Friday, April 03, 2015

Daily Crime Reports As on 03/04/2015 at 07:00 Hrs

ಅಪಘಾತ ಪ್ರಕರಣ
  • ಪಡುಬಿದ್ರಿ: ದಿನಾಂಕ: 02/04/2015 ರಂದು ಬೆಳಿಗ್ಗೆ 11:50 ಗಂಟೆಗೆ ತೆಂಕ ಎರ್ಮಾಳ್ ಗ್ರಾಮದ ಅದಮಾರು ಕ್ರಾಸ್ ಬಳಿ ರಾ.ಹೆ. 66 ರಲ್ಲಿ ಪಿರ್ಯಾಧಿ ರಾಘು ಪೂಜಾರಿ ಇವರು ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿರುವ ಸಂದರ್ಭದಲ್ಲಿ ಏಕಮುಖ ರಸ್ತೆಯ ನಿಯಮಕ್ಕೆ ವಿರುದ್ಧವಾಗಿ ಬಸ್ ನಂಬ್ರ ಕೆಎ 20 ಬಿ 4428 ನೇ ಬಸ್ಸಿನ ಚಾಲಕನು ತನ್ನ ಬಾಬ್ತು ಬಸ್ಸನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಢಾಮಾರು ರಸ್ತೆಗೆ ಬಿದ್ದು, ಫಿರ್ಯಾದುದಾರರಿಗೆ ಸೊಂಟದ ಮೂಳೆಮುರಿತ ಹಾಗೂ ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 45/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣ
  • ಕೋಟ:  ದಿನಾಂಕ:01/04/2015 ರಂದು ಸಂಜೆ 6:30 ಗಂಟೆಗೆ ಪಿರ್ಯಾದಿ ಶ್ರೀಮತಿ ಲೀಲಾ ಇವರು ಉಡುಪಿ ತಾಲೂಕು ಪಾರಂಪಳ್ಳಿ ಗ್ರಾಮದ ಶಾಲೆ ತೋಟದಲ್ಲಿರುವ ಮನೆಯ ಹೊರಗೆ ಕುಳಿತು ಕೊಂಡಿರುವಾಗ ಅವರ ಪರಿಚಯದ ಸಂದೇಶ, ನಾಗರತ್ನ, ಉದಯ, ಸುರೇಶ, ವೇದಾ ಎಂಬುವರು ಅವರ ಮನೆಯ ಅಂಗಳಕ್ಕೆ ಪ್ರವೇಶ ಮಾಡಿ ತಾವು ಮಾಡಿದ ಕೆಲಸಕ್ಕೆ ಸರಿಯಾಗಿ ಸಂಬಳ ಕೊಡಲಿಲ್ಲವೆಂದು ಹೇಳಿ ಅವಾಚ್ಯ ಶಬ್ದದಿಂದ ಬೈದು ನಾಗರತ್ನ ಎಂಬುವರು ಪಿರ್ಯಾದುದಾರರ ಎಡ ಕೈ ಹಿಡಿದು ತಿರುಚಿದ ಪರಿಣಾಮ, ಅವರ ಎಡ ಕೈ ಎಡ ಬದಿ ಹಾಗೂ ಎದೆಯ ಎಡಭಾಗದಲ್ಲಿ ನೋವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 60/15 ಕಲಂ 143, 147, 447, 323, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ಶ್ರೀಮತಿ ನಾಗರತ್ನ ಇವರು ಪಿರ್ಯಾದಿದಾರಳ ಅಜ್ಜಿಮನೆಯಾದ ಸಾಲಿಗ್ರಾಮದ ಪಾರಂಪಳ್ಳಿ ಶಾಲೆ ತೋಟ ಎಂಬಲ್ಲಿಗೆ ದಿನಾಂಕ:01/04/2015 ರಂದು ಸಂಜೆ 5:30 ಗಂಟೆಗೆ  ಹೋದಾಗ ಪಿರ್ಯಾದಿದಾರಳ ಸಂಬಂಧಿಕರಾದ ಚಂದ್ರ,ಲೀಲಾ,ವಿಜೇತಾ,ವಿಶ್ಮಿತಾ,ವಿಜೇತಾ ದೇವಾಡಿಗ ಹಾಗೂ ಇತರ ಮೂರು ಜನರು ಅವಾಚ್ಯವಾಗಿ ಬೈದು ಲೀಲಾ ಕೈಯಿಂದ ಹೊಡೆದು ಪರಚಿದ್ದು, ವಿಜೇತನು ಹೊಟ್ಟೆಗೆ ಕಾಲಿನಿಂದ ತುಳಿದು,ವಿಜೇತ ದೇವಾಡಿಗನು ಎಳೆದು ಕೊಂಡು ಹೋಗಿ ತೆಂಗಿನ ಮರಕ್ಕೆ ಗುದ್ದಿದ ಪರಿಣಾಮ ಹೊಟ್ಟೆಗೆ ಎದೆಗೆ ನೋವಾಗಿರುತ್ತದೆ. ವಿಜೇತ ಹಾಗೂ ಚಂದ್ರ ಸೇರಿ ಪಿರ್ಯಾದಿದಾರಳ ಗಂಡನ ಹೊಟ್ಟೆಗೆ ವಿಕೆಟ್ ಬ್ಯಾಟ್‌ನಿಂದ ಹೊಟ್ಟೆಗೆ ಗುದ್ದಿ,ಇತರರು ದೂಡಿ ಹಾಕಿ  ಕಾಲಿನಿಂದ ತುಳಿದಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 61/15 ಕಲಂ 143, 147, 148, 504, 506, 323, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ: ಬುಡ್ಡು ಕುಲಾಲ್ತಿ  ಪ್ರಾಯ:88 ವರ್ಷ ಎಂಬುವರು ಕಳೆದ 10 ವರ್ಷಗಳಿಂದ ವರ್ಷಗಳಿಂದ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು ಪೂರ್ತಿ ಗುಣಮುಖರಾಗದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:02/04/2015 ರಂದು 12:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿರುವ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 16/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: