Wednesday, May 13, 2015

Daily Crime Reports As on 13/05/2015 at 19:30 Hrs



ಕಳವು ಪ್ರಕರಣಗಳು  

  • ಬ್ರಹ್ಮಾವರ: ದಿನಾಂಕ 11/05/2015  ರಂದು  ಮಧ್ಯಾಹ್ನ 3:00 ಗಂಟೆಯಿಂದ 13/05/2015 ರ ಬೆಳಿಗ್ಗೆ 09:30 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ಹೇರೂರು ಗ್ರಾಮದ ಹೇರಿಂಜೆ ದೇವಸ್ಥಾನ ರಸ್ತೆಯಲ್ಲಿರುವ ಪಿರ್ಯಾದಿದಾರರಾದ ಸುರೇಶ್ ತೋನ್ಸೆ (51) ಎಂಬವರ ಮನೆಯ ಅಡುಗೆ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್‌ ರೂಮ್ ನ ಬಾತ್‌ ರೂಮ್‌ ನಲ್ಲಿ ಸ್ಕೂಲ್‌ ಬ್ಯಾಗ್‌ ನಲ್ಲಿಟ್ಟಿದ್ದ ರೂಪಾಯಿ 2,44,000/- ಮೌಲ್ಯದ ಚಿನ್ನಾಭರಣ, ಸುಮಾರು 36,000/- ಮೌಲ್ಯದ 100 ಡಾಲರ್‌ ನ 6 ನೋಟುಗಳು, 20000 ನಗದು, ಮತ್ತು 15000/- ಮೌಲ್ಯದ ಸ್ಯಾಮ್‌ಸಂಗ್ ಕ್ಯಾಮೇರಾ, 3000/- ರೂ ಮೌಲ್ಯದ ಟೈಟಾನ್ ವಾಚ್‌‌ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಒಟ್ಟು ಸೊತ್ತಿನ ಅಂದಾಜು ಮೌಲ್ಯ 3,18,000/- ರೂಪಾಯಿ ಆಗಿರುತ್ತದೆ ಎಂಬುದಾಗಿ ಸುರೇಶ್ ತೋನ್ಸೆ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/15 ಕಲಂ 454, 457, 380  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  • ಉಡುಪಿ: ಪಿರ್ಯಾದಿದಾರರಾದ ಕ್ಯಾರೆನ್‌‌ ಡಿ ಸೋಜ  (26) ತಂದೆ ಲಾರೆನ್ಸ್‌‌ ಡಿಸೋಜ ವಾಸ: ಉಜ್ವಲ್‌‌ ಕುಂಟಿಕಾನ್‌‌ ಎ.ಜೆ ಆಸ್ಪತ್ರೆ ಎದುರಿನ ರಸ್ತೆ  ಬಿಜೈ ಅಂಚೆ ಮಂಗಳೂರು ರವರು  ದಿನಾಂಕ:11/05/15 ರಂದು ಮಂಗಳೂರನಿಂದ ತನ್ನ ಅಕ್ಕನ ಮನೆಯಾದ ಉಡುಪಿಗೆ ಬಂದಿದ್ದು,  ಉಡುಪಿ ಬಸ್‌ ನಿಲ್ದಾಣದಲ್ಲಿ ಬಸ್ ನಿಂದ ಇಳಿಯುವಾಗ ಪಿರ್ಯಾದಿದಾರರ ಬ್ಯಾಗ್ ನಲ್ಲಿಂದ ಸೋನಿ ಕಂಪನಿಯ ಮೋಬೈಲ್ ಕಳವು ಆಗಿರುತ್ತದೆ ಅಂದಾಜು ಮೌಲ್ಯ 46,955/- ರೂ ಆಗಿರುತ್ತದೆ ಎಂಬುದಾಗಿ ಕ್ಯಾರೆನ್‌‌ ಡಿ ಸೋಜ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/15 ಕಲಂ 379  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು  

  • ಪಡುಬಿದ್ರಿ: ದಿನಾಂಕ 11.05.2015 ರಂದು ಮದ್ಯಾಹ್ನ ಸುಮಾರು 1.45 ಗಂಟೆಗೆ ಹೋಂಡಾ ಮೋಟಾರ್ ಸೈಕಲ್ ನಂ ಕೆಎ 19 ಇಎಂ 2763 ನೇದನ್ನು ಅದರ ಸವಾರ ಕುಮಾರ ವೇಳ್ ಎಂಬವರು ರಾ.ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಕ್ಕೆ ಬಂದು ಪಡುಬಿದ್ರಿ ಬಸ್ಸು ನಿಲ್ದಾಣದ ಬಳಿ ರಸ್ತೆಯ ಪೂರ್ವ ಬದಿಯ ಮಣ್ಣಿನ ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ಪಿರ್ಯಾದುದಾರರಾದ ಶ್ರೀಮತಿ ಗುಲಾಬಿ (66) ಗಂಡ ಗಂಗಾಧರ ಅಂಚನ್ ವಾಸ ನಡು ಮುಗೇರ ಹೌಸ್, ಮೂಡು ಪಲಿಮಾರು, ಪಲಿಮಾರು ಗ್ರಾಮ, ಉಡುಪಿ ತಾಲೂಕು ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಅವರ ಬಲ ಕಾಲಿನ ಪಾದ, ಬಲಕಾಲಿನ ನಡು ಮೂಳೆಗೆ ರಕ್ತಗಾಯ ಹಾಗೂ ಬೆನ್ನಿಗೆ ಮತ್ತು ಕೈಗಳಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುವಿನ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದ್ದ ಆಪಾದಿತನು ಬಳಿಕ ನಿರಾಕರಿಸಿರುವುದಾಗಿದೆ ಎಂಬುದಾಗಿ ಶ್ರೀಮತಿ ಗುಲಾಬಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/15 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  • ಉಡುಪಿ: ದಿನಾಂಕ 13/05/2015 ರಂದು ಪಿರ್ಯಾದಿದಾರರಾದ ಸತೀಶ್ (46) ತಂದೆ: ಶ್ಯಾಮ್ ವಾಸ: ಮೂಡು ಅಲೆವೂರು ಹೊನ್ನಕೊಡಿ, ಅಲೆವೂರು ಉಡುಪಿ ರವರು ತನ್ನ ಕೆಎ 20 ಇಡಿ 4917 ನೇ ಮೋಟಾರು ಸೈಕಲಿನಲ್ಲಿ ತನ್ನ ಅಳಿಯ ರಾಜೇಶ್ ನೊಂದಿಗೆ ಸಹ ಸವಾರನಾಗಿ ಕುಳಿತುಕೊಂಡು ಹಿರಿಯಡ್ಕ ದಿಂದ ಉಡುಪಿ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 2.00 ಗಂಟೆಗೆ ಕುಂಜಿಬೆಟ್ಟು ಗಣೇಶ್ ಸ್ವೀಟ್ & ಬೇಕರಿ ಬಳಿ ತಲುಪಿದಾಗ ಮುಂಭಾಗದಲ್ಲಿ ಅಂದರೆ ಉಡುಪಿ ಕಡೆಗೆ ಹೋಗುವ ಕೆಎ 20 ಬಿ 4453 ನೇ ಬಸ್ಸಿನ ಚಾಲಕ ಲಕ್ಷ್ಮಣ ಎಂಬಾತನು ಪ್ರಯಾಣಿಕರನ್ನು ಇಳಿಸಿ ಬಸ್ಸನ್ನು ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ಬಸ್ಸಿಗೆ ಮೋಟಾರು ಸೈಕಲ್ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸವಾರ ರಾಜೇಶ್ ಹಾಗೂ ಸಹ ಸವಾರರಾದ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ರಾಜೇಶನ ಬಲಕೈ ಮೋಣಕೋಲುಕೈ, ಹಣೆಗೆ, ಕಣ್ಣಿನ ಬಲಭಾಗ ಗಾಯವಾಗಿರುತ್ತದೆ ಎಂಬುದಾಗಿ ಸತೀಶ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/15 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: