Monday, May 18, 2015

Daily Crime Reports As on 18/05/2015 at 07:00 Hrs



ಅಪಘಾತ ಪ್ರಕರಣ

  • ಕೊಲ್ಲೂರು: ದಿನಾಂಕ: 17.05.2015 ರಂದು ಬೆಳಿಗ್ಗೆ 10:30 ಗಂಟೆಗೆ  ಪಿರ್ಯಾದಿ ವಿಜಯ್ ಇವರು ತನ್ನ ಮನೆಯಿಂದ ತನ್ನ ದೊಡ್ಡಮ್ಮನ ಮಗಳು ಶ್ರೀಮತಿ ರಾಧಾ ಎಂಬುವರನ್ನು  ತನ್ನ ಹೊಸ ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಕೊಲ್ಲೂರು ದೇವಸ್ಥಾನಕ್ಕೆ ಬಂದು ಪೂಜೆ ಮುಗಿಸಿಕೊಂಡು ಪುನಃ ವಾಪಾಸು ಹೋಗುತ್ತಾ ಕೊಲ್ಲೂರಿನ ಮಯೂರ ಬಾರ್ ನ ಸಮೀಪ ರಸ್ತೆಯಲ್ಲಿ ಹಾಲ್ಕಲ್ ಕಡೆಗೆ ಸಾಗುತ್ತಿದ್ದಾಗ ಬಾರ್ ಬಳಿಗೆ ಪ್ರಯಾಣಿಕರನ್ನು ಇಳಿಸಿ ಏಕಾಏಕಿ ಅತ್ಯಂತ ವೇಗವಾಗಿ ಹಾಗೂ ನಿರ್ಲಕ್ಷತನದಿಂದ ಕೆ ಎ 20, ಸಿ 5772 ನೇ ಆಟೋ ರಿಕ್ಷಾವನ್ನು ಅದರ ಚಾಲಕ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ಪಿರ್ಯಾದಿದಾರರ ದೊಡ್ಡಮ್ಮನ ಮಗಳು ರಾಧಾ ರಸ್ತೆಗೆ ಬಿದ್ದು ತಲೆ ಹಾಗೂ ಕಾಲಿಗೆ ತೀವೃ ತರಹದ ರಕ್ತ ಗಾಯವಾಗಿದ್ದು ಪಿರ್ಯಾದಿದಾರರ ಎಡಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ:  ದಿನಾಂಕ ದಿನಾಂಕ 17/05/2015 ರಂದು  ಸಮಯ  ಸುಮಾರು ಸಂಜೆ 4:45 ಗಂಟೆಗೆ ಕುಂದಾಪುರ  ತಾಲೂಕು,  ಹೆಮ್ಮಾಡಿ  ಗ್ರಾಮದ ಮುವತ್ತುಮುಡಿ  ಬಸ್‌  ಸ್ಟಾಪ್  ಬಳಿ  ರಾ.ಹೆ  66 ರಸ್ತೆಯಲ್ಲಿ ಆಪಾದಿತ   ಶಿವಕುಮಾರ್  ಜಿ.ಕೆ  ಎಂಬವರು KA42-5931ನೇ ಕಾರನ್ನು ತ್ರಾಸಿ  ಕಡೆಯಿಂದ  ಕುಂದಾಪುರ  ಕಡೆಗೆ  ಅತೀವೇಗ  ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು  ಕಾರಿನ ಮುಂಭಾಗದಲ್ಲಿ  ಹೋಗುತ್ತಿದ್ದ   ಲಾರಿಯೊಂದನ್ನು  ಓವರ್ ಟೇಕ್‌  ಮಾಡುತ್ತ   ರಾ.ಹೆ 66  ರಸ್ತೆಯ ತೀರ  ಬಲಬದಿಗೆ  ಚಲಾಯಿಸಿ ,  ರಾ.ಹೆ 66  ರಸ್ತೆಯ ಮಣ್ಣಿನ  ರಸ್ತೆಯಲ್ಲಿ ನಡೆದುಕೊಂಡು  ಹೋಗುತ್ತಿದ್ದ  ಗಿರಿಜಾ ಪೂಜಾರಿ  ಎಂಬವರಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಅವರ   ತಲೆಗೆ, ಬಲ ಕಾಲಿಗೆ ಹಾಗೂ ಮೈ ಕೈ ಗೆ  ರಕ್ತಗಾಯ   ಹಾಗೂ ಒಳ ನೋವು  ಉಂಟಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ   ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲದ ಕೆ.ಎಂ.ಸಿ  ಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ ನಗರ : ಡೋಲ್ಫಿ ಗೋಮ್ಸ್, ತಂದೆ, ಬೆಂಜಮಿನ್ ಗೋಮ್ಸ್  ವಾಸ:  ಕುಂಜಿಗುಡ್ಡೆ, ಆದಿಉಡುಪಿ, ಅಂಬಲಪಾಡಿ ಅಂಚೆ ಉಡುಪಿ  ಇವರ ಅಣ್ಣ ವಿಲಿಯಂ ಜೆರಾಲ್ಡ್ ಗೋಮ್ಸ್ (50) ರವರು ವಿಪರೀತ ಶರಾಬು ಸೇವಿಸುವ ಚಟವನ್ನು ಹೊಂದಿದ್ದು  ಸರಿಯಾಗಿ ಊಟ ತೆಗೆದುಕೊಳ್ಳದೆ ಅಲ್ಲಲ್ಲಿ ಮಲಗುತ್ತಿದ್ದು ಈ ದಿನ ದಿನಾಂಕ 17/05/2015 ರಂದು ಬೆಳಗ್ಗೆ ಮನೆಯಿಂದ ಹೊರಗೆ ಹೋಗಿದ್ದು ಸಂಜೆ ಸುಮಾರು 4:00 ಗಂಟೆಗೆ ತಾಯಿ ಮನೆಯ ಕಂಪೌಂಡ್ ಗೋಡೆ ಬಳಿ ಬೊಬ್ಬೆ ಹಾಕುವುದನ್ನು ಕೇಳಿ ಹೋಗಿ ನೋಡಲಾಗಿ ವಿಲಿಯಂ ಜೆರಾಲ್ಡ್ ಗದ್ದೆಯಲ್ಲಿ ಬಿದ್ದಿದ್ದು ಮಾತನಾಡುವಂತಿರಲಿಲ್ಲ ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಿಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು ಅಣ್ಣ ವಿಲಿಯಂ ಜೆರಾಲ್ಡ್ರವರು ವಿಪರೀತ ಶರಾಬು ಸೇವಿಸಿ ಸರಿಯಾಗಿ ಅನ್ನ ನೀರು ಸೇವಿಸದೇ ಗಂಟಲು ಒಣಗಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಡೋಲ್ಫಿ ಗೋಮ್ಸ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ : 23/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.      

No comments: