Wednesday, April 22, 2015

PRESS NOTEಪತ್ರಿಕಾ ಪ್ರಕಟಣೆ

        ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಸಮೀಪ ಶಿರೂರು ನಲ್ಲಿ Scuba Diving  ಸಂಸ್ಥೆಯ Instructor ಬೆಂಗಳೂರಿನ ಐ.ಟಿ ಎಂಜಿನಿಯರ್‌ ಮಹಿಳೆಯೊಬ್ಬಳಿಗೆ  ಕಿರುಕುಳ ನೀಡಿದ ಬಗ್ಗೆ  ಪತ್ರಿಕಾ ಮಾದ್ಯಮಗಳಲ್ಲಿ, ಇಂಟರ್‌ ನೆಟ್‌ , ಟ್ವಿಟ್ಟರ್‌ , ಫೇಸ್‌ ಬುಕ್‌  ನಂತಹ ಸಾಮಾಜಿಕ ಜಾಲಾ ತಾಣಗಳಲ್ಲಿ ಬ್ಲಾಗ್‌ ಪೋಸ್ಟ್‌ ಆಗಿರುವುದು ಬಹಳ ದೊಡ್ಡ ಸುದ್ದಿಯಾಗಿರುತ್ತದೆ. ಇದರ ವಿಚಾರವಾಗಿ ಮೇಲೆ ತಿಳಿಸಿರುವ ಐ.ಟಿ ಎಂಜಿನಿಯರ್‌ ಮಹಿಳೆಯು ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು  ನೀಡಿದ್ದು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿಕೊಂಡ ತನಿಖಾಧಿಕಾರಿಯವರು ಆರೋಪಿಯನ್ನು ದಸ್ತಗಿರಿಮಾಡಿ ಮುಂದಿನ ಸೂಕ್ತ ಕ್ರಮ ಕೈಗೊಂಡು ದೋಷಾರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಕ್ಕೆ ನಿವೇದಿಸಿರುತ್ತಾರೆ. ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸಿರುವ Dreamz Scuba Diving ಸಂಸ್ಥೆಯ ಪರವಾನಿಗೆಯನ್ನು ರದ್ದು ಮಾಡಿರುತ್ತಾರೆ. ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಉಡುಪಿ ಜಿಲ್ಲೆ ಕರಾವಳಿ ತೀರದ ಪೊಲೀಸ್‌ ಠಾಣೆಗಳಲ್ಲಿ ಸಂಬಂದಿತ ಆರೋಪಿಯ ಬಗ್ಗೆ ರೌಡಿ ಹಾಳೆಯನ್ನು ತೆರೆಯಲಾಗಿದೆ. ಇಂತಹ ಪ್ರಕರಣದಿಂದ ಬೇರೆ ಯಾರಿಗಾದರೂ ತೊಂದರೆ ಉಂಟಾಗಿದ್ದು ಕಂಡು ಬಂದಲ್ಲಿ ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆ ರವರನ್ನು ತಕ್ಷಣವೇ ಸಂಪರ್ಕಿಸುವಂತೆ ತಿಳಿಸಲಾಗಿದೆ.

No comments: