Monday, April 06, 2015

Daily Crimes Reported as On 06/04/2015 at 07:00 Hrs

ಅಪಘಾತ ಪ್ರಕರಣ

  • ಹೆಬ್ರಿ:  ಪಿರ್ಯಾದಿದಾರರಾದ ರಾಘವೇಂದ್ರ (35 ವರ್ಷ) ಎಂಬುವವರು ದಿನಾಂಕ 05-04-2015 ರಂದು ತಮ್ಮ ಊರಿನವರಾದ ಕುಮಾರ ಮತ್ತು ಅವರ ಕುಟುಂಬದವರೊಂದಿಗೆ ಕೆ.ಎ.15.8032 ನೇ ಓಮಿನಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಲು ಆಗುಂಬೆ ಮಾರ್ಗವಾಗಿ ಸೀತಾನದಿಯಿಂದ ಮುಂದೆ ತಮ್ಮ ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಮುದ್ರಾಡಿ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿಗೆ ತಲುಪುವಾಗ್ಯೆ ಸಮಯ ಸುಮಾರು ಸಂಜೆ 4:20 ಗಂಟೆಗೆ ಎದುರುಗಡೆಯಿಂದ ಕೆಎ20.ಎಲ್‌.8041 ನೇ ಹೀರೊ ಹೊಂಡ ಬೈಕನ್ನು ಅದರ ಸವಾರ ಅನುಪ್ರಸಾದ್ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಹಾನಿ ಮಾಡಿರುವುದಲ್ಲದೇ ಆರೋಪಿ ಅನುಪ್ರಸಾದ್‌ ರವರು ಗಾಯಗೊಂಡಿರುತ್ತಾರೆ. ಈ ಬಗ್ಗೆ ಹೆಬ್ರಿ  ಠಾಣಾ ಅಪರಾಧ ಕ್ರಮಾಂಕ 20/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ:ದಿನಾಂಕ:05/04/2015 ರಂದು ಮಧ್ಯಾಹ್ನ 2:45 ಗಂಟೆಗೆ ಆರೋಪಿ ಅಶೋಕ್‌ ಪೂಜಾರಿ ತನ್ನ KA 20 P 2544  ನಂಬ್ರದ ಮಾರುತಿ ಸ್ವಿಪ್ಟ್‌ ಕಾರನ್ನು ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ, ಸಿದ್ದಾಪುರ ಗ್ರಾಮದ ಸಿದ್ದಾಪುರ ಪೇಟೆಯಲ್ಲಿರುವ ಶಿಶಿಲ ಹೊಟೇಲ್‌ ಎದುರು ಹೊಸಂಗಡಿ ಕಡೆಯಿಂದ ಸಿದ್ದಾಫುರ ಕಡೆಗೆ ರಸ್ತೆಯಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಸ್ಥಳದಲ್ಲಿ ರಸ್ತೆ ದಾಟುತ್ತಿದ್ದ ಸಂಜಿನಿ ಎಂಬ ಹೆಣ್ಣು ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಜಿನಿಯು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಸುಕುಮರ್‌ ಶೆಟ್ಟಿ (28), ತಂದೆ:ಶೇಖರ ಶೆಟ್ಟಿ ವಾಸ:ಚೋನಮನೆ, ಆಜ್ರಿ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 57/15 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ:  ದಿನಾಂಕ 05/04/2015 ರಂದು 11.00 ಗಂಟೆಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಮರಾಠಿ ತೋಟ  ಕ್ರಾಸ್  ಸಮೀಪ ಮೋಟಾರು ಸೈಕಲ್ KA 20 EC 9492 ನೇದನ್ನು ಅದರ ಸವಾರನು  ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅತಿವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ, ಪಿರ್ಯಾದಿ ಶಿವಾಜಿ ಎ.ಎಕೆ. ಇವರು ತನ್ನ ಹೆಂಡತಿಯ ಚಿಕ್ಕಮ್ಮ ಶ್ರೀಮತಿ ಉಮಾವತಿ ಎಂಬವರನ್ನು ತನ್ನ  ಮೋಟಾರು ಸೈಕಲ್ KA 20 EH 4270 ನೇದರಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಬಂದು ಮರಾಠಿ ತೋಟ ಕಡೆಗೆ ಹೋಗುವರೇ ಮೋಟಾರು ಸೈಕಲ್ ಇಂಡಿಕೇಟರನ್ನು ಬೆಳಗಿಸಿ ಬಲಕ್ಕೆ ತಿರುಗುವ ವೇಳೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಉಮಾವತಿಯವರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಜಖಂ ಗೊಂಡು, ಪಿರ್ಯಾದುದಾರರ ಬಲ ಕೈಗೆ ಮೂಳೆ ಮುರಿತದ ಗಾಯವಾಗಿ, ಉಮಾವತಿಯವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 20/15 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  •  ಬ್ರಹ್ಮಾವರ : ದಿನಾಂಕ; 05/04/2015 ರಂದು 18:30 ಗಂಟೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾಧ ಶ್ರೀ ಅರುಣ ಬಿ ನಾಯಕ್ ಹಾಗೂ ಸಿಬ್ಬಂದಿಗಳು ಗಾಂಧಿ ಮೈದಾನದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಹೊಸ ಮೀನು ಮಾರ್ಕೆಟ್ ಬಳಿ 18:45 ಗಂಟೆಗೆ ತಲುಪಿ ಧಾಳಿ ನಡೆಸಿ ಮಟ್ಕಾ ಜುಗಾರಿ ಆಡುತ್ತಿದ್ದ ಆರೋಪಿ ಉದಯ ಶೆಟ್ಟಿ (38) ಯನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 1290/- ಹಾಗೂ ಮಟ್ಕಾ ನಂಬ್ರ ಬರೆದ ಚೀಟಿ, ಒಂದು ಪೆನ್ನು ಸ್ವಾದೀನಪಡಿಸಿಕೊಂಡಿದ್ದು ಆರೋಪಿ ಸಂತೆಕಟ್ಟೆ ಅಂಬಾಗಿಲು ಲಿಯೋ ಕರ್ನಲಿಯೋ ರವರ ಸೂಚನೆಯಂತೆ ಜೂಜಾಟ ಆಡಿ ಸಂಗ್ರಹಿಸಿದ ಹಣ ಕಲ್ಯಾಣಿ ಮಾರ್ಕೆಟ್ ಶ್ರೀನಿವಾಸ ಇಂದಿರಾ ನಗರ ರವರಿಗೆ ಕೊಡುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 56/15 ಕಲಂ 78(1)(a)(vi) ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  •  ಬ್ರಹ್ಮಾವರ:ದಿನಾಂಕ:01/04/2015 ರಂದು ಬೆಳಗ್ಗೆ 6:30 ಗಂಟೆಗೆ ಹೆಗ್ಗುಂಜೆ ಗ್ರಾಮ ಹೊರಳಿಜೆಡ್ಡು ಎಂಬಲ್ಲಿ ಪಿರ್ಯಾದಿದಾರರಾದ ರಾಘವೇಂದ್ರ (33) ತಂದೆ:ಶೀನ ನಾಯ್ಕ ವಾಸ:ಕಜ್ಕೆ, ಸಿದ್ದನಾಯ್ಕರ ಮನೆ, ಮುದ್ದೂರು ಅಂಚೆರವರ ಅಕ್ಕ ಶಾರದ (35) ಗಂಡ:ಪುಟ್ಟಯ್ಯ ಎಂಬವರು ಅಡುಗೆ ಕೋಣೆಯಲ್ಲಿ ಒಲೆಯಲ್ಲಿ ದೋಸೆ ಮಾಡುವಾಗ ಧರಿಸಿದ್ದ ನೈಟಿಗೆ ಆಕಸ್ಮಾತಾಗಿ ಬೆಂಕಿ ತಾಗಿ ಬೊಬ್ಬೆ ಕೇಳಿ ರಾಘವೇಂದ್ರರವರ ಭಾವ ಪುಟ್ಟಯ್ಯ ಮತ್ತು ಇತರರು ಮೊದಲು ಮಣಿಪಾಲಕ್ಕೆ ಹೋಗಿ ಅಲ್ಲಿಂದ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್‌ಲಾಕ್ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಹೊಂದುತ್ತಿದ್ದವರು ದಿನಾಂಕ: 05/04/2015 ರಂದು 13:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿದೆ. ಅವರ ಮರಣದ ಬಗ್ಗೆ ಬೇರೆ ಸಂಶಯವಿರುವುದಿಲ್ಲ ಎಂಬುದಾಗಿ ರಾಘವೇಂದ್ರರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 18/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ 
  • ಬೈಂದೂರು:ಪಿರ್ಯಾದಿದಾರರಾದ ವೈ. ರಾಜೀವ ಶೆಟ್ಟಿ (51) ತಂದೆ:ಬಾಲಯ್ಯ ಶೆಟ್ಟಿ ವಾಸ:ಜರಿಮನೆ, ಮಸ್ಕಿ, ನಾವುಂದರವರು ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಅರೆಶಿರೂರು ಮೂರೂರು ದೇವಸ್ಥನಕ್ಕೆ ಹೋಗುವ ರಸ್ತೆಯ ಸಮೀಪ ಇರುವ ಕೆ.ಸಿ.ಡಿ.ಸಿ ಲಿಮಿಟೆಡ್‌ಗೆ ಸಂಬಂದಿಸಿದ ಗೇರು ಪ್ಲಾಂಟೇಶನ್‌ನಲ್ಲಿರುವ ಫಸಲನ್ನು ಕೊಯ್ಯುವ ಟೆಂಡರನ್ನು ಪಡೆದಿದ್ದು ಸದ್ರಿ ಪ್ಲಾಂಟೇಶನ್‌ನಲ್ಲಿ ಬಿಡಾರವನ್ನು ನಿರ್ಮಿಸಿ ಕೆಲಸಗಾರರನ್ನು ಇಟ್ಟು ಗೇರು ಬೀಜವನ್ನು ಕೊಯ್ದು ಸದ್ರಿ ಬಿಡಾರದಲ್ಲಿ ಸಂಗ್ರಹಿಸಿ ವಾರಕ್ಕೊಮ್ಮೆ ಗೇರು ಬೀಜ ತುಂಬಿದ ಚೀಲಗಳನ್ನು ಮನೆಗೆ ಕೊಂಡುಹೋಗುವುದಾಗಿರುತ್ತದೆ. ದಿನಾಂಕ 29/03/2015 ರಂದು ಕೆಲಸಗಾರರು ಸುಮಾರು 4 ಕ್ವಿಂಟಾಲ್‌ ಒಣಗಿದ ಗೇರು ಬೀಜಗಳನ್ನು 5 ಗೋಣಿ ಚೀಲದಲ್ಲಿ ತುಂಬಿಸಿ, ಬಿಡಾರದಲ್ಲಿ ಇಟ್ಟು ಕೆಲಸಗಾರರಾದ ಲಕ್ಷ್ಮಣ , ಶ್ರೀಧರ್‌ ಗೌಡ ಮತ್ತು ನಿಂಗು ಎಂಬವರು  ಬಿಡಾರದಲ್ಲಿ ಮಲಗಿಕೊಂಡಿದ್ದ ಸಮಯ ರಾತ್ರಿ 11:45 ಗಂಟೆಗೆ ಯಾರೋ ಕಳ್ಳರು ಬಿಡಾರದ ಒಳಗೆ ಬಂದು 5 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಗೇರು ಬೀಜಗಳನ್ನು ಹಾಗೂ ಲಕ್ಷ್ಮಣ ಎಂಬವರಿಗೆ ಸೇರಿದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವು ಮಾಡಿಕೊಂಡು ಹೋದ ಗೇರು ಬೀಜ ಮೌಲ್ಯ ಸುಮಾರು 20,000/- ರೂಪಾಯಿ ಆಗಿರುತ್ತದೆ. ಕಳ್ಳರು ಕಳವು ಮಾಡಿಕೊಂಡು ಹೋಗಿರುವುದನ್ನು ಬಿಡಾರದಲ್ಲಿ ಮಲಗಿದ್ದ ಶಂಕರ ಗೌಡ ಎಂಬವನು ನೋಡಿದ್ದು, ಜೀವ ಭಯದಿಂದ ಅಲ್ಲಿಯೇ ಮಲಗಿಕೊಂಡಿದ್ದು, ಕಳ್ಳರು ಹೋದ ನಂತರ ವೈ. ರಾಜೀವ ಶೆಟ್ಟಿರವರಿಗೆ ಕಳ್ಳತನವಾದ ವಿಷಯ ತಿಳಿಸಿರುವುದಾಗಿದೆ.ಈ ಬಗ್ಗೆ ವೈ. ರಾಜೀವ ಶೆಟ್ಟಿರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 77/2015 ಕಲಂ:380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.      

No comments: