ಅಪಘಾತ ಪ್ರಕರಣಗಳು
- ಶಿರ್ವಾ: ದಿನಾಂಕ 28.12.2014 ರಂದು ಪಿರ್ಯಾದಿದಾರರಾದ ನಾಗರಾಜ @ ನಾಗಪ್ಪ ಶಂಕರಪುರ ಮೂಡುಬೆಟ್ಟು ಗ್ರಾಮ ರವರು ಮೂಡುಬೆಳ್ಳೆ ಚರ್ಚ್ ನಲ್ಲಿ ಶಾಮಿಯಾನದ ಕೆಲಸ ಮುಗಿಸಿ ತನ್ನ ಕೆಎ 20 ಆರ್ 4264 ನೇ ಮೋಟಾರ್ ಸೈಕಲ್ ನಲ್ಲಿ ಮೂಡುಬೆಳ್ಳೆ - ಪಡುಬೆಳ್ಳೆ ರಸ್ತೆಯಾಗಿ ಶಂಕರಪುರಕ್ಕೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 05:16 ಗಂಟೆಗೆ ಮೂಡುಬೆಳ್ಳೆ ಪುತ್ರೋಟ್ಟು ಎಂಬಲ್ಲಿ ಪಡುಬೆಳ್ಳೆ ಕಡೆಯಿಂದ ಓರ್ವ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರಿಗೆ ಬಲಕೈ ಯ ಮಣಿಗಂಟಿನ ಬಳಿ ಮೂಳೆ ಮುರಿತವಾಗಿದ್ದು, ಎದೆಯ ಮೇಲೆ ತರಚಿದ ರಕ್ತಗಾಯ ಹಾಗೂ ಬಲಕಣ್ಣಿನ ಕೆಳಗೆ ತರಚಿದ ಗಾಯ ತುಟಿಗೆ ಹಾಗೂ ಗದ್ದದಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಹಲ್ಲು ಕಿತ್ತು ಹೋಗಿರುತ್ತದೆ ಅಪಘಾತ ನಡೆಸಿದ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿರುತ್ತಾನೆ ಎಂಬುದಾಗಿ ನಾಗರಾಜ @ ನಾಗಪ್ಪ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/14 ಕಲಂ 279, 338 ಐಪಿಸಿ & 134 ಎ & ಬಿ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
- ಉಡುಪಿ: ಪಿಯಾದಿದಾರರಾದ ರಾಜಮೂರ್ತಿ ಭಟ್ಟ (56) ತಂದೆ: ದಿ.ವಾಸುದೇವ ಭಟ್ಟ ವಾಸ: ರಾಮಕೃಷ್ಣ ನಿಲಯ ಪಡುಬೆಳ್ಳೆ ಕುಂಜಾರಿಗಿರಿ ಬೆಳ್ಳೆ ಗ್ರಾಮ ಎಂಬವರ ಔಷಧಿ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸದಾನಂದ ಎಂಬವರು ದಿನಾಂಕ 28/12/2014 ರಂದು ಮಧ್ಯಾಹ್ನ 12.45 ಗಂಟೆಗೆ ಕೆಎ 20 ಇಎಫ್ 5150 ನೇ ACCESS 125 ಸ್ಕೂಟರ್‌ನಲ್ಲಿ ಬೀರಪ್ಪ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಲ್ಪೆಗೆ ಔಷಧಿ ಕೊಡಲು ಹೋಗುತ್ತಿರುವಾಗ ಉಡುಪಿ ಬನ್ನಂಜೆ ನಾಗದೇವರ ಸನ್ನಿಧಿ ತಿರುವಿನಲ್ಲಿ ಎದುರಿನಿಂದ ಹೋಗುತ್ತಿದ್ದ ಒಂದು ಕಾರು ಬಲಕ್ಕೆ ತಿರುಗಿಸಿದಾಗ, ಸ್ಕೂಟರ್ ಸವಾರ ಸದಾನಂದ ರವರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸವಾರರಿಬ್ಬರು ರಸ್ತೆಗೆ ಬಿದ್ದು ಸದಾನಂದ ರವರಿಗೆ ತರಚಿದ ಗಾಯ ಹಾಗೂ ಸಹ ಸವಾರನಿಗೆ ಬಲಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ಮೂಳೆ ಮುರಿತವಾಗಿರುತ್ತದೆ.ಈ ಅಪಘಾತಕ್ಕೆ ಸ್ಕೂಟರ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನಯೇ ಕಾರಣವಾಗಿರುತ್ತದೆ ಎಂಬುದಾಗಿ ರಾಜಮೂರ್ತಿ ಭಟ್ಟ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/14 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment