Wednesday, December 17, 2014

Daily Crime Reported As On 17/12/2014 At 07:00 Hrs

ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 16/12/2014ರಂದು ಕುಂದಾಪುರ ಪೊಲೀಸ್ ಠಾಣಾ ಉಪ-ನಿರೀಕ್ಷಕರಾದ ನಾಸೀರ್‌ ಹುಸೇನ್ ಇವರು ಕುಂದಾಪುರ ಕಸಬಾ ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಸಿಂದೂರ್ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಕರೆದುಕೊಂಡು ದಾಳಿ ಮಾಡಿ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಚೀಟಿಯನ್ನು ಬರೆದು ಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು 17:45 ಗಂಟೆಗೆ ದಾಳಿ ನಡೆಸಿದಾಗ ಮಟ್ಕಾ ಜೂಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸಿ ಕೊಡುತ್ತಿದ್ದ ಸುರೇಶ ದೇವಾಡಿಗ (65), ತಂದೆ ದಿವಂಗತ ಗಣಪತಿ ದೇವಾಡಿಗ ವಾಸ ಚಿಕ್ಕಮ್ಮ ದೇವಸ್ಥಾನದ ಬಳಿ ಓಂಬತ್ತು ದಂಡಿಗೆ ಕಸಭಾ ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ವಶಕ್ಕೆ ಪಡೆದು ಆತನ ವಶದಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ರೂಪಾಯಿ 695 /- ಆಟಕ್ಕೆ ಬಳಸಿದ ಇತರೇ ಸಾಮಗ್ರಿಗಳನ್ನು ಮುಂದಿನ ನಡವಳಿಕೆ ಬಗ್ಗೆ ಸ್ವಾದೀನ ಪಡಿಸಿಕೊಂಡು ಕ್ರಮ ಜರುಗಿಸಿದ್ದಾಗಿದೆ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 388/2014 ಕಲಂ 78 (1) (111) ಕೆ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣಗಳು
  • ಪಡುಬಿದ್ರಿ: ದಿನಾಂಕ 16/12/2014ರಂದು ಬೆಳಿಗ್ಗೆ 10:30 ಗಂಟೆಗೆ ನಡ್ಸಾಲು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ರಾ.ಹೆ 66ರ ಎಡ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ಯಾಮ್ ರಾಯ ದೇವಾಡಿಗ (67) ತಂದೆ ದಿ. ರುಕ್ಕ ಮೊಯಿಲಿ, ವಾಸ ಅಲದ್ ಮನೆ, ಅಬ್ಬೇಡಿ, ಪಡುಬಿದ್ರಿ, ನಡ್ಸಾಲು ಗ್ರಾಮ ಉಡುಪಿ ಹಾಗೂ ಅವರ ಹೆಂಡತಿ ಸುಮಿತ್ರಾ (58) ಇವರ ಜೊತೆಗೆ ನಡೆದು ಕೊಂಡು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಗೆ ಹೋಗುತ್ತಿರುವಾಗಿ ಉಡುಪಿ ಕಡೆಯಿಂದ ಕೆಎ 20ಇ ಎಫ್3924ನೇದರ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ನಡೆದು ಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಹೆಂಡತಿ ಸುಮಿತ್ರಾ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುಮಿತ್ರಾರವರಿಗೆ  ತಲೆಯ ಹಿಂಬದಿ ಹಾಗೂ ದೇಹದ ಇತರ ಕಡೆ ತರಚಿದ ಗಾಯವಾಗಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಮೋಟಾರು ಸೈಕಲ್ ಸವಾರರರಿಗೂ ಗಾಯವಾಗಿರುತ್ತದೆ ಎಂಬುದಾಗಿ ಶ್ಯಾಮ್ ರಾಯ ದೇವಾಡಿಗ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 130/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಪಡುಬಿದ್ರಿ:  ದಿನಾಂಕ 15/12/2014ರಂದು ಮಧ್ಯಾಹ್ನ ೦1:20 ಗಂಟೆಗೆ ಪಿರ್ಯಾದುದಾರರಾದ ಸುಧಾಮ ಆಚಾರ್ಯ, (65), ತಂದೆ ದಿ. ಮಂಜುನಾಥ ಆಚಾರ್ಯ, ಪಣಿಯೂರು ಅಂಚೆ, ಎಲ್ಲೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಚ್ಚಿಲದಿಂದ ಕಾಪುಗೆ ತೆರಳುವಾಗ ಬಡಾ ಗ್ರಾಮದ ಉಚ್ಚಿಲ ಬಸ್ ನಿಲ್ದಾಣದ ಬಳಿ ರಾ.ಹೆ 66 ನ್ನು ದಾಟುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ 47ಎಮ್ 3060ನೇ ಸ್ಕೋರ್ಪಿಯೋ ಕಾರನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಗೆ ಹಾಗೂ ಬೆನ್ನಿಗೆ ಗುದ್ದಿದ ಗಾಯ ಹಾಗೂ ತರಚಿದ ಗಾಯವಾಗಿರುತ್ತದೆ. ಎಂಬುದಾಗಿ ಸುಧಾಮ ಆಚಾರ್ಯ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 131/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

1 comment:

Unknown said...

ಅಪಘಾತ ಮತ್ತು ಇನ್ನಿತರ ಅಪರಾಧ ಪ್ರಕರಣದ ಟೋಟೊ ಕೂಡ ಮಾಹಿತಿಯೊಂಡಿಗೆ ಲಗತ್ತಿಸಿ.