ಅಪಘಾತ ಪ್ರಕರಣ
- ಬ್ರಹ್ಮಾವರ: ದಿನಾಂಕ 30/12/2014 ರಂದು ಬೆಳಿಗ್ಗೆ 10:45 ಗಂಟೆಗೆ ಉಡುಪಿ ತಾಲೂಕು, ಕುಮ್ರಗೋಡು ಗ್ರಾಮದ, ಉಪ್ಪಿನಕೋಟೆ, ಲೂವಿಸ್ ಡೇಸಾ ರವರ ಮನೆಯ ಎದುರು ರಾ.ಹೆ 66 ರಲ್ಲಿ ಆರೋಪಿ ಬಸ್ಸು ನಂಬ್ರ ಕೆಎ-20-ಬಿ-813 ನೇದರ ಚಾಲಕ ರಾಘವೇಂದ್ರ ಆಚಾರ್ಯ ಎಂಬವರು ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿ ಬಸ್ಸ್ ನ್ನು ನಿಲ್ಲಿಸಿದ ಪರಿಣಾಮ, ಬಸ್ಸ್ ನ ಹಿಂದುಗಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ ಕೆಎ-20-ಇಸಿ-0642 ಮೋಪೆಡ್‌ನ ಸವಾರ ವಿಘ್ನೇಶ್ ಕಾರ್ವಿ ರವರು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಪೆಡ್ ಸವಾರ ವಿಘ್ನೇಶ್ ಕಾರ್ವಿ ರವರಿಗೆ ತಲೆಗೆ, ಕೈಕಾಲುಗಳಿಗೆ ರಕ್ತಗಾಯವಾಗಿರುವುದಾಗಿದೆ ಎಂಬುದಾಗಿ ಸಂತೋಷ ಕಾರ್ವಿ (30) ತಂದೆ ಶಂಕರ ಕಾರ್ವಿ ವಾಸ: ಶ್ರೀ ಲಕ್ಷ್ಮೀ ನಿಲಯ ಕೋಡಿ ಹೊಸಬೆಂಗ್ರೆ ಕೋಡಿ ಗ್ರಾಮ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 237/2014 ಕಲಂ: 279.337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಕಾರ್ಕಳ: ತಮಿಳು ನಾಡು ರಾಜ್ಯದ ತಿರುವನ್ನೂರು ನೇತಾಜಿನಗರ ವಾಸಿ 51 ವರ್ಷ ಪ್ರಾಯದ ಕೆ ಶೇಖರ್ ತಂದೆ ಕೆ.ಪಿ.ಕುಪ್ಪುಸ್ವಾಮಿ ರವರು ದಿನಾಂಕ: 29/12/2014 ರಂದು ಕರ್ನಾಟಕ ರಾಜ್ಯ ಪುಣ್ಯ ಕ್ಷೇತ್ರ ದರ್ಶನ ಮಾಡುವರೇ ತನ್ನ ಸ್ನೇಹಿತರಾದ ಆರ್ ಚಂದ್ರ ಶೇಖರನ್, ಕೆ ಮಾಯನ್, ಪಿ ಪಾಂಡ್ಯನ್,ಎ ತಿರುಮಲೈ ರವರೊಂದಿಗೆ ಚೈನೈಯಿಂದ ಹೊರಟು ದಿನಾಂಕ: 30/12/2014 ರಂದು ಬೆಳಿಗ್ಗೆ 4:00 ಗಂಟೆಗೆ ಕೆಎ 19 ಸಿ 9576 ನೇ ನಂಬ್ರದ ಟ್ಯಾಕ್ಸಿಯಲ್ಲಿ ಹೊರಟು ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದ ಕಾರ್ಕಳ ಮಾರ್ಗವಾಗಿ ಹೊರನಾಡು ಕಡೆಗೆ ಪ್ರಯಾಣ ಮಾಡುತ್ತಿರುವ ಸಮಯ 11:30 ಗಂಟೆಗೆ ದಾರಿ ಮಧ್ಯೆ ವಾಹನ ನಿಲ್ಲಿಸಿ ಮೂತ್ರ ಮಾಡುವಾಗ ಕುಸಿದು ಬಿದ್ದ ಕೆ ಶೇಖರ್ ರವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಪರೀಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೆ ಶೇಖರ್ ರವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬುದಾಗಿ ಆರ್ ಚಂದ್ರ ಶೇಖರನ್ ತಂದೆ: ದಿ ಎಸ್ ರಾಜು, ವಾಸ: ನಂ 131, 1 ನೇ ಮೈನ್ ರೋಡ್ ಎ.ಜಿ ಎಸ್ ಕಾಲನಿ, ಕುಟ್ಟಿವಾಕ್ಕಂ ಚನ್ನೈ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 54/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment