Thursday, May 14, 2015

Daily Crime Reports As on 14/05/2015 at 07:00 Hrs


ಅಪಘಾತ ಪ್ರಕರಣ:
  • ಪಡುಬಿದ್ರಿ : ದಿನಾಂಕ: 13.05.2015 ರಂದು ಮದ್ಯಾಹ್ನ ಸುಮಾರು 1.00 ಗಂಟೆಗೆ ಲಾರಿ  ಸಂಖ್ಯೆ: ಎಂಹೆಚ್ 09 ಬಿಎ 9936 ನೇದನ್ನು ಅದರ ಚಾಲಕ ಸಂಜಯ ಪಾಟೀಲ ಎಂಬವರು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ರಾ.ಹೆ 66ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಡಾ ಗ್ರಾಮದ ಉಚ್ಚಿಲ ಬಸ್ಸು ನಿಲ್ದಾಣದ ಬಳಿ ರಸ್ತೆಯ ಬದಿಯ ಮಣ್ಣಿನ ರಸ್ತೆಯಲ್ಲಿ ನಿಂತಿದ್ದ ತಿಮ್ಮಯ್ಯ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ತಿಮ್ಮಯ್ಯರವರು ಮಣ್ಣುರಸ್ತೆಗೆ ಬಿದ್ದು ಅವರ ಬಲಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಎಂಬುದಾಗಿ ಲಾಲಯ್ಯ(25), ತಂದೆ : ಹಣಮಂತು, ಕುಸುಮ ಸಮುದ್ರ, ಕಳಚಂದ್ರ, ಪರಂಗಿ ತಾಲೂಕು, ರಂಗಾರೆಡ್ಡಿ, ತೆಲಂಗಾಣರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 67/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಪಡುಬಿದ್ರಿ : ದಿನಾಂಕ: 11.05.2015 ರಂದು ಮದ್ಯಾಹ್ನ ಸುಮಾರು 1.45 ಗಂಟೆಗೆ ಹೋಂಡಾ ಮೋಟಾರ್ ಸೈಕಲ್ ನಂ ಕೆಎ 19 ಇಎಂ 2763 ನೇದನ್ನು ಅದರ ಸವಾರ ಕುಮಾರ ವೇಳ್ ಎಂಬವರು ರಾ.ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಕ್ಕೆ ಬಂದು ಪಡುಬಿದ್ರಿ ಬಸ್ಸು ನಿಲ್ದಾಣದ ಬಳಿ ರಸ್ತೆಯ ಪೂರ್ವ ಬದಿಯ ಮಣ್ಣಿನ ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ಶ್ರೀಮತಿ ಗುಲಾಬಿ, 66 ವರ್ಷ, ಗಂಡ:- ಗಂಗಾಧರ ಅಂಚನ್, ವಾಸ: ನಡು ಮುಗೇರ ಹೌಸ್, ಮೂಡು ಪಲಿಮಾರು, ಪಲಿಮಾರು ಗ್ರಾಮ, ಉಡುಪಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರ ಬಲ ಕಾಲಿನ ಪಾದ, ಬಲಕಾಲಿನ ನಡು ಮೂಳೆಗೆ ರಕ್ತಗಾಯ ಹಾಗೂ ಬೆನ್ನಿಗೆ ಮತ್ತು ಕೈಗಳಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂಡ ಶ್ರೀಮತಿ ಗುಲಾಬಿಯವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುವಿನ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದ್ದ ಕುಮಾರ್‌ ಬಳಿಕ ನಿರಾಕರಿಸಿದ್ದರಿಂದ ವಿಳಂಭವಾಗಿ ಠಾಣೆಗೆ ದೂರು ನೀಡಿರುವುದನ್ನು, ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 66/15 ಕಲಂ: ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: