Wednesday, April 22, 2015

Daily Crimes Reported as On 22/04/2015 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಾಯಣ:ದಿನಾಂಕ:22/04/2015 ರಂದು ಬೆಳಿಗ್ಗೆ ಸುಮಾರು 6:45 ಗಂಟೆಗೆ ಚಂದ್ರಶೇಖರ ಶೆಟ್ಟಿ ತಂದೆ:ನಂದ್ಯಪ್ಪ ಶೆಟ್ಟಿ, ವಾಸ:ಕೂಡ್ಲಿ, ಸಿದ್ಧಾಪುರ ಗ್ರಾಮ, ಕುಂದಾಫುರ ತಾಲೂಕುರವರು ಅಂಪಾರು ಗ್ರಾಮದ ಕಂಚಾರು ಎಂಬಲ್ಲಿರುವ ಗೋಪಾಕೃಷ್ಣ ನಾಯಕ್ ಯಾನೆ ದೇವರಾಯರವರ ತೆಂಗಿನ ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ತೆಂಗಿನ ಮರದಿಂದ ನೆಲಕ್ಕೆ ಬಿದ್ದು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಮಂಜಯ್ಯ ಶೆಟ್ಟಿ (74) ತಂದೆ:ದಿವಂಗತ ಕೊರಗಯ್ಯ ಶೆಟ್ಟಿ ವಾಸ:ಹುಣ್ಸಾಡಿ, ಹೊಸಂಗಡಿ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 06/15 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ:21/04/2015 ರಂದು ಮದ್ಯಾಹ್ನ 12-45 ಗಂಟೆಗೆ ಉಡುಪಿ ತಾಲೂಕು ಕಾಪು ಪಡುಗ್ರಾಮದ    ಕೊಪ್ಪಲಂಗಡಿ  ಉದಯ  ಡಿಸ್ಟಲರಿ ಕ್ರಾಸ್ ಬಳಿ ಪಿರ್ಯಾದಿದಾರರಾದ ಶ್ರೀಮತಿ ನಮಿತಾ ಶಾಹೂ (30) ಗಂಡ:ಸುಜಾನ್ ಕುಮಾರ್ ಶಾಹೂ, ವಾಸ:ಕೇರ್ ಆಫ್ ಇಸುಬು ಅಹಮ್ಮದ್, ಎಸ್ ಆರ್ ಮಂಜಿಲ್, ಕೊಪ್ಪಲಂಗಡಿ, ಪಡುಗ್ರಾಮ, ಉಡುಪಿರವರು  ತನ್ನ ಮಕ್ಕಳೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕಾಪುವಿನಿಂದ ತನ್ನ ಮನೆ ಕಡೆಗೆ ರಸ್ತೆಯ ಪಶ್ಚಿಮ ಬದಿಯಲ್ಲಿ  ನಡೆದುಕೊಂಡು  ಬರುತ್ತಿರುವಾಗ, ಕಾಪು ಕಡೆಯಿಂದ ಪಡುಬಿದ್ರೆ ಕಡೆಗೆ ಓರ್ವ ಆಟೋರಿಕ್ಷಾ ಚಾಲಕನು ತನ್ನ ಆಟೋ ರಿಕ್ಷಾ ನಂಬ್ರ ಕೆಎ 20 ಸಿ 2341 ನೇದನ್ನು ವಿರುದ್ದ ದಿಕ್ಕಿನಿಂದ ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿ ಶ್ರೀಮತಿ ನಮಿತಾ ಶಾಹೂರವರ ಮಗ ರಾಜೇಶ್ ಕುಮಾರ್ ಶಾಹುರವರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ತಲೆಗೆ  ಮತ್ತು  ಸೊಂಟಕ್ಕೆ ಗಾಯಗೊಂಡು ಮಂಗಳೂರು ಎ.ಜೆ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಶ್ರೀಮತಿ ನಮಿತಾ ಶಾಹೂರವರು ನೀಡಿದ ದೂರಿನಂತೆ ಕಾಫು ಠಾಣಾ ಅಪರಾಧ ಕ್ರಮಾಂಕ 78/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ದಿನಾಂಕ:21/04/2015 ರಂದು ಸಂಜೆ 7:00 ಗಂಟೆಗೆ ಉಡುಪಿ ತಾಲೂಕು, ಹೇರೂರು ಗ್ರಾಮದ, ಹೇರೂರು ಕ್ರಾಸ್‌ ಬಳಿ ಪಿರ್ಯಾದಿದಾರರಾದ ರಾಘವೆಂದ್ರ ಆಚಾರ್ಯ (42), ತಂದೆ:ಕೇಶವ ಆಚಾರ್ಯ, ವಾಸ:ಹೆರಿಂಜೆ ರೈಲ್ವೆ ಗೇಟ್, 52ನೇ ಹೇರೂರು ಗ್ರಾಮ, ಉಡುಪಿ ತಾಲೂಕುರವರು ತನ್ನ ತಮ್ಮ ಉದಯ ಕುಮಾರ ಆಚಾರ್ಯರವರೊಂದಿಗೆ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿರುವಾಗ, ಆರೋಪಿ ಸಂತೋಷ ತನ್ನ ಕೆಎ 06 ಬಿ 9399 ನೇ ಟೆಂಪೋ ಟ್ರಾವೆಲರ್‌ ವಾಹನವನ್ನು ಬ್ರಹ್ಮಾವರ ಕಡೆಯಿಂದ ರೈಲ್ವೆಗೇಟ್‌ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಡಾಂಬಾರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಉದಯ ಕುಮಾರ ಆಚಾರ್ಯರವರಿಗೆ ಢಿಕ್ಕಿ ಹೊಡೆದ ಪರಿಣಾಮ, ಉದಯ ಕುಮಾರ ಆಚಾರ್ಯರವರು ರಸ್ತೆಗೆ ಬಿದ್ದು, ಅವರ ಎಡಕಾಲಿನ ಕೆಳಗೆ ಮೂಳೆ ಮುರಿತದ ಜಖಂ ಆಗಿದ್ದು ಕೈಗಳಿಗೆ ತರಚಿದ ಗಾಯವಾಗಿರುತ್ತದೆ.ಈ ಬಗ್ಗೆ ರಾಘವೆಂದ್ರ ಆಚಾರ್ಯರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 64/15 ಕಲಂ:279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಗಂಗೊಳ್ಳಿ:ದಿನಾಂಕ:21/04/2015 ರಂದು ರಾತ್ರಿ 20:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜರೀನಾ (40) ಗಂಡ:ಎಂ. ಹಶೀಂ ವಾಸ:ಹಶೀಂ ಮಂಜಿಲ್, ಜಾಮೀಯ ಮೊಹಲ್ಲಾ, ಗಂಗೊಳ್ಳಿರವರ ಮನೆಯ ಎದುರುಗಡೆ ಕಾಂಪೌಂಡಿನ ಗೇಟಿಗೆ ಆರೋಪಿಗಳಾದ ಕಮರುನ್ನಿಸಾ, ಜಾಫರ್, ಹಾಸೀಬ್, ಸುಲ್ತಾನ್, ಸುಭಹಾನ್‌ ಹಾಗೂ ನೌಷಾ ಇವರೆಲ್ಲಾರು ಗುಂಪು ಸೇರಿ ದಾರಿಗೆ ನೀರು ಹೋಗದಂತೆ ಮಣ್ಣು ಹಾಕಿ ಅಡ್ಡಿ ಮಾಡುತ್ತಿದ್ದು, ಈ ಬಗ್ಗೆ ಶ್ರೀಮತಿ ಜರೀನಾರವರು ಆಕ್ಷೇಪಿಸಿದಾಗ, ಆಪಾದಿತೆ ಕಮರುನ್ನಿಸಾ ಶ್ರೀಮತಿ ಜರೀನಾರವರನ್ನು ತಡೆದು ತಲೆಯ ಕೂದಲು ಹಿಡಿದು, ಕೆಳಗೆ ಬಿಳಿಸಿ ಕೈಯಿಂದ ಹೊಟ್ಟೆಗೆ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ. ಶ್ರೀಮತಿ ಜರೀನಾರವರು ಬೊಬ್ಬೆ ಹಾಕಿದಾಗ ತಡೆಯಲು ಬಂದ ಶ್ರೀಮತಿ ಜರೀನಾರವರ ಅಳಿಯ ಮೊಹಮ್ಮದ್ ಶಫಿಗೆ, ಜಾಫರ್ ಹಾಗೂ ಸುಲ್ತಾನ್ ದೊಣ್ಣೆ ಹಾಗೂ ರಾಡಿನಿಂದ ಕೈಗೆ ಹಾಗೂ ಬೆನ್ನಿಗೆ ಹೊಡೆದಿದ್ದು, ಶ್ರೀಮತಿ ಜರೀನಾರವರ ಗಂಡನಿಗೂ ಹೊಡೆದು, ದಾರಿ ಮಾಡದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದದಿಂದ ಬೈಯ್ದು ನಿಮ್ಮ ಮನೆಯೊಳಗೆ ಬಂದು ನಿಮ್ಮನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಶ್ರೀಮತಿ ಜರೀನಾರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 51/2015 ಕಲಂ 143, 147, 341, 323, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಇತರ ಪ್ರಕರಣ
  • ಮಲ್ಪೆ:ಪಿರ್ಯಾದಿದಾರರಾದ ಸರೋಜಿನಿ ಡಿ. ಭಟ್‌ (65) ಗಂಡ:ಬಿ.ದೇವದಾಸ ಭಟ್‌, ವಾಸ:ಕೌಸ್ತುಭ”, ಪೌಂಜಿಗುಡ್ಡೆ, ಬಡಾನಿಡಿಯೂರು ಗ್ರಾಮರವರು ಬಡಾನಿಡಿಯೂರು ಗ್ರಾಮದ ಪೌಂಜಿಗುಡ್ಡೆ ಎಂಬಲ್ಲಿ ತನ್ನ ಗಂಡ ಬಿ. ದೇವದಾಸ ಭಟ್‌ ಮತ್ತು ತಾಯಿ ಇಂದಿರಾರವರೊಂದಿಗೆ ವಾಸವಿದ್ದು, ದಿನಾಂಕ:21/04/2015 ರಂದು ರಾತ್ರಿ 09:00 ಗಂಟೆಗೆ ಊಟ ಮಾಡಿ ಮಲಗಲು ಹೋಗುತ್ತಿರುವಾಗ ರಾತ್ರಿ ಸುಮಾರು 09:30 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಮುಂಬಾಗಿಲಿನಿಂದ ಮನೆಯೊಳಗೆ ಬಂದು ಸರೋಜಿನಿ ಡಿ. ಭಟ್‌ರವರ ಗಂಡನಾದ ದೇವದಾಸ್‌ ಭಟ್‌ರವರಿಗೆ ರಾಡ್‌ನಿಂದ ಹಣೆಗೆ ಹೊಡೆದಿದ್ದು, ಪರಿಣಾಮ ರಕ್ತ ಬಂದಿದ್ದು, ನೀನು ಯಾಕೆ ಹೊಡೆಯುತ್ತೀಯಾ ಎಂದು ಸರೋಜಿನಿ ಡಿ. ಭಟ್‌ರವರು ಕೂಗಿ ಕೇಳಿದಾಗ, “ಆತನು ನನಗೆ ಹಣ ಬೇಕು, ಕೊಡಿ ಎಂದಿರುತ್ತಾನೆ” “ನಮ್ಮ ಮನೆಯಲ್ಲಿ ಹಣವಿಲ್ಲ, ಎಲ್ಲಾ ಹಣವನ್ನು ಲಾಕರ್‌ನಲ್ಲಿಟ್ಟಿದ್ದೇವೆ” ಎಂದು ಸರೋಜಿನಿ ಡಿ. ಭಟ್‌ರವರ ಗಂಡ ಹೇಳಿದ್ದು, ಆಗ ಅಪರಿಚಿತ ವ್ಯಕ್ತಿಯು ಸರೋಜಿನಿ ಡಿ. ಭಟ್‌ರವರ ಗಂಡನಿಗೆ ಹೆದರಿಸಿ ಹಣಬೇಕೆಂದು ಕೇಳಿ, ಈ ವಿಚಾರವನ್ನು ಯಾರಿಗೂ ಮತ್ತು ಪೊಲೀಸ್‌ನವರಿಗೆ ತಿಳಿಸದಂತೆ ಹೇಳಿ ನಂತರ ಮನೆಯಿಂದ ಹೊರಟುಹೋದ. ಈ ಬಗ್ಗೆ ಸರೋಜಿನಿ ಡಿ. ಭಟ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 60/2015, ಕಲಂ:393 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: