Friday, April 24, 2015

Daily Crimes Reported as On 24/04/2015 at 07:00 Hrs



ಕಳವು ಪ್ರಕರಣ

  • ಮಣಿಪಾಲ: ಹೆರ್ಗಾ ಗ್ರಾಮದ ಎಂ..ಟಿ ಹಾಸ್ಟೆಲ್ 14ನೇ ಬ್ಲಾಕ್ರೂಮ್ ನಂಬ್ರ 103 ರಲ್ಲಿ ಫಿರ್ಯಾದಿ ಶಾಂತನು ಪಾಸರಿ ಇವರು ವಾಸ್ತವ್ಯವಾಗಿದ್ದು, ದಿನಾಂಕ 20.04.2015 ರಂದು ಬೆಳಿಗ್ಗೆ 08:00 ಗಂಟೆಗೆ ಫಿರ್ಯಾದಿದಾರರು ರೂಮ್ಗೆ ಬಾಗಿಲು ಹಾಕದೆ ಕ್ಲಾಸಿಗೆ ಹೋಗಿದ್ದು, ನಂತರ ವಾಪಸ್ಸು ಸಂಜೆ 6:30 ಗಂಟೆಗೆ ರೂಮಿಗೆ ಬಂದು ನೋಡಿದಾಗ ಪಿರ್ಯಾದಿದಾರರ ಟೇಬಲಿನ ಮೇಲಿದ್ದ ಲ್ಯಾಪ್ಟಾಪ್‌, ಚಾರ್ಜರ್ ಮತ್ತು ಮೌಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಲ್ಯಾಪ್ಟಾಪ್ಗಳ ಅಂದಾಜು ಮೌಲ್ಯ ಸುಮಾರು 25,000/-ರೂ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2015 ಕಲಂ. 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 23/04/2015 ರಂದು 13:45 ಗಂಟೆಗೆ ಕಾರ್ಕಳ ತಾಲೂಕಿನ  ಸಾಣೂರು ಗ್ರಾಮದ ಮುರತ್ತಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರತ್ತಂಗಡಿ ಕಡೆಯಿಂದ ಬೆಳುವಾಯಿ ಕಡೆಗೆ ಮಾರುತಿ ಓಮ್ನಿ ಕಾರು ನಂಬ್ರ KA19N2547 ನೇಯದರ ಚಾಲಕ ಶೇಖರ ಪೂಜಾರಿ ಎಂಬವರು ಮಾರುತಿ ಓಮ್ನಿ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಬಾರಾಡಿ ಕ್ರಾಸ್ ಕಡೆಯಿಂದ ಸಾಣೂರು ಕಡೆಗೆ ಸಂದೇಶ್ ಎಂಬವರು ಪಿರ್ಯಾದಿ ಸುಂದರ ಪೂಜಾರಿ ಇವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿ ಸವಾರಿ ಮಾಡಿಕೊಂಡು ಬರುತ್ತಿದ್ದ ಟಿವಿಎಸ್ ವಿಕ್ಟರ್ ಮೋಟಾರು ಸೈಕಲ್ ನಂಬ್ರ KA19U4445 ನೇದಕ್ಕೆ ನೇರವಾಗಿ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನಿಗೆ ತೀವೃ ಸ್ವರೂಪದ ಹಾಗೂ ಸಹಸವಾರ ಪಿರ್ಯಾದುದಾರರಿಗೆ ಸಾಮಾನ್ಯ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2015 ಕಲಂ. 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 23/04/2015 ರಂದು ಬೆಳಿಗ್ಗೆ 10:35 ಗಂಟೆಗೆ ಮಜೂರು ಗ್ರಾಮದ ಪಂಜಿತ್ತೂರು ಎಂಬಲ್ಲಿ ಕೆಎ. 02   ಡಬ್ಲ್ಯೂ- 9109 ನೇ 407 ಟೆಂಪೋ ಚಾಲಕ ಅರವಿಂದ ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆ. 05 ಇಎಸ್ 3692 ನೇ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಮೋಟಾರು ಸೈಕಲ್ ಸವಾರ ಸೈಯ್ಯದ್ ಮೊಹಮ್ಮದ್ ಲೈಸ್ ಎಂಬವರು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2015 ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 22/04/2015 ರಂದು ಮಧ್ಯಾಹ್ನ 1:30 ರಂದು ಪಿರ್ಯಾದಿ ಶ್ರೀಶೈಲ್ ಭಜಂತ್ರಿ ಇವರು ಉದ್ಯಾವರ ಗ್ರಾಮದ ಉದ್ಯಾವರ ಜಂಕ್ಷನ್ ಬಳಿ ರಸ್ತೆಯ ಪಶ್ಚಿಮ ಬದಿಯಲ್ಲಿ ಸೈಕಲ್‌‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಕೆ. 20 ಇಜಿ-2388ನೇ ಮೋಟಾರು ಸೈಕಲ್ ಸವಾರ ತನ್ನ ಬಾಬ್ತು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ,ಭುಜಕ್ಕೆ  ಮತ್ತು ಕಾಲಿಗೆ ರಕ್ತ ಗಾಯವುಂಟಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2015 ಕಲಂ 279 337 ಐಪಿಸಿ ಕಲಂ 134() (ಬಿ) ಎಂ ವಿ ಆಕ್ಟ್  ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಕಾಪು: ಪಿರ್ಯಾದಿ ಮಧುಕರ ಇವರು ದಿನಾಂಕ 23.04.2015 ರಂದು ಸುಮಾರು 4:30 ಗಂಟೆಗೆ  ಉದ್ಯಾವರ ಗ್ರಾಮದ ಬೋಳಾರಗುಡ್ಡೆ ಮನೆಯಿಂದ ತನ್ನ ಬಾಬ್ತು ರಿಕ್ಷಾದಲ್ಲಿ ಕಟಪಾಡಿಗೆ ಹೊರಟು ಎದುರು ರಸ್ತೆಯಲ್ಲಿ ಹೋಗುವಾಗ ಆರೋಪಿ ನಿಶಾಂತ್ಪ್ರಪುಲ್ರವರು ಮಿನಿ ಬಸ್ಸ್ಅನ್ನು ಕಟಪಾಡಿ ಕಡೆಯಿಂದ ಉದ್ಯಾವರದ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಪಿರ್ಯಾದುದಾರರ ರಿಕ್ಷಾವನ್ನು ಕಂಡು ಆರೋಪಿಯು ಮಿನಿ ಬಸ್ಸನ್ನು ನಿಲ್ಲಿಸಿ  ಪಿರ್ಯಾದುದಾರರನ್ನು ರಿಕ್ಷಾದಿಂದ ಹೊರಗೆ ಎಳೆದು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2015 ಕಲಂ 323,324,504,506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ಪಿರ್ಯಾದಿ ನಿಶಾಂತ್ ಪ್ರಪುಲ್ಲ ಇವರು ದಿನಾಂಕ 23.04.2015 ರಂದು ಸುಮಾರು 4:30 ಗಂಟೆಗೆ  ಮನೆಗೆ ಹೋಗುವ ಸಂದರ್ಭದಲ್ಲಿ ಉದ್ಯಾವರ ಗ್ರಾಮದ  ಬೋಳಾರಗುಡ್ಡೆಯಿಂದ ಅಂಕುದ್ರಿಗೆ ತಿರುಗುವಲ್ಲಿ  ಅವರಿಗೆ ಹಣ ನೀಡಲು ಬಾಕಿ ಇರುವ ಮಧುಕರ ಎಂಬವರು ನಿಂತುಕೊಂಡಿರುವುದನ್ನು ಪಿರ್ಯಾದುದಾರರು ಕಂಡು ಅವರನ್ನು ಕುರಿತು  ಇನ್ನು ನನ್ನ ಸಾಲ ಯಾಕೆ ಕೊಡಲಿಲ್ಲ ಎಂದು ಕೇಳಿದಾಗ ಮಧುಕರ ಎಂಬವನು ಅವಾಚ್ಯ ಶಬ್ದಗಳಿಂದ ಬೈದು  ತನ್ನ  ತಮ್ಮಂದಿರಾದ ಯೋಗೀಶ್ ಮತ್ತು ವಿಕ್ಕಿ ಎಂಬವರನ್ನು ಕರೆದು , ಮೂವರು ಕೈಗಳಿಂದ ಹೊಡೆದು ಆರೋಪಿ 1ನೇಯವರು ರಾಡ್ನಿಂದ ಹಲ್ಲೆ ನಡೆಸಿ , 2ನೇ ಆರೋಪಿಯು ಮರದ ದೊಣ್ಣೆಯಿಂದ ಪಿರ್ಯಾದುದಾರರಿಗೆ  ಹಲ್ಲೆ ನಡೆಸಿ, ನಿನ್ನನು ಇನ್ನೊಂದು ದಿನ ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ  ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2015 ಕಲಂ  ಕಲಂ 323,324,504,506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರ: ದಿನಾಂಕ 23/04/2015 ರಂದು ರಾತ್ರಿ 09:30 ಗಂಟೆಯ ಸಮಯಕ್ಕೆ ಪಿರ್ಯಾಧಿ ಕೃಷ್ಣ ಗಾಣಿಗ ಇವರು ಅವರ ತಮ್ಮನಾದ ರವೀಂದ್ರನೊಂದಿಗೆ ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ ತೆಗ್ಗರ್ಸೆ ಪೇಟೆಯಲ್ಲಿ ನಿಂತುಕೊಂಡಿರುವ ಸಮಯ ಆರೋಪಿತರಾದ ಶಶಿಧರ ಹುದಾರ ಮತ್ತು ರಾಜು ಹುದಾರ ಎಂಬುವವರು ಕೆ. 20 ಎಲ್ 3928 ನೇ ಮೋಟಾರ್ ಸೈಕಲ್ನಲ್ಲಿ ಬಂದು ಉಳಿದ ಆರೋಪಿತರು ನಡೆದುಕೊಂಡು ಬಂದು ಪಿರ್ಯಾಧಿದಾರರ ತಮ್ಮ ರವೀಂದ್ರ ನನ್ನು ಅಡ್ಡಗಟ್ಟಿ ನಿಲ್ಲಿಸಿ ರಾಜು ಹುದಾರನು ರವೀಂದ್ರನ್ನು ಉದ್ದೇಶೀಸಿ ಅವಾಚ್ಯವಾಗಿ ಬೈದು ಕೈಯಿಂದ ಆತನ ಕೆನ್ನೆಗೆ ಹೊಡೆದನು ಅಷ್ಟರಲ್ಲಿ ಅಲ್ಲಿಗೆ ಬಂದ ಶಶಿಧರ ಹುದಾರನು ಆತನ ಕೈಯಲ್ಲಿದ್ದ ರಾಡ್ನಿಂದ ರವೀಂದ್ರನ ಬಲಕೈ ಕಾಲುಗಳಿಗೆ ಜೋರಾಗಿ ಹೊಡೆದಿದ್ದು ಸಮಯದಲ್ಲಿ ಪಿರ್ಯಾಧಿದಾರರು ತಪ್ಪಿಸಲು ಹೋಗಿದ್ದು ನೀಲಕಂಠ ಹಾಗೂ ಜಯರಾಜ್  ಹುದಾರ  ಪಿರ್ಯಾಧಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆನ್ನೆಗೆ ಮೈಕೈಗೆ ಗುದ್ದಿದರು ಶಶಿಧರ್ ಮತ್ತು ರಾಜು ಹುದಾರ ನೆಲದಲ್ಲಿ ಬಿದ್ದುಕೊಂಡಿದ್ದ ರವೀಂದ್ರನಿಗೆ ಕಾಲಿನಿಂದ ಒದ್ದು ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಕೊಂದೆ ಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2015 ಕಲಂ  341, 504, 323, 326, 506  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರೇ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ಉದಯ ಕುಮಾರ್ ತಂದೆ ಬಿನ್ ರಾಮ  ರವರು ಪರಿಶಿಷ್ಟ  ಜಾತಿಯವರಾಗಿದ್ದು ಸುಮಾರು 18 ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ದಿನಗೂಲಿ ನೌಕರನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು  ಗ್ರಾಮ ಪಂಚಾಯತಿಯ ಕೆಲಸ ಕಾರ್ಯನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬರುತ್ತಿದ್ದರು. ಪ್ರಸಕ್ತ  ಸಾಲಿನಲ್ಲಿ ಸಿಬ್ಬಂದಿಯ ಮುಂಬಡ್ತಿಯ ಜೇಷ್ಠತಾ  ಪಟ್ಟಿಯಲ್ಲಿಯೂ ಸಹ ಪಿರ್ಯಾದಿದಾರರ ಹೆಸರು ಇದ್ದಿದ್ದು  ಕಾರಣದಿಂದ ಹಾಗೂ ಪಿರ್ಯಾದಿದಾರರು ಪರಿಶಿಷ್ಟ  ಜಾತಿಗೆ  ಸೇರಿದವರಾಗಿದ್ದ ಕಾರಣ ಪಿರ್ಯಾದಿದಾರರ ಏಳಿಗೆಯನ್ನು ಸಹಿಸಲಾಗದೇ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಆಪಾದಿತರುಗಳಾ 1. ಅಬ್ದುಲ್ ಹಾದಿ 2. ನಾಗರಾಜ ಖಾರ್ವಿ 3. ಎಡ್ವರ್ಡ್ ಕಾರ್ಡಿನ್  4. ಶ್ರೀಮತಿ  ರೇಷ್ಮಾ ( ಗ್ರಾಮ ಪಂಚಾಯತ್ ಅಧ್ಯಕ್ಷರು  ಗಂಗೊಳ್ಳಿ ) ಇವರುಗಳು ಜೊತೆಯಲ್ಲಿ ಸೇರಿ ಪಿರ್ಯಾದಿದಾರರಿಗೆ ನಿಂದನೆಮಾಡಿ ಅವರು ಮಾಡದಿರುವ ಲೋಪಗಳನ್ನು ಪಿರ್ಯಾದಿದಾರರ ತಲೆಗೆ ಕಟ್ಟಿ ಪಿರ್ಯಾದಿದಾರರನ್ನು ದಿನಾಂಕ 12-11-2014 ರಿಂದ    ಅಮಾನತ್ತಿನಲ್ಲಿಡುವಂತೆ ಆದೇಶ ಹೊರಡಿಸುವಂತೆ ಮಾಡಿ ಮಾಡಿ  ದಿನಾಂಕ 12/11/2014 ರಿಂದ ಪಿರ್ಯಾದಿದಾರರ ಕರ್ತವ್ಯದಿಂದ ಆಪಾದಿತರುಗಳು ಪಿರ್ಯಾದಿದಾರರು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ನೋವು ಅನುಭವಿಸುವಂತೆ ದೌರ್ಜನ್ಯ ಎಸಗಿರುತ್ತಾರೆ.  ಪಿರ್ಯಾದಿದಾರರು .ಜಾತಿಗೆ ಸೇರಿದ ನೌಕರನೆಂಬ ಕಾರಣದಿಂದ ಸುಳ್ಳು ಆಪಾದನೆಮಾಡಿ ಹೆಂಡತಿ ಮಕ್ಕಳೊಂದಿಗೆ ವಾಸಿಸುತ್ತಿರುವ ಪಿರ್ಯಾದಿದಾರರ ನೆಮ್ಮದಿಯನ್ನು ಹಾಳುಮಾಡಿ ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಗುರಿಮಾಡಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2015 ಕಲಂ 3(1) (v111) SC and ST ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: