Monday, October 20, 2014

Daily Crime Reports as on 20/10/2014 at 17:00 Hrs


ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 19.10.2014 ರಂದು ಸಂಜೆ ಸುಮಾರು 18:15 ಗಂಟೆಗೆ ಪಿರ್ಯಾದಿ ಜನಾರ್ಧನ ಆಚಾರ್ಯ ರವರು  ಕೆ.ಎ 20 ಇ ಎ  2260 ಮೋಟಾರ್ ಸೈಕಲನಲ್ಲಿ ಸಹ ಸವಾರರಾಗಿ ಮಂಜರ ಪಲ್ಕೆ  ಯಿಂದ ಬೋಳ ಕಡೆಗೆ ಹೋಗುತ್ತಾ ಬೋಳ ಗ್ರಾಮದ ಗರಡಿ ರಸ್ತೆ ಜಂಕ್ಷನ್ ತಲುಪಿದಾಗ ಗರಡಿಯ ರಸ್ತೆ ಕಡೆಯಿಂದ ಓರ್ವ KA -20-W-3165 ಸ್ಕೂಟಿ ಮೂಪೆಡ್ ಸವಾರ ತನ್ನ ಬಾಬ್ತು ಸ್ಕೂಟಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುಖ್ಯ ರಸ್ತೆಗೆ ಬರುವ ಸಮಯದಲ್ಲಿ ಯಾವುದೇ ಜಾಗ್ರತೆಯನ್ನು ತೆಗೆದುಕೊಳ್ಳದೇ ಏಕಾ ಎಕಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಬರುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಬೈಕ್ ಸವಾರ ಶಂಭು ಮೂಲ್ಯ ರವರು ರಸ್ತೆಗೆ ಬಿದ್ದು ತಲೆಗೆ  ಕೈಗೆ ತೀವ್ರ  ತರಹದ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2014 ಕಲಂ: 279,338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: