ ಬಸ್ಸ್ ನಿಲ್ದಾಣದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ  ಮಾಹಿತಿ ಮೇರೆಗೆ  ದಾಳಿ ನಡೆಸಿ ಮಟ್ಕಾ  ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ  ಹ್ಯಾರಿ ಡಿಸೋಜ (32) ತಂದೆ: ಥೋಮಸ್ ಡಿಸೋಜಾ, ವಾಸ: ದಾಸಬೆಟ್ಟು, ಆರೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು  ವಶಕ್ಕೆ ಪಡೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ 1, ಬಾಲ್ ಪೆನ್ 1  ಮತ್ತು ನಗದು ರೂ 620/-   ಅನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿಯ ವಿರುದ್ದ ಬ್ರಹ್ಮಾವರ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/15 ಕಲಂ 78(1)(vi)  ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ ; 21/05/2015 ರಂದು ಬ್ರಹ್ಮಾವರ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಯು. ಲಕ್ಷ್ಮೀನಾರಾಯಣ ರಾವ್ ರವರು ಹಾಗೂ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವುವಾಗ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ, ಬ್ರಹ್ಮಾವರದ ಮಹೇಶ್ ಆಸ್ಪತ್ರೆಯ ಬಳಿ ಇರುವ ಕುಶನ್ ಅಂಗಡಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ  ಮಾಹಿತಿ ಮೇರೆಗೆ  ದಾಳಿ ನಡೆಸಿ ಮಟ್ಕಾ  ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ  ಶರತ್ ಶೆಟ್ಟಿ (20) ತಂದೆ: ಶಂಕರ ಶೆಟ್ಟಿ. ವಾಸ: ಕೃಷ್ಣ ಮಿಲ್ಕ ಡೈರಿಯ ಬಳಿ, , ಹೆರೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು  ವಶಕ್ಕೆ ಪಡೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ 1, ಬಾಲ್ ಪೆನ್ 1  ಮತ್ತು ನಗದು ರೂ 250/-   ನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿಯ ವಿರುದ್ದ ಬ್ರಹ್ಮಾವರ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/15 ಕಲಂ 78(1)(vi)  ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: