Saturday, December 20, 2014

Daily Crime Reported As On 20/12/2014 At 07:00Hrs

ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ರಾಜೇಂದ್ರ (39) ತಂದೆ ಶ್ರೀನಿವಾಸ ಶೇರುಗಾರ ವಾಸ ಮದ್ಯಸ್ಥರಬೆಟ್ಟು ನೀಲಾವರ ಗ್ರಾಮ ಇವರ ಅಣ್ಣನಾದ ರವೀಂದ್ರ ರಾವ್ (48) ಎಂಬವರು ಸುಮಾರು 25 ವರ್ಷಗಳಿಂದ ಮುಂಬಯಿಯಲ್ಲಿ ಇದ್ದು ಈಗ ಸುಮಾರು 6 ತಿಂಗಳಿಂದ ನೀಲಾವರ ಗ್ರಾಮದ ಮದ್ಯಸ್ಥರಬೆಟ್ಟು ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದವರು ಹೆಚ್.ಐ.ವಿ ಕಾಯಿಲೆದ ನಿಶ್ಯಕ್ತಿಯಲ್ಲಿ ಕೆಲಸ ಮಾಡಲು ಆಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ 15/12/2014 ರಂದು ರಾತ್ರಿ ಸುಮಾರು  02:30 ಗಂಟೆಗೆ ತನ್ನ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಳಗಾದವರನ್ನು ಮೊದಲು ಮಹೇಶ್ ಆಸ್ಪತ್ರೆಗೂ ನಂತರ ಅದೇ ದಿನ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 19/12/2014ರಂದು ಸಂಜೆ 3:20 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ರಾಜೇಂದ್ರ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 63/14 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಪಘಾತ ಪ್ರಕರಣಗಳು
  • ಶಂಕರನಾರಾಯಣ: ಆರೋಪಿತ KA 01MD 3148  ನಂಬ್ರದ ಬೊಲೇರೊ ಕ್ಯಾಂಪರ್ ವಾಹನದ ಚಾಲಕ ರಾಘವೇಂದ್ರ ನಾಯ್ಕ ಇವರು ದಿನಾಂಕ 19/12/2014ರಂದು ಬೆಳಿಗ್ಗೆ 7:30 ಗಂಟೆಗೆ ಎಸ್‌.ಎನ್‌.ಸಿ ಕಂಪೆನಿಗೆ ಸೇರಿದ KA 01MD 3148ನಂಬ್ರದ ಬೊಲೇರೊ ಕ್ಯಾಂಪರ್ ವಾಹನವನ್ನು ಕುಂದಾಪುರ ತಾಲೂಕು ಕುಳ್ಳುಂಜೆ ಗ್ರಾಮದ ನಿರ್‌ಜೆಡ್ಡು ಎಂಬಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ  ಬಂದ ದನವನ್ನು ತಪ್ಪಿಸುವ ಬರದಲ್ಲಿ ವಾಹನವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ವಾಹನ ಆರೋಪಿಯ ನಿಯಂತ್ರಣ ತಪ್ಪಿ ಚರಂಡಿಗೆ ಹೋಗಿ ಪಲ್ಟಿಯಾಗಿ ವಾಹನ ಜಖಂಗೊಂಡಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಉದಯ ಕುಮಾರ್ ಶೆಟ್ಟಿ (45) ತಂದೆ ದಿ. ಅಂತಯ್ಯ ಶೆಟ್ಟಿ ಆಡಳಿತಾಧಿಕಾರಿ, ಶಂಕರನಾರಾಯಣ ಕಂನ್‌ಸ್ಟ್ರಕ್ಷನ್ ಪ್ರವೇಟ್ ಲಿಮಿಡೆಟ್ ಶಂಕರನಾರಯಣ ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪ ರಾಧ ಕ್ರಮಾಂಕ 192/14 ಕಲಂ 279, ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಗಂಗೊಳ್ಳಿ: ದಿನಾಂಕ 19/12/14 ರಂದ ಪಿರ್ಯಾದಿದಾರರಾದ ನಾಗಪ್ಪ ಸೋಮಯ್ಯ ಗೊಂಡ, (35) ತಂದೆ ಸೋಮಯ್ಯ ಗೊಂಡ, ಮಾರುಕೇರಿ, ಹೆಜ್ಜಾಲು ಗ್ರಾಮ, ಭಟ್ಕಳ. ಉತ್ತರ ಕನ್ನಡ ಜಿಲ್ಲೆ. ಎಂಬವರು KA 47L 9583 ನೇ ಮೋಟಾರು ಸೈಕಲಿನಲ್ಲಿ ಕುಂದಾಪುರ ದಿಂದ ಭಟ್ಕಳ ಕಡೆಗೆ ರಾ.ಹೆ 66 ರಲ್ಲಿ ಸವಾರಿಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ  2:30 ಗಂಟೆಗೆ ಕುಂದಾಪುರ ತಾಲೂಕು ಮರವಂತೆ ಗ್ರಾಮದ ಮರವಂತೆ ವರಹಾ ಸ್ವಾಮಿ ದೇವಸ್ಥಾನದ ಹತ್ತಿರ ತಲುಪುವಾಗ ಎದರಿನಿಂದ ಅಂದರೆ, ನಾವುಂದ ಕಡೆಯಂದ ಕುಂದಾಪುರ ಕಡೆಗೆ KA 41M 5769ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಭಾಗಕ್ಕೆ ಬಂದು ಪಿಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಎಡ ಮತ್ತು ಬಲ ಕಾಲಿಗೆ ಸಾಮಾನ್ಯ ಸ್ವರೂಪದ ರಕ್ತಗಾಯ ಉಂಟಾಗಿರುತ್ತದೆ. ಅಪಘಾತ ನಡೆಸಿದ ಕಾರು ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬುದಾಗಿ ನಾಗಪ್ಪ ಸೋಮಯ್ಯ ಗೊಂಡ ಇವರು ನೀಡಿದದೂರಿನಂತೆ ಗಂಗೊಳ್ಳಿ ಠಾಣಾ ಅಪರಾದ ಕ್ರಮಾಂಕ 210/2014 ಕಲಂ 279, 337 ಐಪಿಸಿ ಮತ್ತು 134(ಎ&ಬಿ) ಐಎಮ್‌ವಿ ಕಾಯಿದೆ ಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಮನುಷ್ಯ ಕಾಣೆ ಪ್ರಕರಣ
  • ಪಡುಬಿದ್ರಿ: ದಿನಾಂಕ 08.12.2014 ರಂದು 17:00 ಗಂಟೆಗೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಕುರ್ಕಿಲ ಬೆಟ್ಟು ಎಂಬಲ್ಲಿರುವ ಪಿರ್ಯಾದಿದಾರರಾದ ಹರಿಡಿ ಶೆಟ್ಟಿ (63) ತಂದೆ ದಿ. ದೂಜ ಶೆಟ್ಟಿ,  ವಾಸ ಮೂಡು ಪಾಂಡ್ಯಾರು ಮನೆ, ನಂದಿಕೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಹೆಂಡತಿ ಮನೆಯಿಂದ ಪಿರ್ಯಾದಿದಾರರ ಮಾವ ವಿಠಲ ಶೆಟ್ಟಿ, 82 ವರ್ಷ ಎಂಬವರು ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ   ಹರಿಡಿ ಶೆಟ್ಟಿ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 133/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಕೊಲೆ ಪ್ರಕರಣ 
  • ಉಡುಪಿ: ಪಿರ್ಯಾದಿದಾರರಾದ ದೀಪಕ್‌ (34), ತಂದೆ ದಯಾನಂದ, ವಾಸ ಶಿವ ದರ್ಶನ್‌ ನಿಲಯ 4 ನೇ ಕ್ರಾಸ್‌ ಲಕ್ಷ್ಮೀ ನಗರ ಕೊಡವೂರು ಗ್ರಾಮ, ಉಡುಪಿ ಮೃತ ಮಂಜುನಾಥರವರ ದೇಹವನ್ನು ನೋಡಿದಾಗ ಆತನ ಬಲಕೈಗೆ, ಎದೆಗೆ ತಲೆಗೆ ಗುದ್ದಿದ ಜಖಂ ಉಂಟಾಗಿದ್ದಲ್ಲದೇ, ಎಡ ಕುತ್ತಿಗೆಯಲ್ಲಿ ಹಾಗೂ ಬಲ ಎದೆಯ ಪಕ್ಕೆಲುಬು ಬಳಿ ರಕ್ತ ಗಾಯವಾಗಿದ್ದು ಕಂಡು ಬಂತು ಏಕೆ ಹೀಗೆ ಆಯಿತು ಎಂಬುದಾಗಿ ವಿಚಾರ ಮಾಡಲಾಗಿ ದಿನಾಂಕ 12/12/2014ರಂದು ಮಧ್ಯಾಹ್ನ 3:00ಗಂಟೆಯ ಸಮಯಕ್ಕೆ ಆತನಿಗೆ ಅತನ ಬಾವಂದಿರಾದ ಆರೋಪಿತರುಗಳಾದ ರವಿ ತೇಜ ಹಾಗೂ ಕೃಷ್ಣರವರು ಮನೆಯಲ್ಲಿ ಮರದ ಸೊಂಟೆ ಹಾಗೂ ಬೆಲ್ಟ್‌ ನಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಆತನಿಗೆ ಯಾವುದೆ ಚಿಕಿತ್ಸೆ ಬಗ್ಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪೊಲೀಸರಿಗೆ ಮಾಹಿತಿ ತಿಳಿಯುವುದೆಂದು ತಿಳಿದು ಆತನಿಗೆ ಯಾವುದೇ ಚಿಕಿತ್ಸೆ ನೀಡದೇ ಇರುವುದರಿಂದ, ದಿನಾಂಕ 18.12.2014 ರಂದು ಆತನು ವಾಂತಿ ಮಾಡಲು ಪ್ರಾರಂಭಿಸಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಸಂಜೆ 5:00 ಗಂಟೆಗೆ ಉಡುಪಿ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು, ಅವರನ್ನು 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗುತ್ತಿರುವಾಗ ಸಂಜೆ ಸುಮಾರು 7:೦೦ ಗಂಟೆ ಸಮಯಕ್ಕೆ ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿರುದಾಗಿದೆ. ಮೃತ ಮಂಜುನಾಥನು ತನ್ನ ಹೆಂಡತಿ ಮೀನಾಕ್ಷೀ ರವರಿಗೆ ತೊಂದರೆ ನೀಡುತ್ತಿದ್ದುದರಿಂದ ಆರೋಪಿತರುಗಳು ದಿನಾಂಕ 12/12/2014 ರಂದು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಮಂಜುನಾಥನನ್ನು ಕೊಲೆ ಮಾಡುವ ಉದ್ದೇಶದಿಂದ ತಯಾರಿ ನಡೆಸಿ, ಮರದ ಸೋಂಟೆ ಹಾಗೂ ಬೆಲ್ಟ್‌ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಗಿದೆ  ಎಂಬುದಾಗಿ ದೀಪಕ್‌ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 351/14  ಕಲಂ 302, ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ

No comments: