Sunday, May 24, 2015

Daily Crime Reported As On 24/05/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ:
  • ಸುದೀರ್ ಶೆಟ್ಟಿ (36), ತಂದೆ: ನಾರಾಯಾಣ ಶೆಟ್ಟಿ ,ವಾಸ: ಸೀತಾ ನಿಲಯ, ಬೈಲು ಮನೆ, ಕಡೆಕಾರ್, ಉಡುಪಿ ರ ದೊಡ್ಡಮ್ಮನ  ಮಗ ಗುರುಪ್ರಸಾದ್ ರವರಿಗೆ ವಿಪರೀತ ಕುಡಿತದ ಚಟವಿದ್ದು, ದಿನಾಂಕ 24/05/15 ರಂದು 5:55 ಗಂಟೆಗೆ ಇಂದ್ರಾಳಿ ರೈಲ್ವೇ ಸೇತುವೆಯ ಕೆಳಗೆ ರೈಲ್ವೇ ಟ್ರಾಕಿನಲ್ಲಿ ಮತ್ಸ್ಯ ಗಂಧ ರೈಲಿನ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುದೀರ್ ಶೆಟ್ಟಿ ಯವರು ನೀಡಿದ ದೂರಿನಂತೆ ಮಣಿಪಾಲ  ಠಾಣಾ ಯು.ಡಿ.ಆರ್ ನಂ 23/15 ಕಲಂ 174  ಸಿ.ಆರ್.ಪಿ.ಸಿ ಯಂತೆ ಪ್ರಕರ ಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು : ರವಿ ಕುಲೈಬೈಲು (42) ತಂದೆ: ದಿ. ತುಕ್ರ ಪೂಜಾರಿ ವಾಸ:ಕುಲೈಬೈಲು ಪಿತ್ರೋಡಿ ಉದ್ಯಾವರವರ ಅಕ್ಕನ ಮಗ ಸುಮಾರು 38 ವರ್ಷ ಪ್ರಾಯದ ಸಂತೋಷ ಎಂಬವನು ವೀಪರೀತ ಮದ್ಯ ಸೇವನೆ ಮಾಡುವ ಚಟದವನಾಗಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 23-05-2015 ರಂದು ಸಂಜೆ 5:00 ಗಂಟೆಯ ನಂತರ ಹೆಂಡತಿಯು ಮಕ್ಕಳೊಂದಿಗೆ ತಾಯಿ ಮನೆಗೆ ಹೋದ ಸಮಯದಲ್ಲಿ ತನ್ನ ಮನೆಯ ಹಿಂದಿನ ಗೋಡೆಯ ಕಿಟಕಿಗೆ ತನ್ನ ಹೆಂಡತಿಯ ಚೂಡಿದಾರದ ಶಾಲ್‌‌ನ್ನು ಹರಿದು ಹಗ್ಗವನ್ನಾಗಿಸಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ರವಿ ಯವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣಾ ಯುಡಿಆರ್‌  ಕ್ರಮಾಂಕ : 15/2015 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ :
  • ಬ್ರಹ್ಮಾವರ : ದಿನಾಂಕ 24/05/2015 ರಂದು 12:30 ಗಂಟೆಗೆ ಪೊಲೀಸ್ ಉಪ ನಿರೀಕ್ಷಕರಾದ ಅನಂತಪದ್ಮನಾಭ ಕೆ.ವಿ ರವರು ಹಾಗೂ ಠಾಣಾ ಸಿಬ್ಬಂದಿಯವರೊಂದಿಗೆ ಬ್ರಹ್ಮಾವರ ಆಕಾಶವಾಣಿ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವುವಾಗ ಉಡುಪಿ ತಾಲೂಕು ಬೈಕಾಡಿ ಗ್ರಾಮದ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಹೋಗುವ ರಸ್ತೆಯ ಬದಿಯಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದುದಾಗಿ ಮಾಹಿತಿ ಬಂದ ಮೇರೆಗೆ ಪಿಎಸ್‌ಐ ಅನಂತಪದ್ಮನಾಭ ಕೆ.ವಿ, ವೃತ್ತ ನಿರೀಕ್ಷಕರಾದ ಅರುಣ.ಬಿ.ನಾಯಕ್‌, ಠಾಣಾ ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷಮ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಸುತ್ತುವರಿದು ಜೂಜಾಟ ಆಡುತ್ತಿದ್ದ ನಾಗರಾಜ (28) ಶಿವಶಂಕರ (21), ಶಪಾಟ್‌ ಹುಸೇನ್‌ (32), ಮಹಮ್ಮದ್‌ ಸಲೀಂ (46) ಆರ್‌.ಪ್ರಕಾಶ (46), ಮುಸ್ತಾಫ್‌ (38), ಮಹೇಶ್‌ ಕುಮಾರ್‌ (23), ಬಾಬಾ ಪಕ್ರುದ್ದೀನ್‌ (26) ರವರನ್ನು ಧಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ 1) ಇಸ್ಟೀಟ್‌, ಡೈಮಂಡ್‌‌, ಆಟೀನ್, ಕ್ಲವರ್‌‌ ಚಿತ್ರ ಇರುವ ಇಸ್ಟೀಟ್‌‌ ಎಲೆಗಳು-52, 2) ಹಳೆಯ ನ್ಯೂಸ್‌ ಪೇಪರ್‌‌-1 ಹಾಳೆ, 3) ನಗದು ರೂಪಾಯಿ- 11,700/-ನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಬ್ರಹ್ಮಾವರ ಪೊಲಿಸ್‌ ಠಾಣಾ ಅಪರಾಧ ಕ್ರಮಾಂಕ : 96/15 ಕಲಂ 87  ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: