Sunday, May 17, 2015

Daily Crime Reported As On 17/05/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ : 

 

  • ಉಡುಪಿ ನಗರ : ದಯಾನಂದ ಮೇಸ್ತ್ರಿ (50) ತಂದೆ: ರಾಜು ಜತ್ತನ್ ವಾಸ: ಕೊಡವೂರು, ವಾಸುಕೀನಗರ, ಉಡುಪಿ  ಇವರು ಉಡುಪಿ ಪರಿಸರದಲ್ಲಿ ಮೇಸ್ತ್ರಿ ಕೆಲಸ ಹಾಗೂ ಕೆಲಸಕ್ಕೆ ಕೆಸಲಗಾರರನ್ನು ಓದಗಿಸುವ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸದ ಬಗ್ಗೆ ಉಡುಪಿ ಸಿಟಿ ಬಸ್ ನಿಲ್ದಾಣಕ್ಕೆ ಜನರನ್ನು ಕರೆಯಲು ಬಂದಿದ್ದ ಸಮಯ ಉಡುಪಿ ಬಸ್ ನಿಲ್ದಾಣದ ಅಲೆವೂರು ಮೂಡುಬೆಳ್ಳೆ ಬಸ್ ನಿಲ್ದಾಣದ ಬಳಿ ಜನರು ಗುಂಪು ಸೇರಿದ್ದನ್ನು ನೋಡಿ ಹೋಗಿ ನೋಡಿದಲ್ಲಿ, ಓರ್ವ ವ್ಯಕ್ತಿ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತ ಪಟ್ಟಿದ್ದು, ಸದ್ರಿ ವ್ಯಕ್ತಿಯು ಉಡುಪಿ ಸಿಟಿ ಬಸ್ ನಿಲ್ದಾಣದ ಆವರಣದಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದನ್ನು ಇವರು ನೋಡಿದ್ದು ಸದ್ರಿ ಮೃತ ಪಟ್ಟ ವ್ಯಕ್ತಿಯು ಅನಾರೋಗ್ಯದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತ ಪಟ್ಟಿರುವಂತೆ ಕಾಣುತ್ತಿದ್ದು ಸದ್ರಿ ಮೃತ ವ್ಯಕ್ತಿಯ ಮೃತ ಶರೀರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಯುಡಿಆರ್ ಕ್ರಮಾಂಕ 21/2015  ಕಲಂ. 174 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
 
  • ಉಡುಪಿ ನಗರ : ದಿನಾಂಕ 14/05/2015 ರಂದು ಮಧ್ಯಾಹ್ನ ಸುಮಾರು 1:10 ಸಮಯಕ್ಕೆ ಬನ್ನಂಜೆ ಜಂಕ್ಷನ್‌ ಬಳಿ ಓರ್ವ ವ್ಯಕ್ತಿಯು ಬಿದ್ದಿದವನನ್ನು ಅಲ್ಲಿಯ ಸಾರ್ವಜನಿಕರಾರೋ 108 ವಾಹನಕ್ಕೆ ಕರೆ ಮಾಡಿ ತಿಳಿಸಿದ್ದು 108 ವಾಹನದವರು ಅವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ನೀಡಿದ್ದು ಅವರು ದಿನಾಂಕ 16/05/2015 ಎಂದು ಸಂಜೆ 5:45 ಗಂಟೆಗೆ ಚಿಕಿತ್ಸೆಗೆ ಸ್ವಂದಿಸದೇ ಮೃತ ಪಟ್ಟಿರುತ್ತಾರೆ. ನಿತ್ಯಾನಂದ ಒಳಕಾಡು(54), ತಂದೆ: ದಿ ರಾಮ ವಾಸ: ಸರಳಾಯ ಕಂಪೌಂಡ್ ಒಳಕಾಡು ಉಡುಪಿ ರವರು ಆಸ್ವತ್ರೆಗೆ ಹೋಗಿ ನೋಡಿದ್ದು ಆತನು ಸುಮಾರು 35 - 40 ವರ್ಷ ಪ್ರಾಯನಾಗಿದ್ದು ಆತನು ಆಕಸ್ಮಿಕವಾಗಿ ಬಿದ್ದು ಅಥವಾ ಇತರ ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಯುಡಿಆರ್ 22 /2015  ಕಲಂ. 174 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ : ಶಂಕರ ದೇವಾಡಿಗ (50) ತಂದೆ: ದಿ: ಬಚ್ಚು ದೇವಾಡಿಗ ವಾಸ: ಮಾತೃಶ್ರೀ ನಿಲಯ, ಗಂಗನ ಕುಂಬ್ರಿ ತಾರಿಬೇರು ಅಲೂರು ಗ್ರಾಮ ಇವರು ಸಂಸಾರದೊಂದಿಗೆ ನಾನು ಬೆಂಗಳೂರಿನಲ್ಲಿ ಹೋಟೇಲ್ ಉದ್ಯೋಗದಲ್ಲಿದ್ದು ಮದುವೆ ಕಾರ್ಯ ಕ್ರಮದ ಬಗ್ಗೆ ತನ್ನ ಊರಾದ ಅಲೂರಿಗೆ ಬಂದಿದ್ದು ಈ ದಿನ 17/05/2015 ರಂದು ಬೆಳಿಗ್ಗೆ 08:00  ಗಂಟೆಗೆ ಶಂಕನ ದೇವಾಡಿಗರ ಮಗ ಅಕ್ಷಯ(16) ಅವರ ನಾದಿನಿಯವರ ಮಗ ನವೀನ (16) ಇವರುಗಳೂ ಮನೆಯ ಹತ್ತಿರದ ಗಂಗನ ಕುಂಬ್ರಿ ಸಾರ್ವಜನಿಕ ನದಿಗೆ ಸ್ನಾನ ಹಾಗೂ ಈಜಲು ಹೋಗಿದ್ದು ಬೆಳಿಗ್ಗೆ 08:45 ಗಂಟೆಗೆ ಆಕಸ್ಮಿಕವಾಗಿ ಅವರಿಬ್ಬರೂ ನೀರನಲ್ಲಿ ಮುಳುಗಿದ್ದು ನೋಡಿದವರು ಅವರಿಬ್ಬರನ್ನು ಮೇಲಕ್ಕೆ ಎತ್ತಿ ಉಪಚರಿಸಲಾಗಿ ಮೃತ ಪಟ್ಟಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್. ಸಂಖ್ಯೆ 08/2015 ಕಲಂ. 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
  • ಶಂಕರನಾರಾಯಣ ದಿನಾಂಕ 17.04.15 ರಂದು 13:00 ಘಂಟೆಗೆ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಎಂಬಲ್ಲಿ  ಆರೋಪಿ ಕೆಎ.20 ಬಿ.5090 ನೇ ನಂಬ್ರದ ಪಿಕಪ್‌ ವಾಹನದ ಚಾಲಕ ತನ್ನ ವಾಹನವನ್ನು  ಹೆಬ್ರಿ ಕಡೆಯಿಂದ ಗೋಳಿಯಂಗಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಖತೆಯಿಂದ ಚಲಾಯಿಸಿಕೊಂಡು ಬಂದು  ಯಾವುದೇ ಸೂಚನೇ ನೀಡದೇ ಒಮ್ಮೆಲೇ  ವಾಹನವನ್ನು ರಸ್ತೆಯ ಬಲಗಡೆ ತಿರುಗಿಸಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದು ಇದರ ಪರಿಣಾಮ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕೆಎ.20 ಇಎಚ್‌.5414 ನೇ ನಂಬ್ರದ ಮೋಟಾರ್ ಸೈಕಲ್‌ ಪಿಕಪ್ ವಾಹನಕ್ಕೆ ತಾಗಿ ರಸ್ತೆಯ ಎಡಗಡೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದು ಇದರ ಪರಿಣಾಮ ಮೋಟಾರ್ ಸೈಕಲ್ ಸವಾರ ರಾಘವೆಂದ್ರ ಇವರಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ರಮೇಶ (21) ತಂದೆ: ಬೆಳ್ಳ ನಾಯ್ಕ ವಾಸ: ಧೂಳಿನಮನೆ ನಂಚಾರು ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಮಣಿಪಾಲ : ದಿನಾಂಕ 17/05/15 ರಂದು ಬೆಳಿಗ್ಗೆ 10:30  ಗಂಟೆಗೆ ರಜನಿ (27) ಗಂಡ: ಸಂತೋಷ, ವಾಸ: ರವಿಂದ್ರ ನಿಲಯ, ಕರಂಬಳ್ಳಿ, ಜನತಾ ಕಾಲೋನಿ, ದೊಡ್ಡಣಗುಡ್ಡೆ, ಶಿವಳ್ಳಿ ಗ್ರಾಮ ಇವರ ಮಗನಾದ ಸೂರಜ್ (7) ಎಂಬವನು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದು, ಬಾಲ್ ರಸ್ತೆಗೆ ಎಸೆದು ಹೆಕ್ಕಲು ರಸ್ತೆಗೆ ಹೋದಾಗ ರಸ್ತೆಯಲ್ಲಿ ವಿಶ್ವಂಭರ ಕಲ್ಯಾಣ ಮಂಟಪದ ದಾರಿಯಿಂದ ಹೋಗುವ ಬೈಕ್ ನಂ ಕೆಎ 20 ಈ ಹೆಚ್ 7547ನೇದನ್ನು ಅದರ ಸವಾರನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೂರಜ್ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಕಾಲಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ರಜನಿ ಯವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 85/15 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: