Wednesday, December 17, 2014

Press Note


ಉಡುಪಿ ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್ ಇವರ  ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಶ್ರೀ ಸಂತೋಷ್ ಕುಮಾರ್  ಮತ್ತು  ಪೊಲೀಸ್  ಉಪಾಧೀಕ್ಷಕರು, ಉಡುಪಿ  ಉಪ ವಿಭಾಗರವರಾದ  ಡಾ. ಪ್ರಭುದೇವ ಬಿ. ಮಾನೆ ರವರ  ಮೇಲ್ವಿಚಾರಣೆಯಲ್ಲಿ  ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ  ಶ್ರೀ ಅರುಣ ಬಿ. ನಾಯಕ ಮತ್ತು ಅವರ  ಅಪರಾಧ  ಪತ್ತೆ ದಳದ  ಸಿಬ್ಬಂದಿಯವರಾದ ಸುದೇಶ್ ಶೆಟ್ಟಿ , ಪ್ರಸಾದ್ ಶೆಟ್ಟಿ, ರಮೇಶ್ ರವರು  ಕಲ್ಲುಕೋಪ್ಪ ಹಣೆಗೇರೆ ಗ್ರಾಮ ತೀರ್ಥಹಳ್ಳಿ ತಾಲೂಕಿನ ನಿವಾಸಿಯಾದ ರಾಘವೇಂದ್ರ .ಎ @ ರಾಘು ಎಂಬವನನ್ನು ದಿನಾಂಕ 16/12/2104 ರಂದು 12.00 ಗಂಟೆಗೆ  ಸಕಲೇಶಪುರ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು ಬ್ರಹ್ಮಾವರ ವೃತ್ತ ಕಛೇರಿಗೆ ತಂದು ಹಾಜರು ಪಡಿಸಿದ್ದುಆರೋಪಿಯನ್ನು ದಸ್ತಗಿರಿ ಮಾಡಿ ವಾಹನವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಸಫಲರಾಗಿರುತ್ತಾರೆ. ಸದ್ರಿ ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ  ಆರೋಪಿತನಿಂದ KA 19 B 7696 TATA ACE  ವಾಹನ ವನ್ನು  ವಶಪಡಿಸಿಕೊಂಡಿದ್ದುಇದರ  ಮೌಲ್ಯ ಸುಮಾರು  1 ಲಕ್ಷವಾಗಿರುತ್ತದೆ.

              ದಿನಾಂಕ:  29/04/2013  ರಂದು 13.೦೦ ಗಂಟೆಯಿಂದ 13.30 ಗಂಟೆಯ ಮಧ್ಯದ ವೇಳೆಗೆ ಉಡುಪಿ ತಾಲೂಕು ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಸಂತೆ ಮಾರ್ಕೆಟ್ ಎದುರು ನಿಲ್ಲಿಸಿದ್ದ  KA 19 B 7696 ನೇ  TATA ACE  ವಾಹನ ವನ್ನು ಅದರ ಚಾಲಕ  ರಾಘು ಎಂಬವರು ಕಳವು ಮಾಡಿಕೊಂಡು ಹೋಗಿದ್ದು . ಈ ಬಗ್ಗೆ ಬ್ರಹ್ಮಾವರ ಠಾಣಾ ಅ.ಕ್ರ 199/2013 ಕಲಂ 379 ಯಂತೆ ಪ್ರಕರಣ ದಾಖಲಾಗಿದ್ದು ವಾಹನದ ಮೌಲ್ಯ ರೂಪಾಯಿ 1,00,000/- ಆಗಿರುತ್ತದೆ.
     
               ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಯಾದ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್ಮಾನ್ಯ ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ಉಡುಪಿ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಪ್ರಭುದೇವ ಮಾನೆರವರು ತನಿಖಾಧಿಕಾರಿಯವರಿಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಈ ತಂಡ ಕೈಗೊಂಡ ಕ್ರಮದ ಬಗ್ಗೆ ಪೊಲೀಸ್‌‌‌ ವರಿಷ್ಠಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. 

         ಈ ಯಶಸ್ವಿ ಕಾರ್ಯಚರಣೆಯಲ್ಲಿ  ಶ್ರೀ ಅರುಣ ಬಿ. ನಾಯಕಸಿ.ಪಿ.ಐ ಬ್ರಹ್ಮಾವರ ಮತ್ತು ಸಿಬ್ಬಂದಿಯವರಾದ ಶ್ರೀ ಸುದೇಶ್ ಶೆಟ್ಟಿಶ್ರೀ  ಜಯರಾಮ್, ಶ್ರೀ ರಾಘವೇಂದ್ರ ಕೆಶ್ರೀ ಪ್ರಸಾದ್ ಶೆಟ್ಟಿ, ಶ್ರೀ ರಮೇಶ, ಶ್ರೀ  ಜೀವನ್ ಮತ್ತು        ಶ್ರೀ ರತ್ನಾಕರ  ಇವರುಗಳು ಪಾಲ್ಗೊಂಡಿರುತ್ತಾರೆ

No comments: