ದಿನಾಂಕ: 22/06/2014 ರಂದು ಉಮೇಶ
ಪೂಜಾರಿ ಪ್ರಾಯ 25 ವರ್ಷ ತಂದೆ: ಸದಾಶಿವ ಪೂಜಾರಿ ವಾಸ: ಕಾರ್ಕಡ ಪಡುಬೈಲು,
ಸಾಲಿಗ್ರಾಮ-ಅಂಚೆ, ಕಾರ್ಕಡ-ಗ್ರಾಮ,
ಉಡುಪಿ-ತಾಲೂಕು ಎಂಬವರು ತನ್ನ ಬಾಬ್ತು KA-20-EE-7548ನೇ ನಂಬ್ರದ ಕೆಂಪು ಕಪ್ಪು
ಮಿಶ್ರಿತ ಬಜಾಜ್ ಪಲ್ಸರ್ ಮೋಟಾರು ಸೈಕಲನ್ನು ಉಡುಪಿ ತಾಲೂಕು ಗಿಳಿಯಾರು ಗ್ರಾಮದ ಕೋಟ ಬಸ್ ಸ್ಟ್ಯಾಂಡ್
ಬಳಿಯಿರುವ ಸ್ವಸ್ತಿಕ್ ಹಾರ್ಡವೇರ್ ಬಳಿಯಲ್ಲಿ ಹ್ಯಾಂಡ್ ಲಾಕ್ ಮಾಡದೇ ನಿಲ್ಲಿಸಿ ಕುಂದಾಪುರಕ್ಕೆ ಹೋಗಿದ್ದು,
ರಾತ್ರಿ 11:00 ಗಂಟೆಗೆ ವಾಪಾಸ್ಸು ಬಂದು ನೋಡಲಾಗಿ ಸದ್ರಿ ಮೋಟಾರು ಸೈಕಲ್ ಇಲ್ಲದೇ ಇದ್ದು,
ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದ್ರಿ ಕಳವಾದ
ಬೈಕ್ ಬಗ್ಗೆ ಸುತ್ತೆಲ್ಲಾ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು
ಕಳವಾದ ಮೋಟಾರು ಸೈಕಲನ್ನು ಹುಡುಕಿ ಕೊಡುವಂತೆ ಕೋರಿಕೊಂಡು ನೀಡಿದ ಲಿಖಿತ ಪಿರ್ಯಾದಿಯಂತೆ ಕೋಟ ಠಾಣಾ ಅ.ಕ್ರ. 144/2014 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿದೆ.
ನಂತರ
ಆರೋಪಿಯ ಯಶವಂತ @ ಯಶು ಪ್ರಾಯ 19ವರ್ಷ ತಂದೆ:
ರಾಜೇಶ ವಾಸ: ಬಸವ ಲಿಂಗಪ್ಪ ನಗರ ಪಚ್ಚನಾಡಿ, ಮಂಗಳ ಜ್ಯೋತಿ ಹಿರಿಯ
ಪ್ರಾಥಮಿಕ ಶಾಲೆ ಹತ್ತಿರ ವಾಮಂಜೂರು ಮಂಗಳೂರು ಎಂಬುವನು ಮೋಟಾರ್ ಸೈಕಲ್ ನಂಬ್ರವನ್ನು ಕೆ.ಎ. 19.
ಈ. ಜಿ.5753 ನೇ ದಾಗಿ ಬದಲಾಯಿಸಿ ಕೊಂಡು ಸದ್ರಿ ಮೋಟಾರ್ ಸೈಕಲ್‌ನಲ್ಲಿ ತಿರುಗಾಡುತ್ತಿದ್ದವನನ್ನು ಕದ್ರಿ ಪೊಲೀಸರು ಮೋಟಾರ್ ಸೈಕಲ್‌ನ್ನು ಸ್ವಾಧೀನಪಡಿಸಿಕೊಂಡಿದ್ದು
ಆ ಸಮಯ ಆರೋಪಿಯು ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿರುವುದಾಗಿದೆ. ಕೋಟ ಪೊಲೀಸ್ ಠಾಣಾ ಅ.ಕ್ರ 144/2014 ಕಲಂ 379 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದ ಮೋಟಾರ್ ಸೈಕಲ್‌ನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ವಶಕ್ಕೆ ತೆಗೆದುಕೊಂಡು ಪ್ರಕರಣದ ಪಿರ್ಯಾಧಿದಾರರಿಗೆ ಬಿಟ್ಟು ಕೊಡಲಾಗಿತ್ತು. ಈ
ದಿನ ದಿನಾಂಕ 26/03/2015 ರಂದು ಅರುಣ್ ಬಿ ನಾಯಕ್ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ. ಕಮಲಾಕರ್ ಆರ್ ನಾಯ್ಕ್ ಪಿ.ಎಸ್.ಐ ಕೋಟ ಠಾಣೆ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಪ್ರಕರಣದ ಆಪಾದಿತನಾದ ಯಶವಂತ @ ಯಶು ಪ್ರಾಯ 19ವರ್ಷ ತಂದೆ:
ರಾಜೇಶ ವಾಸ: ಬಸವ ಲಿಂಗಪ್ಪ ನಗರ ಪಚ್ಚನಾಡಿ, ಮಂಗಳ ಜ್ಯೋತಿ ಹಿರಿಯ
ಪ್ರಾಥಮಿಕ ಶಾಲೆ ಹತ್ತಿರ ವಾಮಂಜೂರು ಮಂಗಳೂರು ಎಂಬುವನನ್ನು ದಸ್ತಗಿರಿ
ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ
ಬಂಧನ ವಿಧಿಸಿರುವುದಾಗಿದೆ.
No comments:
Post a Comment