Tuesday, December 16, 2014

ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ -2014


2014 ನೇ ಸಾಲಿನ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟವನ್ನು ದಿನಾಂಕ 18/12/2014 ರಿಂದ 20/12/2014 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ದಿನಾಂಕ 18/12/2014 ರಂದು ಉಡುಪಿ ಪೊಲೀಸ್ ಕವಾಯತು ಮೈದಾನ, ಚಂದು ಮೈದಾನ ಉಡುಪಿ ಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಡಾ. ವಿಶಾಲ್ ಆರ್. ಐ.ಎ.ಎಸ್ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ, ಉಡುಪಿ ಜಿಲ್ಲೆ ರವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಅಂತ್ರಾಷ್ಟ್ರೀಯ ಕಬಡ್ಡಿ ಕ್ರೀಡಾ ಪಟು ಶ್ರೀಮತಿ ಮಮತಾ ಪೂಜಾರಿ ರವರು ಭಾಗವಹಿಸಲಿರುವರು. ಸಮಾರೋಪ ಸಮಾರಂಭವು ದಿನಾಂಕ 20/12/2014 ರಂದು ಸಂಜೆ 4:00 ಗಂಟೆಗೆ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಚಂದು ಮೈದಾನದಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭಕ್ಕೆ ಪಶ್ಚಿಮ ವಲಯ ಐ.ಜಿ.ಪಿಯವರಾದ ಶ್ರೀ ಅಮ್ರಿತ್ ಪಾಲ್, ಐ.ಪಿ.ಎಸ್ ರವರು ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀಮತಿ ಎಂ. ಕನಗವಲ್ಲಿ, ಐ.ಎ.ಎಸ್ ಜಿಲ್ಲಾ ಪಂಚಾಯತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಡುಪಿ ಜಿಲ್ಲೆ ರವರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಕ್ರಿಡಾಕೂಟ ಸಮಾರಂಭದಲ್ಲಿ ಹಾಜರಿರಬೇಕಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್  ರವರು ವಿನಂತಿಸಿಕೊಂಡಿರುತ್ತಾರೆ. 

No comments: