ಅಪಘಾತ
ಪ್ರಕರಣ
- ಬೈಂದೂರು: ದಿನಾಂಕ: 26/03/2015 ರಂದು ಸಮಯ ಸುಮಾರು 07:20 ಗಂಟೆಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಯಡ್ತರೆ ಜಂಕ್ಷನ್ ಬಳಿ ಪಿರ್ಯಾದಿ ಹರೀಶ ಸಹಸವಾರರಾಗಿ ಪ್ರಯಾಣಿಸುತ್ತಿದ ಕೆ ಎ 15 ವಿ 4110 ನೇ ನಂಬ್ರದ ಮೋಟಾರು ಸೈಕಲ್ ಅನ್ನು ಅದರ ಸವಾರ ಸಂತೋಷ ನಾಯ್ಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಯಾವೂದೇ ಸೂಚನೆ ನೀಡಿದೇ ರಾಹೆ 66 ರಿಂದ ಗೋಳಿಹೊಳೆ ಕಡೆ ಹೋಗುವ ರಸ್ತೆಗೆ ಸವಾರಿ ಮಾಡಿದ ಕಾರಣ ಹಿಂದಿನಿಂದ ಅಂದರೆ ಬೈಂದೂರು ಕಡೆಯಿಂದ ಉಪ್ಪುಂದ ಕಡೆಗೆ ಬರುತ್ತಿದ್ದ ನೋಂದಣಿ ಸಂಖ್ಯೆ ಇಲ್ಲದ ಹೊಸ ಮೋಟಾರು ಸೈಕಲ್ ಪಿರ್ಯಾಧಿದಾರರು ಸಹ ಸವಾರರಾಗಿದ್ದ ಕೆ ಎ 15 ವಿ 4110 ನೇ ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈಗೆ ಗಾಯವಾಗಿದ್ದು, ಹಾಗೂ ನೋಂದಣಿ ಇಲ್ಲದ ಮೋಟಾರ್ ಸೈಕಲಿನಲ್ಲಿದ್ದ ಒಬ್ಬರಿಗೆ ತಲೆಗೆ ರಕ್ತಗಾಯವಾಗಿದ್ದು, ಇನ್ನೊಬ್ಬನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 68/15 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬೈಂದೂರು: ದಿನಾಂಕ: 24-03-2015 ರಂದು 20:45 ಗಂಟೆಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಕುಸುಮಾ ಇಲೆಕ್ಟ್ರಿಕಲ್ ಸಮೀಪ ರಾ.ಹೆ 66 ರಲ್ಲಿ ಕೆ.ಎ 20 ಇಡಿ 4192 ನೇ ಮೋಟಾರ್ ಸೈಕಲನ್ನು ಅದರ ಸವಾರ ಗಣೇಶ್ ಖಾರ್ವಿ ಎಂಬುವವರು ಕೃಷ್ಣ ಖಾರ್ವಿಯವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಾಮಾರು ರಸ್ತೆಯ ಬಲಬದಿಗೆ ಚಲಾಯಿಸಿ ಸ್ಕಿಡ್ ಆಗಿ ಮಣ್ಣು ರಸ್ತೆಗೆ ಬಿದ್ದಿದ್ದು ಪರಿಣಾಮ ಕೃಷ್ಣ ಖಾರ್ವಿಯವರಿಗೆ ಬಲಕಾಲು ಹಾಗೂ ಎಡಕೈಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ ಹಾಗೂ ಗಣೇಶ ಖಾರ್ವಿಯವರಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 69/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕೋಟ: ಪಿರ್ಯಾದಿ ರಾಜೀವ ಶೆಟ್ಟಿ ಇವರು ದಿನಾಂಕ:26/03/2015 ರಂದು ಮಧ್ಯಾಹ್ನ 3:30 ಗಂಟೆಗೆ ತನ್ನ ಬಾಬ್ತು ಕೆ.ಎ:03 ಸಿ:7057 ನೇ ನಂಬ್ರದ ಓಮಿನಿ ಕಾರಿನಲ್ಲಿ ವೆಂಕಟೇಶ, ಪ್ರೇಮ, ಮಂಜಿ, ಸುಧೀರ ಎಂಬುವರನ್ನು ಕುಳ್ಳಿರಿಸಿ ಕೊಂಡು ಮಣಿಕಲ್ ದೇವಸ್ಥಾನದಿಂದ ವಾಪಾಸು ಮನೆಗೆ ಹೋಗುವರೆ ಸಾಯಿಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್ ಕಡೆಗೆ ಬರುವಾಗ ವಡ್ಡರ್ಸೆ ಗ್ರಾಮದ ಶಾಲೆ ಸಮೀಪ ಕೆ.ಎ:20 ಬಿ:4912ನೇ ನಂಬ್ರದ ಓಮಿನಿ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಡಾಂಬಾರು ರಸ್ತೆಯ ತೀರ ಬಲಕ್ಕೆ ಕಾರನ್ನು ಚಲಾಯಿಸಿ ಪಿರ್ಯಾದಿದಾರರ ಬಾಬ್ತು ಕೆ.ಎ:03 ಸಿ:7057 ನೇ ನಂಬ್ರದ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮ, ಮಂಜಿ ರವರಿಗೆ ರವರಿಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 55/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ
ಪ್ರಕರಣ
- ಕಾಪು: ಪಿರ್ಯಾದಿ ಕ್ರಿಸ್ತಿನ್ ಪಿಂಟೊ ಇವರು ಉದ್ಯಾವರ ಗ್ರಾಮದ ಸಂಪಿಗೆ ನಗರ “ಗುಡ್ ಶಫರ್ಡ್” ಮನೆಯಲ್ಲಿ ವಾಸವಾಗಿದ್ದು . ದಿನಾಂಕ 25-03-2015 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದುದಾರರ ಗಂಡ ಜಾರ್ಜ ಪಿಂಟೊ ನು ವಿಪರೀತ ಮದ್ಯಸೇವನೆ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಕೈಯಿಂದ ಹೊಡೆದಿದ್ದು, ಆ ಸಮಯ ತಪ್ಪಿಸಲು ಬಂದ ಪಿರ್ಯಾದುದಾರರ ಮಗನಾದ ಕೆನಡಿ ಪಿಂಟೋ ರವರಿಗೆ ಸಹ ದೂಡಿರುತ್ತಾರೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 66/2015 ಕಲಂ 232,324,504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment