ಮಟ್ಕಾ ದಾಳಿ ಪ್ರಕರಣ
- ಬೈಂದೂರು: 27/03/15 ರಂದು 13:00 ಗಂಟೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ಸಂತೋಷ ಎ ಕಾಯ್ಕಿಣಿ ರವರು ಸಿಬ್ಬಂದಿಗಳೊಂದಿಗೆ ಯಡ್ತರೆ ಗ್ರಾಮದ ಬೈಂದೂರು ಬಸ್ ಸ್ಟ್ಯಾಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಆರೋಪಿ ಚಂದ್ರ ಶೆಟ್ಟಿಗಾರ ಪ್ರಾಯ 38 ವರ್ಷ ತಂದೆ ದಿ.ಪದ್ದ ಸೆಟ್ಟಿಗಾರ, ಅಣ್ಣಪ್ಪಯ್ಯ ಸಭಾಭವನ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆತನು ಮಟ್ಕಾ ಜುಗಾರಿಯಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 490/-, ಮಟ್ಕಾ ನಂಬ್ರ ಬರೆದ ಚೀಟಿ -1, ಹಾಗೂ ಬಾಲ್ ಪೆನ್ನು-1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/15 ಕಲಂ 78 (III) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
- ಬೈಂದೂರು: ದಿನಾಂಕ 26/03/2015 ರಂದು ಪಿರ್ಯಾದಿದಾರರಾದ ಮಹಾಬಲ ಪ್ರಾಯ 27 ವರ್ಷ ತಂದೆ: ರಾಮ ಗೌಡ ವಾಸ: ಹೆರಿಯಕ್ಲು, ಅರೆಶಿರೂರು, ಗೋಳಿ ಹೊಳೆ ಅಂಚೆ, ಕುಂದಾಪುರ ತಾಲೂಕು ರವರು ತಮ್ಮ ಸಂಬಂಧಿಕರಾದ ಶಾಂತಾರಾಮ ಗೌಡ ಹಾಗೂ ಉದಯ ಗೌಡ ಎಂಬವರೊಂದಿಗೆ ತ್ರಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ತಮ್ಮ ತಮ್ಮ ಮೋಟಾರು ಸೈಕಲ್ ಗಳಲ್ಲಿ ಎನ್ ಹೆಚ್ 66 ರಲ್ಲಿ ತ್ರಾಸಿಯಿಂದ ಬೈಂದೂರು ಕಡೆಗೆ ಬರುತ್ತಿದ್ದು, ಪಿರ್ಯಾದಿದಾರರು ಒಂದು ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡಿದ್ದು, ಇನ್ನೊಂದು ಮೋಟಾರು ಸೈಕಲನ್ನು ಉದಯ ಗೌಡನು ಸವಾರಿ ಮಾಡಿಕೊಂಡಿದ್ದು, ಸದ್ರಿ ಮೋಟಾರು ಸೈಕಲಿನಲ್ಲಿ ಶಾಂತಾರಾಮ ಗೌಡನು ಸಹಸವಾರನಾಗಿದ್ದು, ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ವನದುರ್ಗಾ ಕ್ರಾಸ್ ಸಮೀಪ ತಲುಪುವಾಗ ಸಮಯ ಸುಮಾರು ರಾತ್ರಿ 11:00 ಗಂಟೆಗೆ, ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕೆ ಎ 47 6610 ನಂಬ್ರದ ಪಿಕ್ ಅಪ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಎನ್ ಹೆಚ್ 66 ರ ಬಲಬದಿಗೆ ಚಲಾಯಿಸಿಕೊಂಡು ಬಂದು, ಯಾವುದೇ ಸೂಚನೆ ನೀಡದೇ ವನದುರ್ಗಾ ದೇವಸ್ಥಾನದ ಕ್ರಾಸ್ ರಸ್ತೆಗೆ ತಿರುಗಿಸಿದ ಪರಿಣಾಮ ತ್ರಾಸಿಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಉದಯ ಗೌಡನು ಸವಾರಿ ಮಾಡಿಕೊಂಡಿದ್ದ ಕೆ ಎ 20ಇಎಫ್ 7907 ನಂಬ್ರದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಮೋಟಾರು ಸೈಕಲಿನಲ್ಲಿದ್ದ ಇಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಸಹ ಸವಾರ ಶಾಂತಾರಾಮ ಗೌಡನ ತಲೆಗೆ ತೀವ್ರ ತರಹದ ರಕ್ತಗಾಯವಾಗಿ ಹಲ್ಲು ಮುರಿದಿರುತ್ತದೆ ಮತ್ತು ಉದಯ ಗೌಡ ರವರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಮಹಾಬಲ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/15 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ
- ಕೋಟ: ದಿನಾಂಕ 27/03/2015 ರಂದು ಪಿರ್ಯಾದಿದಾರರಾದ ವೀರೇಂದ್ರ ಬೋವಿ (34) ವಾಸ:ಸುಗೋಡಿ ಮನೆ, ನಾಲ್ತೂರು ರಸ್ತೆ, ಹಾರ್ದಳ್ಳಿ-ಮಂಡಳ್ಳಿಗ್ರಾಮ, ಕುಂದಾಪುರ ತಾಲೂಕು ರವರು ಬೆಳಿಗ್ಗೆ 10:00 ಗಂಟೆಗೆ ಅವರ ಮನೆಯ ಹತ್ತಿರದಲ್ಲಿರುವ ಗೇರು ಬೀಜ ತೋಟದಲ್ಲಿ ಅವರ ಅಣ್ಣ ಗಣೇಶ ಹಾಗೂ ತಾಯಿ ವಸಂತಿಯವರೊಂದಿಗೆ ಕೆಲಸ ಮಾಡಿ ಕೊಂಡಿರುವಾಗ, ಆರೋಪಿಗಳಾದ ಪಿರ್ಯಾದಿದಾರರ ಪರಿಚಯದ ಕೃಷ್ಣಯ್ಯ ಶೆಟ್ಟಿ, ಅಶೋಕ ಶೆಟ್ಟಿ, ಮಹಾಬಲ ಕುಲಾಲ್ ಮತ್ತು 2-3 ಜನ ಅಪರಿಚಿತ ವ್ಯಕ್ತಿಗಳು ಕೆ.ಎ:20 ಎನ್:6043 ನೇ ನಂಬ್ರದ ಮಾರುತಿ 800 ಕಾರಿನಲ್ಲಿ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಅವರ ಅಣ್ಣ ಗಣೇಶ ಹಾಗೂ ತಾಯಿ ವಸಂತಿಯವರನ್ನು ಕೈಯಿಂದ ದೂಡಿ ಬೀಳಿಸಿ, ಕಾಲಿನಿಂದ ತುಳಿದಿರುತ್ತಾರೆ, ಇದನ್ನು ಕಂಡ ಪಿರ್ಯಾದಿದಾರರು ತಡೆಯಲು ಹೋದಾಗ ಆರೋಪಿಗಳು ತಮ್ಮ ಕೈಯಲ್ಲಿದ್ದ ಕತ್ತಿ, ದೊಣ್ಣೆಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಲ್ಲದೇ ಜಾತಿ ನಿಂದನೆ ಮಾಡಿ ಹೋಗಿರುತ್ತಾರೆ ಎಂಬುದಾಗಿ ವೀರೇಂದ್ರ ಬೋವಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/15 ಕಲಂ 143, 147, 148, 323, 447, 504, 506 ಜೊತೆಗೆ 149 ಐಪಿಸಿ ಮತ್ತು ಕಲಂ 3(1)(10) ಎಸ್‌ಸಿ/ಎಸ್‌ಟಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment