ಹಲ್ಲೆ ಪ್ರಕರಣ
- ಪಿರ್ಯಾಧಿ ಆನಂದ ಮರಕಾಲ (56 ವರ್ಷ),ತಂದೆ: ಬಸವ ಮರಕಾಲ ವಾಸ:ಸಾಸ್ತಾನ ,ಅಂಚೆ,ಗುಂಡ್ಮಿ ಗ್ರಾಮ ಇವರು ದಿನಾಂಕ:30/12/2014 ರಂದು ಸಂಜೆ 8:00 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್‌ನಲ್ಲಿರುವಾಗ ಕೆ.ಎ:20 ಡಿ:456 ನೇ ನಂಬ್ರದ ಬಸ್‌ನ್ನು ಅದರ ಚಾಲಕನು ಪೆಟ್ರೋಲ್ ಬಂಕ್ ಎದುರುಗಡೆ ಇರುವ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಬದಿಯಲ್ಲಿ ನಿಲ್ಲಿಸಿದಾಗ ಸದ್ರಿ ಬಸ್‌ನಲ್ಲಿದ್ದ ಸುಮಾರು 10 ಮಂದಿ ಪ್ರಯಾಣಿಕರು ಇವರ ಪೆಟ್ರೋಲ್ ಬಂಕ್‌ಗೆ ಮೂತ್ರ ವಿರ್ಸಜನೆಗೆ ಬಂದಾಗ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿರುವ ಸಂತೋಷ ಎಂಬವರು ಒಂದೆ ಸಲ ಹತ್ತು ಮಂದಿ ಮೂತ್ರ ವಿಸರ್ಜನೆ ಮಾಡ ಬೇಡಿ ಎಂದು ಹೇಳಿದಾಗ ಕುಡಿತದ ಅಮಲಿನಲ್ಲಿದ್ದ ಆರೋಪಿಗಳಾದ ದಿಲ್‌ಶನ್,ಸಿಲ್ವಾಸ್ಟರ್ ಲೋಬೋ,ಮೇಲ್ವಿನ್,ಸ್ನೇಹಲ್,ಸುನಿಲ್ ಪ್ರದೀಪ್ ಡಿಸೋಜ,ಮತ್ತು ಅಶ್ವಿನ್ ಡಿಸೋಜ,ಹಾಗೂ ಇತರರು ಸೇರಿ ಸಂತೋಷನಿಗೆ ಕೈಯಿಂದ ಹೊಡೆದಾಗ ಆತನು ಸ್ಥಳದಲ್ಲಿ ತಲೆ ತಿರುಗಿ ಬಿದ್ದಾಗ ,ಅಲ್ಲಿಯೆ ಇದ್ದ ಪ್ರಶಾಂತ ಎಂಬವರು ತಡೆಯಲು ಹೋದಾಗ ಆರೋಪಿಗಳು ಆತನಿಗೂ ಹಲ್ಲೆ ಮಾಡಿರುವುದಾಗಿದೆ.ಅಲ್ಲದೇ ಗಲಾಟೆಯನ್ನು ಬಿಡಿಸಲು ಹೋದ ಪಿರ್ಯಾಧಿದಾರರಿಗೆ ನೀನು ಹತ್ತಿರ ಬಂದರೆ ನಿನ್ನ ಪೆಟ್ರೋಲ್ ಬಂಕ್‌ಗೆ ಬೆಂಕಿಹಾಕಿ ಸುಟ್ಟು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.ಆರೋಪಿಗಳು ನೆಡೆಸಿದ ಹಲ್ಲೆಯಿಂದ ಗಾಯ ಗೊಂಡ ಸಂತೋಷ ಹಾಗೂ ಪ್ರಶಾಂತ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 239/2014 ಕಲಂ 143,147,323,506,149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment