Friday, April 24, 2015

Daily Crimes Reported as On 24/04/2015 at 17:00 Hrs



ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 23/04/2015 ರಂದು 19:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಆರೋಪಿ ಮೋಟಾರು ಸೈಕಲ್ ಸವಾರ ಸಂತೋಷ್ ಕುಲಾಲ್ ಎಂಬಾತನು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20 ಎಸ್- 4708 ನೇ ದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಶಾಲೆಯ ಮೈದಾನದಲ್ಲಿ ಆಟ ಆಡಿ ವಾಪಾಸು ಮನೆಗೆ ಬರುವರೇ ರಸ್ತೆ ದಾಟುತ್ತಿದ್ದ 7 ವರ್ಷದ ಆಸ್ಮಿತ್ ಎಂಬಾತನಿಗೆ ಡಿಕ್ಕಿ ಹೊಡೆದ ಪರಿಣಾಮ ಅಸ್ಮಿತ್ ಡಾಮಾರು ರಸ್ತೆಗೆ ಬಿದ್ದು ತಲೆಯ ಬಲ ಬಾಗದ ಹಣೆಗೆ ರಕ್ತ ಗಾಯವಾಗಿರುವುದಲ್ಲದೆ ಬಲ ಕಾಲಿನ ಮೂಳೆ ಮುರಿದು ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2015 ಕಲಂ  279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ: 23/04/2015 ರಂದು ಫಿರ್ಯಾದಿ ರಮೇಶ್‌ ಇವರ ತಂದೆ ನಾರಾಯಣ ಪ್ರಾಯ: 70 ವರ್ಷರವರು ಸಂಜೆ ಸುಮಾರು 07:00 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಕೆಳಪೇಟೆ ಶಾಂತಾನಂದ ಆಶ್ರಮದ ಎದುರು ರಾ ಹೆ 66 ರ ಮಣ್ಣು ರಸ್ತೆಯಲ್ಲಿ ನಿಂತಿಕೊಂಡಿದ್ದಾಗ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಕೆ ಎ 20 ಪಿ 0251 ನೇ ಕಾರಿನ ಚಾಲಕನು ಆತನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ, ನಾರಾಯಣ ಪೂಜಾರಿಯವರು ರಸ್ತೆಗೆ ಬಿದ್ದು ತಲೆ ಕೈ ಕಾಲುಗಳಿಗೆ  ರಕ್ತಗಾಯವಾಗಿದ್ದು, ಫಿರ್ಯಾದಿದಾರರು , ಡಿಕ್ಕಿ ಹೊಡೆದ ಕಾರು ಚಾಲಕ ಹಾಗೂ ಇತರರೊಂದಿಗೆ ಸೇರಿ ಒಂದು ಆಂಬುಲೆನ್ಸ್ ನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ನಾರಾಯಣ ಪೂಜಾರಿಯವರನ್ನು ಚಿಕಿತ್ಸೆಗೆ ಕರೆ ತಂದಲ್ಲಿ ಅಲ್ಲಿನ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆ ತಂದಲ್ಲಿ ವೈಧ್ಯರು ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿಕೊಂಡಿರುತ್ತಾರೆ. ನಾರಾಯಣ ಪೂಜಾರಿಯವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 12:55 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2015 ಕಲಂ  279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಗಂಗೊಳ್ಳಿ: ಚಂದ್ರ ದೇವಾಡಿಗ ಪ್ರಾಯ: 41 ವರ್ಷ, ಎಂಬವರು ದಿನಾಂಕ 23/04/2015 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಯ ಪಕ್ಕದಲ್ಲಿರುವ ಗೇರು ಬೀಜದ ಹಾಡಿಯಿಂದ ಗೇರು ಬೀಜವನ್ನು ಹೆಕ್ಕಿ ತರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2015   ಕಲಂ  ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಉಡುಪಿ ತಾಲೂಕು ಬೆಳ್ಳಂಪಳ್ಳಿ  ಗ್ರಾಮದ ಕಕ್ಕೆಹಳ್ಳಿ ರಸ್ತೆ ವಾಸಿ 70 ವರ್ಷ ಪ್ರಾಯದ ಸುಂದರಿ ಬಾಯಿ ಎಂಬವರು ಸುಮಾರು 6 ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು  ಅದಕ್ಕೆ ಚಿಕಿತ್ಸೆ ಪಡೆದುಕೊಂಡರೂ ಗುಣಮುಖರಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24.04.2015 ರಂದು ಮದ್ಯರಾತ್ರಿ  1.00 ಗಂಟೆಯಿಂದ 05.30 ಗಂಟೆಯ ನಡುವೆ ತನ್ನ ಮನೆಯೊಳಗಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 08/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: