Monday, October 20, 2014

Daily Crime Reports as on 20/10/2014 at 07:00 Hrs


ಅಪಘಾತ ಪ್ರಕರಣಗಳು
  • ಶಂಕರನಾರಾಯಣ:ಪಿರ್ಯಾದಿ ರಮೇಶ ನಾಯ್ಕ ಇವರ ಚಿಕ್ಕಪ್ಪನ ಮಗನಾದ ಶಿವರಾಮ ನಾಯ್ಕರವರು ತನ್ನ ಕೆಎ 20 ಸಿ 6731 ನೇ  ಆಟೋ ರಿಕ್ಷಾವನ್ನು ದಿನಾಂಕ:19/10/2014 ರಂದು ಮದ್ಯಾಹ್ನ ಸುಮಾರು 1:25 ಗಂಟೆಗೆ ಕುಂದಾಪುರ ತಾಲೂಕು ಗೋಳಿಯಂಗಡಿಯಿಂದ ಬೆಳ್ವೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಗೋಳಿಯಂಗಡಿ 5 ಸೆಂಟ್ಸ್ ಕಾಲೋನಿ ಹತ್ತೀರ ಹಾಲಾಡಿ ಬೆಳ್ವೆ ರಸ್ತೆಯಲ್ಲಿ ರಿಕ್ಷಾ ಪಲ್ಟಿಯಾಗಿಶಿವರಾಮ ನಾಯ್ಕರಿಗೆ ಪೆಟ್ಟಾಗಿದ್ದು ಈ ಬಗ್ಗೆ ಚಿಕಿತ್ಸೆಗೆ 108 ಅಂಬ್ಯುಲೆನ್ಸ್ ನಲ್ಲಿ ಹಾಲಾಡಿ ದುರ್ಗಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ, ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಸಂಜೆ 3:40 ಗಂಟೆಗೆ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಶಿವರಾಮ ನಾಯ್ಕರವರು ಮೃತ ಪಟ್ಟಿರುವುದಾಗಿದೆ ಎಂದು ತಿಳಿಸಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 157 /14 ಕಲಂ:279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು:ಪಿರ್ಯಾದಿ ಸೌಮ್ಯ ಇವರ ತಂಗಿ ದೀಕ್ಷಿತಾ ಎಂಬವರು  ದಿನಾಂಕ:18/10/2014 ರಂದು ರಾತ್ರಿ 9:30 ಗಂಟೆಗೆ ತನ್ನ ಬಾಬ್ತು ಆಕ್ಟಿವಾ ಸ್ಕೂಟರ್ ನಂಬ್ರ ಕೆಎ 20 ಇಡಿ 0987 ನೇದರಲ್ಲಿ ಮಣಿಪಾಲದಿಂದ ಕಟಪಾಡಿ ಕಡೆಗೆ ರಾ ಹೆ 66 ರಲ್ಲಿ ಬರುತ್ತಾ ಯೇಣಗುಡ್ಡೆ ಗ್ರಾಮದ ಕಿನಾರ ಹೋಟೆಲ್ ಬಳಿ ತಲುಪುವಾಗ ಅವರ ಹಿಂದಿನಿಂದ ಅಂದರೇ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ 31 ಜಿ 104 ನೇ ಅಂಬುಲೆನ್ಸ್  ಚಾಲಕ ಅಂಬುಲೆನ್ಸನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಒಮ್ಮೇಲೆ ಎಡಬದಿಗೆ ತಿರುಗಿಸಿ ಸೌಮ್ಯರವರ ತಂಗಿ ದೀಕ್ಷಿತರವರು ಸವಾರಿ ಮಾಡುತ್ತಿದ್ದ  ಆಕ್ಟಿವಾ ಸ್ಕೂಟರ್ ಗೆ ಎಡಬದಿಗೆ  ಡಿಕ್ಕಿ ಹೊಡೆದನು, ಪರಿಣಾಮ  ದೀಕ್ಷಿತಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡಿದ್ದು  ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 207/14 ಕಲಂ: 279, 337    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ರೋಶನ್ ರವರು ದಿನಾಂಕ: 18-10-2014 ರಂದು ತನ್ನ ನೋಂದಣೆಯಾಗದ ಹೊಸ ಹೀರೊ ಕಂಪೆನಿಯ ಕರಿಜ್ಮಾ ಮೋಟಾರ್ ಸೈಕಲಿನಲ್ಲಿ ಅಂಬಲ್ಪಾಡಿ ಜಂಕ್ಷನ್ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಾ ಅಜ್ಜರಕಾಡು ಆಸ್ಪತ್ರೆ ಎದುರು ತಲುಪುವಾಗ್ಗೆ ಸಮಯ ಸುಮಾರು ರಾತ್ರಿ 08:45 ಗಂಟೆಗೆ ರೋಶನ್‌ರವರ ಹಿಂದಿನಿಂದ ಒಬ್ಬ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಬಲಕ್ಕೆ ತಿರುಗಿಸಿ  ರೋಶನ್‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ರೋಶನ್‌ರವರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಕೂಡಲೇ ಅಲ್ಲಿ ಸೇರಿದವರು ಮೇಲಕ್ಕೆತ್ತಿ ನೋಡಲಾಗಿ ರೋಶನ್‌ರವರ ಬಲಭುಜಕ್ಕೆ ಒಳಜಖಂ ಆಗಿದ್ದು ಕಾಲಿಗೆ ತರಚಿದ ಗಾಯವಾಗಿರುತ್ತದೆ, ನಂತರ ಡಿಕ್ಕಿ ಹೊಡೆದ ಕಾರಿನ ನಂಬ್ರ ನೋಡಲಾಗಿ ಕೆಎ-19 ಡಿ-7868 ಎಂದಾಗಿದ್ದು ಕಾರಿನ ಚಾಲಕನ ಹೆಸರು ಕೆಳಲಾಗಿ ಲ್ಯಾನ್ಸಿ ವಾಸ್ ಎಂದು ತಿಳಿಯಿತು. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/14 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಲಿಗೆ ಪ್ರಕರಣ
  • ಕಾರ್ಕಳ:ದಿನಾಂಕ 19/10/2014 ರಂದು 19:50 ಗಂಟೆಗೆ ಕಾರ್ಕಳ ತಾಲೂಕಿನ ಕಾರ್ಕಳ ಕಸ್ಬಾ ಗ್ರಾಮದ ಕಾಬೆಟ್ಟು ಎಂಬಲ್ಲಿರುವ ಅತ್ತೂರು ಚರ್ಚ್ ರಸ್ತೆಯಲ್ಲಿ ಪಿರ್ಯಾದಿದಾರರಾದ ಡಾ||ಶ್ರೀಮಂತಿನಿ ಪಿ. ಭಟ್ ಇವರು ತನ್ನ ಗಂಡ ಕೆ. ಪುಂಡಲೀಕ ಭಟ್‌ರವರೊಂದಿಗೆ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಕಾಬೆಟ್ಟು ಕಡೆಯಿಂದ ಸ್ಕೂಟರ್ ಮಾದರಿಯ ದ್ವಿಚಕ್ರ ವಾಹನದಲ್ಲಿ ಬಂದ ಸುಮಾರು 20 ರಿಂದ 25 ವರ್ಷ ವಯಸ್ಸಿನ ಆಗಂತುಕರಿಬ್ಬರು ಡಾ||ಶ್ರೀಮಂತಿನಿ ಪಿ. ಭಟ್‌ರವರ ಕುತ್ತಿಗೆಯಲ್ಲಿದ್ದ 3 ಪವನ್‌‌ನ ಚಿನ್ನದ ಮಂಗಳ ಸೂತ್ರವನ್ನು ಅಪಹರಿಸಿಕೊಂಡು ಹೋಗಿದ್ದು, ಅಪಹರಿಸಿಕೊಂಡು ಹೋದ ಮಂಗಳಸೂತ್ರದ ಅಂದಾಜು ಮೌಲ್ಯ ಸುಮಾರು 45,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/14 ಕಲಂ:392, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: