Monday, April 06, 2015

Daily Crimes Reported as On 06/04/2015 at 17:00 Hrs

ಕಳವು ಪ್ರಕರಣ
  • ಬ್ರಹ್ಮಾವರ: ದಿನಾಂಕ: 05/04/2015 ರ ರಾತ್ರಿ 9:00 ಗಂಟೆಯಿಂದ ದಿನಾಂಕ: 06/04/2015 ರ ಬೆಳಿಗ್ಗೆ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಉಪ್ಪೂರು ಗ್ರಾಮದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಚೊಂಬು ತೂಕ ಸುಮಾರು 1 ಕೆಜಿ 240 ಗ್ರಾಂ, ಬೆಳ್ಳಿಯ ಎದೆ ಕವಚ 2 ತುಂಡು ತೂಕ ಸುಮಾರು 110 ಗ್ರಾಂ, ಬೆಳ್ಳಿಯ ಪಂಚಾರತಿ ಹರಿವಾಣ ಸಹಿತ ತೂಕ ಸುಮಾರು 385 ಗ್ರಾಂ, ಬೆಳ್ಳಿಯ ಮೂಷಿಕ -2 ಅಂದಾಜು ತೂಕ ಸುಮಾರು 200 ಗ್ರಾಂ, ಬೆಳ್ಳಿಯ ದೃಷ್ಠಿ -2, ಅಭಿಷೇಕ  ಮಾಡುವ ಶಂಖಕ್ಕೆ ಅಳವಡಿಸಿದ ಬೆಳ್ಳಿಯ ಕವಚ ಅಂದಾಜು ತೂಕ 25 ಗ್ರಾಂ, ತೀರ್ಥ ಮಂಟಪದ ಮರದ ದ್ವಾರಕ್ಕೆ ಅಳವಡಿಸಿದ ಹಿತ್ತಾಳೆ ತಗಡು (ಹೊದಿಕೆ) ಹಾಗೂ ಕಾಣಿಕೆ ಡಬ್ಬಿಯಲ್ಲಿರುವ ಚಿಲ್ಲರೆ ಹಣ ಅಂದಾಜು ರೂ 1,000/-. ಒಟ್ಟು ಅಂದಾಜು ಸುಮಾರು ಒಂದು ಲಕ್ಷ  ಮೌಲ್ಯದ  ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಪ್ರಕರಣ ಕ್ರಮಾಂಕ: 57/15 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ:  ಕಿಟ್ಟ ಮೇಸ್ತ್ರಿ (65) ಎಂಬುವವರು 3 ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ಹೆಂಡತಿ ಕುಸುಮಾರವರ ಹೆಸರನ್ನು ಹೇಳಿಕೊಂಡು ಕೊರಗುತ್ತ ವಿಪರೀತ ಶರಾಬು ಸೇವನೆ ಮಾಡುವ ಚಟವನ್ನು ಬೆಳೆಸಿಕೊಂಡು ಒಂದು ರೀತಿ ಮಾನಸಿಕವಾಗಿ ವರ್ತಿಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06-04-2015 ರಂದು ಸಮಯ ಸುಮಾರು ಬೆಳಿಗ್ಗೆ 6:50 ರಿಂದ 7:30 ಗಂಟೆಯ ಮಧ್ಯದ ಅವಧಿಯಲ್ಲಿ ಕಾರ್ಕಳ ತಾಲೂಕು, ನಾಡ್ಪಾಲು ಗ್ರಾಮದ ಕತ್ತೆ ಬೆಳಾರ್ ನೆಲ್ಲಿಕಟ್ಟೆ ಎಂಬಲ್ಲಿಯ ತನ್ನ ಮನೆಯ ಎದುರು ಇರುವ ಮಾವಿನ ಮರಕ್ಕೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 12/15, ಕಲಂ 174    ಸಿ.ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಸೂರ್ಯ ನಾರಾಯಣ ಹೊಳ್ಳ   ಪ್ರಾಯ:70 ವರ್ಷ ಎಂಬುವರು ದಿನಾಂಕ:05/04/2015 ರಂದು ಮಧ್ಯಾಹ್ನ ಸುಮಾರು 2:30 ಗಂಟೆ ಸಮಯಕ್ಕೆ ಉಡುಪಿ ತಾಲೂಕು ನಂಚಾರು ಗ್ರಾಮದ ಹೆಸ್ಕುಂದ ಎಂಬಲ್ಲಿರುವ ತನ್ನ ಮನೆಯಲ್ಲಿ ಬೀಡಾ ತಯಾರಿಸುವಾಗ ಸುಣ್ಣವೆಂದು ತಿಳಿದು ಅಲ್ಲಿಯೇ ಹತ್ತಿರದಲ್ಲಿ ಬಿಸಾಡಲು ಇಟ್ಟಿದ ಅವಧಿ ಮೀರಿದ ಕ್ರಿಮಿನಾಶಕ ಪುಡಿಯನ್ನು ಹಾಕಿಕೊಂಡು ಬೀಡಾ ತಿಂದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುವಾಗ ದಿನಾಂಕ:06/04/2015 ರಂದು ಬೆಳಿಗ್ಗೆ 7:40 ಗಂಟೆಗೆ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 17/15, ಕಲಂ 174 ಸಿ.ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
ಹಲ್ಲೆ ಪ್ರಕರಣ 
  • ಮಲ್ಪೆ: ದಿನಾಂಕ 05/04/2015 ರಂದು ರಾತ್ರಿ 12:00 ಗಂಟೆ ಸಮಯಕ್ಕೆ ಪಿರ್ಯಾದಿ ಪ್ರಶಾಂತ್ ತಿಂಗಳಾಯ ಇವರು ತನ್ನ ಸ್ನೇಹಿತನಾದ ಕೇಶವ ಎಂಬಾತನೊಂದಿಗೆ ಮೆಹೆಂದಿ ಕಾರ್ಯಕ್ರಮ ಮುಗಿಸಿ ಮನೆಗೆ ಬರುವಾಗ ಕಡೆಕಾರು ಗ್ರಾಮ ಪಡುಕೆರೆಯ ಶಾಲೆಯ ಬಳಿ ಆರೋಪಿ ಪ್ರಜ್ವಲ್ ಎಂಬಾತನು ಮದ್ಯಪಾನ ಸೇವಿಸಿ ಅಮಲಿನಲ್ಲಿ ರಸ್ತೆಗೆ ಅಡ್ಡವಾಗಿ ಮಲಗಿದ್ದು ಪಿರ್ಯಾದಿದಾರರ ಮುಂದೆ ಹೋಗಲು ಅಸಾಧ್ಯವಾದ ಕಾರಣ ಆತನನ್ನು ಎಬ್ಬಿಸಲು ಹೋದಾಗ ಪ್ರಜ್ವಲ್ ನು ಪಿರ್ಯಾದಿದಾರರ ಕೋಲರ್ ಪಟ್ಟಿ ಹಿಡಿದು ಹೊಡೆದಿರುತ್ತಾನೆ. ಊರಿನವರು ತಪ್ಪಿಸಿಬಿಟ್ಟಿರುತ್ತಾರೆ. ನಂತರ ಪಿರ್ಯಾದಿದಾರರು ಮತ್ತು ಕೇಶವ ಮನೆಗೆ ಹೋಗಿ ವಾಪಾಸ್ಸು ಬಂದು ಶ್ರೀ ಪಂಡರಿನಾಥ ಭಜನಾ ಮಂದಿರ ಕನಕೋಡು, ಪಡುಕೆರೆಯ ಅವರಣದೊಳಗೆ ಮಲಗಿದ್ದು, ದಿನಾಂಕ 06/04/2015 ರಂದು ರಾತ್ರಿ 01:30 ಗಂಟೆಯ ಸಮಯಕ್ಕೆ ಆರೋಪಿ ಪ್ರಜ್ವಲ್ ಎಂಬಾತನು ಚೇತನ್ ಎಂಬಾತನೊಂದಿಗೆ ಭಜನಾಮಂದಿರದ ಆವರಣದೊಳಗೆ ಬಂದು ಪಿರ್ಯಾದಿದಾರರಿಗೆ ಹಾಗೂ ಕೇಶವ ಎಂಬವರಿಗೆ ಮರದ ರೀಪಿನಿಂದ ಹೊಡೆದು, ಕೈಯಿಂದ ಹೊಡೆದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಲ್ಪೆ  ಠಾಣಾ ಅಪರಾಧ ಕ್ರಮಾಂಕ 51/2015 ಕಲಂ 324, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣ 
  • ಮಲ್ಪೆ:  ಸಂತೋಷ್ ಖಾರ್ವಿ ಸಿಪಿಸಿ ಮಲ್ಪೆ ಠಾಣೆ ಇವರು ದಿನಾಂಕ 05/04/2015 ರಂದು ಗಸ್ತು ಕರ್ತವ್ಯದಲ್ಲಿರುವ ಸಮಯ ದಿನಾಂಕ 06/04/2015 ರಂದು ಬೆಳಿಗ್ಗೆ 1:30 ಗಂಟೆಗೆ ನೇಜಾರು ಚೆಕ್‌ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 02:00 ಗಂಟೆ ಸಮಯಕ್ಕೆ ಕೆಎ 20 ಎನ್ 1316 ನೇ ಸ್ಕೋರ್ಪಿಯೋ ವಾಹನ ಚಾಲಕನು ಚೆಕ್‌ಪೋಸ್ಟ್ ಹತ್ತಿರ ತನ್ನ ಬಾಬ್ತು ವಾಹನವನ್ನು ಕಲ್ಯಾಣಪುರದಿಂದ ಹೂಡೆ ಕಡೆಗೆ ಬರುತ್ತಿರುವಾಗ ಕೆಂಪು ಬಣ್ಣದ ಲೈಟ್ ಇರುವ ಬ್ಯಾಟನ್ ನನ್ನು ತೋರಿಸಿ ನಿಲ್ಲಿಸಲು ಸೂಚಿಸಿದಾಗ ಆತನು ಪಿರ್ಯಾದಿದಾರರ ಸೂಚನೆಯನ್ನು ನಿರ್ಲಕ್ಷಿಸಿ ಕರ್ತವ್ಯದಲ್ಲಿರುವ ಪಿರ್ಯಾದಿದಾರರರ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತೆ ಮತ್ತು ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ಸ್ಕೋರ್ಪಿಯೋ ವನ್ನು ಅತೀ ವೇಗದಿಂದ ಹಾಗೂ ಅಜಾಗರೂಕತೆಯಿಂದ ಹೂಡೆ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಈ ಬಗ್ಗೆ ಮಲ್ಪೆ  ಠಾಣಾ ಅಪರಾಧ ಕ್ರಮಾಂಕ 52/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: