ಗಂಡಸು ಕಾಣೆ ಪ್ರಕರಣ
- ಹಿರಿಯಡ್ಕ: ಪಿರ್ಯಾದುದಾರರಾದ ದೇವದಾಸ್ (51), ತಂದೆ ದಿ. ದೇಜು ಸಫಲಿಗ ವಾಸ ಕುಸುಮ ನಿಲಯ, ಜೋಡುಕಟ್ಟೆ ದಖಾರಸು ಮನೆ ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಅಣ್ಣ ಮಹಾಬಲ ಸಫಲಿಗ (63) ಎಂಬವರು ಕಳೆದ ಅನೇಕ ವರ್ಷಗಳಿಂದ ಫೀಟ್ಸ್ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು, ದಿನಾಂಕ 24/12/2014ರಂದು 16:00 ಗಂಟೆಯಿಂದ 16:30 ಗಂಟೆಯ ನಡುವೆ ತನ್ನ ವಾಸ್ತವ್ಯದ ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದು, ಈ ವರೆಗೂ ಮನೆಗೆ ವಾಪಾಸ್ಸು ಬರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ದೇವದಾಸ್ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 114/14 ಕಲಂ ಗಂಡಸು ಕಾಣೆಯಂತೆ ಪ್ರಕರಣದಾಖಲಿಸಿ ತನಿಖೆಯಲ್ಲಿರುತ್ತದೆ.
- ಕಾಪು: ದಿನಾಂಕ 29/12/2014ರಂದು ಪಿರ್ಯಾದುದಾರರಾದ ಪ್ರವೀಣ್ ಕುಮಾರ್ (44) ತಂದೆ ದಿ. ಬೂದ ಎಸ್ ಕೋಟ್ಯಾನ್ ವಾಸ ಶರಧಿ ಗುರುವಪ್ಪ ಕಾಂಪೌಂಡ್ ಅಶೋಕ್ ನಗರ ಅಂಚೆ ಕೋಡಿಕಲ್ ಮಂಗಳೂರು ದ.ಕ ಇವರು ತನ್ನ ಬಾಬ್ತು ಕಾರನ್ನು ರಾಹೇ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಂದು ಮದ್ಯಾಹ್ನ ಸುಮಾರು 3:20 ಗಂಟೆಗೆ ಮೂಳೂರು ಗ್ರಾಮದ ಗೋಕುಲ್ ಕಾಂಪ್ಲೆಕ್ಸ್ ಹತ್ತಿರ ತಲುಪುತ್ತಿದಂತೆ ಓರ್ವ ಮೋಟಾರ್ ಸೈಕಲ್ ಸವಾರನು ತನ್ನ ಬಾಬ್ತು ಮೋಟಾರ್ ಸೈಕಲ್ ಸವಾರ ಗುರುರಾಜ್ ಆಚಾರ್ಯ ಇವರು ಕೆಎ 20ಎಲ್ 7076ನೇದನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ರಸ್ತೆಯ ಪೂರ್ವಬದಿಯಿಂದ ಪಶ್ಚಿಮ ಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಕಾರಿನ ಎದುರು ಬದಿಯ ಎಡ ಬದಿಗೆ ಡಿಕ್ಕಿ ಹೊಡೆದನು ಅದರ ಪರಿಣಾಮ ಮೋಟಾರ್ ಸೈಕಲ್ ಸವಾರನು ರಸ್ತೆಗೆ ಬಿದ್ದನು. ಈ ಅಪಘಾತಕ್ಕೆ ಮೋಟಾರ್ ಸೈಕಲ್ ಸವಾರನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ. ಎಂಬುದಾಗಿ ಪ್ರವೀಣ್ ಕುಮಾರ್ ಇವರು ನೀಡಿದ ದೂರನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 240/2014 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಬ್ರಹ್ಮಾವರ: ದಿನಾಂಕ 29/12/2014ರಂದು 14:30 ಗಂಟೆಗೆ ಪಿರ್ಯಾದುದಾರರಾದ ರವೀಂದ್ರ ಪೂಜಾರಿ (3) ತಂದೆ ದಿ. ನಾರಾಯಣ ಪೂಜಾರಿ ವಾಸ ತೆಂಕು ತೋಟ ಮನೆ, ಬೈಕಾಡಿ ಗ್ರಾಮ, ಉಡುಪಿ ತಾಲೂಕು ಇವರು ಮೊಟಾರು ಸೈಕಲ್ ನಂ ಕೆಎ 20ಆರ್ 3566ರಲ್ಲಿ ಸಹ ಸವಾರನಾಗಿ ಬಸವರಾಜ್ ರವರನ್ನು ಕೂರಿಸಿಕೊಂಡು ನಾಗರಮಠ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಬಾರ್ಕೂರು ಕಲ್ಲುಚಪ್ಪರ ಜಂಕ್ಷನ್ ಗೆ ತಲುಪಿದಾಗ ಬೆಣ್ಣೆಕುದ್ರು ಕಡೆಯಿಂದ ಕಲ್ಲುಚಪ್ಪರದ ಕಡೆಗೆ ಆಪಾದಿತ ಕಾರು ಚಾಲಕ ರಾಜೇಶ್ ಎಂಬವರು ತನ್ನ ಬಾಬ್ತು ಕಾರು ನಂಬ್ರ ಕೆಎ 20ಪಿ 1584ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಸಹಸವಾರನಾಗಿದ್ದ ಬಸವರಾಜ್ ರವರಿಗೆ ಕಾರಿನ ಎಡಭಾಗದ ಬಂಪರ್ ಬಲಕಾಲಿನ ಕೋಲು ಕಾಲಿಗೆ ಡಿಕ್ಕಿ ಹೊಡೆದು ತೀವ್ರಗಾಯವಾಗಿರುತ್ತದೆ ಎಂಬುದಾಗಿ ರವೀಂದ್ರ ಪೂಜಾರಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 236/2014 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಕೋಟ: ಪಿರ್ಯಾದಿದಾರರಾದ ಹುಸೇನ್ ಶಾದತ್ (38), ತಂದೆ ದಿ. ಮೊಹಮ್ಮದ್ ಇಸುಬ್, ವಾಸ ಸಾಸ್ತಾನ, ಕೋಡಿ ಕನ್ಯಾನ ಗ್ರಾಮ ಇವರು ದಿನಾಂಕ 29/12/2014ರಂದು ಸಮಯ 10:30 ಗಂಟೆಗೆ ತನ್ನ ಬಾಬ್ತು ಆಟೋರಿಕ್ಷಾ ನಂಬ್ರ ಕೆಎ 20ಎ 7487ನೇದರಲ್ಲಿ ಕೋಡಿ ಕನ್ಯಾನದ ತನ್ನ ಮನೆಯಿಂದ ಸಾಸ್ತಾನ ರಿಕ್ಷಾ ನಿಲ್ದಾಣಕ್ಕೆ ಹೋಗುವಾಗ ಕೋಡಿ ಕನ್ಯಾನ ಗ್ರಾಮದ ಮಾಸ್ಟರ್ ಸ್ಟೋರ್ ಎದುರು ತಲುಪುವಾಗ ಆರೋಪಿಯು ಕೆಎ 20ಡಿ 2179ನೇ ನಂಬ್ರದ ಟಾಟಾ ಏಸ್ ಗೂಡ್ಸ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿ ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಕೆಎ 20ಎ 7487ನೇ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದು ತೀವ್ರ ರಕ್ತ ಗಾಯಗೊಂಡ ಪಿರ್ಯಾಧಿದಾರರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕೊಂಡು ಹೋಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ ಎಂಬುದಾಗಿ ಹುಸೇನ್ ಶಾದತ್ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 238/2014 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಗಂಗೊಳ್ಳಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮರವಂತೆ ಗ್ರಾಮದ ಪಿರ್ಯಾದಿದಾರರಾದ ಎಂ. ಮನ್ಸೂರ್ ಇಬ್ರಾಹಿಂ ತಂದೆ ದಿ. ಇಬ್ರಾಹಿಂ ಸಾಹೇಬ್, ಅನೀಶ್ ಮಂಜಿಲ್, ಮರವಂತೆ ಗ್ರಾಮ, ಕುಂದಾಪುರ ತಾಲೂಕು. ಉಡುಪಿ ಜಿಲ್ಲೆ. ರವರ ಬಾಬ್ತು ಕೆಎ 20ಸಿ 4232ನೇ ಈಚರ್ 1055 ಮೋಡೆಲ್‌ನ ಇನ್ಸುಲೇಟರ್ ವಾಹನವನ್ನು ಹಾಗೂ ಎಮ್.ಬಿ.ಎಫ್ ಮಾರ್ಕಿನ 200 ಬಾಕ್ಸ್ ಗಳನ್ನು ದಿನಾಂಕ 01/02.2014 ರಂದು ಕೇರಳಕ್ಕೆ ಮೀನು ಲೋಡು ಸಾಗಾಟ ಮಾಡಲು ಬಾಡಿಗೆಗಾಗಿ ಆರೋಪಿಗಳಾದ 1) ರಶೀದ್ ಪುರಕ್ಕಾಡ್ 2) ಸೆಲ್ವಾ 3) ಸೆಲ್ವಾ ರವರ ಹೆಂಡತಿಯಾದ ಸೆಲ್ವಾಪಾಪ ಎಂಬವರು ಪಡೆದುಕೊಂಡು ಹೋಗಿದ್ದು. ಆ ಬಳಿಕ ಸದ್ರಿ ಆಪಾದಿತರುಗಳು ವಾಹನವನ್ನು ಬಾಡಿಗೆ ನಡೆಸಿ, ಪಿರ್ಯಾದಿದಾರರಿಗೆ ಬಾಡಿಗೆಯನ್ನು ನೀಡದೆ, ವಾಹನವನ್ನು ಹಾಗೂ 200 ಬಾಕ್ಸ್ ಗಳನ್ನು ಹಿಂದಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ಎಂ. ಮನ್ಸೂರ್ ಇಬ್ರಾಹಿಂ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 215/2014 ಕಲಂ 406, 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment