Thursday, March 26, 2015

Daily Crimes Reported as On 26/03/15 at 17:00 Hrs

ಮಟ್ಕಾ  ಪ್ರಕರಣ
  • ಕುಂದಾಪುರ: ದಿನಾಂಕ 25/03/2015 ರಂದು ನಾಸಿರ್‌ ಹುಸೈನ್‌‌ ಪಿಎಸ್‌ಐ ಕುಂದಾಪುರ ಪೊಲೀಸ್ ಠಾಣೆ   ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಮೀನು ಮಾರ್ಕೇಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 19:55 ಗಂಟೆಗೆ ದಾಳಿ ನಡೆಸಿ, ಆರೋಪಿ ಶಾಂತರಾಮ ಶೆಟ್ಟಿ (28 ವರ್ಷ) ಮತ್ತು  ಮಹಾಬಲ ಪೂಜಾರಿ ( 49) ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆರೋಪಿಯು ಮಟ್ಕಾ-ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂ. 1010 /- ನ್ನು ಸ್ವಾಧೀನಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 92/2015 ಕಲಂ 78(i) (iii) ಕೆಪಿ ಆ್ಯಕ್ಟ್‌‌ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
 ಹಲ್ಲೆ ಪ್ರಕರಣ
  • ಉಡುಪಿ: ದಿನಾಂಕ:25/03/2015ರಂದು  ರಾತ್ರಿ 21:30ಗಂಟೆಗೆ ಕೆ,ಎಸ್‌.ಆರ್‌.ಟಿ.ಸಿ ಬಸ್ಸ್‌‌ ನಿಲ್ದಾಣದಲ್ಲಿ ಫಿರ್ಯಾದಿ ದುರ್ಗಾಪ್ಪ ಮಲಗಿಕೊಂಡ ಸಮಯ ಪಕ್ಕದಲ್ಲಿ ಮಲಗಿದ್ದ ಆಶ್ವಥ್‌ ಆದಮಾರು ವಾಸಿ ಇವರಿಗೆ ಸ್ವಲ್ಪ ದೂರದಲ್ಲಿ ಮಲಗು ಎಂದು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಹತ್ತಿರದಲ್ಲಿದ್ದ  ಸೋಡಾ ಬಾಟಲಿಯನ್ನು ತೆಗೆದುಕೊಂಡು ತಲೆಗೆ ಹೊಡೆದ ಪರಿಣಾಮ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 65/2015 ಕಲಂ 504, 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಶಂಕರನಾರಾಯಣ: ದಿನಾಂಕ 26/03/2015 ರಂದು ಬೆಳಿಗ್ಗೆ 8:30 ಗಂಟೆಯ ಸಮಯಕ್ಕೆ ಪಿರ್ಯಾದಿ ಶ್ರೀಮತಿ ಯಶೋದಾ ಇವರು ಪಿರ್ಯಾಧಿದಾರರ ಅಕ್ಕನ ಮನೆಯಾದ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆ ಬಡಾಬಾಳು ಎಂಬಲ್ಲಿಂದ ಹಾಲು ತರಲು ಹಾಲು ಡೈರಿಗೆ ಹೋದಾಗ ಪಿರ್ಯಾಧಿದಾರರ ತಂದೆಯವರು ಗಡಿ ಗುರುತು ಮಾಡಿ ಕೊಟ್ಟಿರುವ ಜಮೀನಿನಲ್ಲಿ ಆರೋಪಿಗಳಾದ ಅಣ್ಣ ಬಿ ಟಿ ಮಂಜು, ಅಕ್ಕ ಪದ್ಮಾವತಿ ಹಾಗೂ ಅಕ್ಕನ ಮಗ ಸದಾನಂದ ಜೆ ಸಿ ಬಿ ಯಂತ್ರದಿಂದ ಕೆಲಸ ನಡೆಸುತ್ತಿರುವುದನ್ನು ನೋಡಿ ಪಿರ್ಯಾಧಿದಾರರು ಬಳಿಗೆ ಹೋಗಿ ವಿಚಾರಿಸಿದಾದ ಆರೋಪಿಗಳು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಪಿರ್ಯಾಧಿದಾರರ ಅಕ್ಕನ ಮಗ ಸದಾನಂದ ಪಿರ್ಯಾಧಿದಾರರಿಗೆ ಹೊಡೆಯಲು ಕೈ ಎತ್ತಿದಾಗ ಪಿರ್ಯಾಧಿದಾರರ ಅಣ್ಣ ಬಿ ಟಿ ಮಂಜು ಪಿರ್ಯಾಧಿದಾರರ ರಟ್ಟೆ ಹಿಡಿದು ದೂಡಿದ್ದು ಅಲ್ಲದೇ ಮೂವರು ಆರೋಪಿಗಳು ಸೇರಿ ಅಕ್ರಮವಾಗಿ ತಡೆದು ನಿಲ್ಲಿಸಿ ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 49/15  ಕಲಂ: 506, 341, 504 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಇತರೇ ಪ್ರಕರಣ
  • ಬೈಂದೂರು: ದಿನಾಂಕ 25-3-2015 ರಂದು  ಪಿ ಎಸ್ ಬೈಂದೂರು ರವರು ಠಾಣಾ ಸರಹದ್ದಿನಲ್ಲಿ  ರಾತ್ರಿರೌಂಡ್ಸ್ ಕರ್ತವ್ಯದಲ್ಲಿರುವಾಗದಿನಾಂಕ 26/03/15 ರಂದು ಬೆಳಗ್ಗಿನ ಜಾವ 04:50 ಗಂಟೆಗೆ ಬೈಂದೂರು ಸ್ಟೇಟ್  ಬ್ಯಾಂಕ್ ಆಫ್  ಮೈಸೂರು ಹತ್ತಿರ ಕತ್ತಲೆಯಲ್ಲಿ ಓರ್ವ ವ್ಯಕ್ತಿಯು ಮುಖವನ್ನು ಕರವಸ್ತ್ರದಲ್ಲಿ ಮರೆ ಮಾಚಿ ಅಡಗಿಕೊಂಡಿರುವುದಾಗಿ ಮಾಹಿತಿಯ ಮೇರೆಗೆ  ಸ್ಟೇಟ್  ಬ್ಯಾಂಕ್ ಆಫ್  ಮೈಸೂರು ಸಮೀಪ  ಇಲಾಖಾ ವಾಹನವನ್ನು ನಿಲ್ಲಿಸಿ  ಅಲ್ಲಿಂದ ಕತ್ತಲೆಯಲ್ಲಿ ಟಾರ್ಚ್ ಲೈಟಿನ ಬೆಳಕಿನ ಸಹಾಯದಿಂದ ಹುಡುಕಾಡಲಾಗಿ ಕತ್ತಲೆಯಲ್ಲಿ ಓರ್ವ ವ್ಯಕ್ತಿ ತನ್ನ ಮುಖವನ್ನು ಕರವಸ್ತ್ರದಿಂದ ಮರೆಮಾಚಿ  ಅಡಗಿ ಕುಳಿತುಕೊಂಡಿದ್ದು, ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದವನ್ನು ಸಾರ್ವಜನಿಕರ ಸಹಾಯದಿಂದ ಬೆಳಿಗ್ಗೆ 5-05 ಗಂಟೆಗೆ ಹಿಡಿದು ವಿಚಾರಿಸಲಾಗಿ ಆತನು ಸರಿಯಾದ ಹೆಸರು ವಿಳಾಸವನ್ನು ಹೇಳದೇ ತೊದಲುತ್ತಿದ್ದು, ಅಡಗಿಕೊಂಡಿದ್ದುದರ ಬಗ್ಗೆ ಸರಿಯಾದ ಕಾರಣ ತಿಳಿಸದೇ ಇದ್ದು, ನಂತರ ಈತನ ಹೆಸರು   ಕುಟ್ಟಿ ಮುರುಗನ್‌,  ಪ್ರಾಯ-20  ವರ್ಷ, ತಂದೆ-ರಾಜು   ವಾಸ: ಮುಂಡ್ರುಮಾಚಿ ಮುನಾಲ್ ತಿರುಗು ಪ್ರಮಾರ್ ಗ್ರಾಮ, ಸೇಲಂ ಜಿಲ್ಲೆ ತಮಿಳುನಾಡು ಎಂದು ತಿಳಿಸಿದ್ದು ಈ ಬಗ್ಗೆ ಬೈಂದೂರು  ಠಾಣಾ .ಕ್ರ 67-2015 ಕಲಂ 96 ()  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ : ದಿನಾಂಕ 25/03/2015 ರಂದು ಸಂಜೆ ಮನೆಯಿಂದ ಕೊಟೇಶ್ವರದ ಕಡೆಗೆ ಹೋಗಿದ್ದ ಮಹಾಬಲ ಪೂಜಾರಿ (50) ರವರು  21:45 ಗಂಟೆಗೆ ಕೊಟೇಶ್ವರ ಸಮೀಪದ ಮಾರ್ಕೋಡು  ಎಂಬಲ್ಲಿನ ಕೊಂಕಣ ಪುಡ್‌‌ ಎಂಬ ಫ್ಯಾಕ್ಟರಿಯ ಮಾಡಿನ ಕಬ್ಬಿಣ ಪೈಪ್ಗೆ ನೈಲಾನ್ಹಗ್ಗದಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: