Thursday, October 02, 2014

Daily Crime Reports as on 02/10/2014 at 17:00 Hrs



ವಂಚನೆ ಪ್ರಕರಣ

  • ಕುಂದಾಪುರ: ಆಪಾದಿತ ಮಹಮ್ಮದ್‌ ಬದ್ರುಜ ತಂದೆ: ಕೆ.ಎಂ ಮಹಮ್ಮದ್‌ ವಾಸ: ಆಶಿಯಾ ಮಂಜಿಲ್‌, ಕೋಡಿ, ಕುಂದಾಪುರ ತಾಲೂಕು ಎಂಬಾತನು ಬ್ಯಾಂಕಿನ ಸಾಲಕ್ಕೆ ಭದ್ರತೆಗೆ ನೀಡಿದ ಭೂಮಿಯನ್ನು ಅಬ್ದುಲ್‌ ಮಜೀದ್‌ ತಂದೆ: ಅಬ್ದುಲ್‌ ಖಾದರ್‌ ವಾಸ: ಬಾನು ಮಂಜಿಲ್‌, ಅಂಬಲಮೊಗರು ಅಂಚೆ, ಮಂಗಳೂರು ತಾಲೂಕು ರವರಿಗೆ ಮಾರಾಟ ಮಾಡಿ ಮೋಸ ಮಾಡಿರುವುದಾಗಿದೆ ಎಂಬುದಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕುಂದಾಪುರ ಶಾಖೆಯ ಶಾಖಾ ವ್ಯವಸ್ಥಾಪಕರಾದ ವಿಶ್ವಂಭರ ಐತಾಳ ತಂದೆ: ಸುಬ್ರಹ್ಮಣ್ಯ ಐತಾಳ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 330/2014 ಕಲಂ 420 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 01/10/2014 ರಂದು 12.00 ಗಂಟೆಗೆ ಕುಂದಾಪುರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸುಧಾ ಪ್ರಭು ರವರು ಇಲಾಖಾ ಮೋಟಾರು ಸೈಕಲ್ ನಲ್ಲಿ ರೌಂಡ್ಸ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಬಸ್ರೂರ ಮೂರು ಕೈ ಬಳಿಯ ಬಸ್ ತಂಗುದಾಣದ ಬಳಿ ಆಪಾದಿರಾದ 1. ನರೇಂದ್ರ (19) ತಂದೆ: ಭಾಸ್ಕರ ನಾಯ್ಕ ವಾಸ: ಹೊಸಹಿತ್ಲು ಮನೆ, ಬಳ್ಕೂರು ಗ್ರಾಮ, ಕುಂದಾಪುರ ತಾಲುಕು, 2. ವೀಜೇತ (20) ತಂದೆ: ರತ್ನಾಕರ ಆಚಾರ್‌ ವಾಸ: ವಾಟರ್‌ ಟ್ಯಾಂಕ್‌ ಬಳಿ, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಎಂಬವರು ನಿಂತುಕೊಂಡು ಆಚೆ ಈಚೆ ಹೋಗಿ ಬರುತ್ತಿರುವ ಹುಡುಗಿಯರಿಗೆ ಚುಡಾಯಿಸುತಿದ್ದುದು ಕಂಡು ಬಂದಿದ್ದು ಅವರುಗಳು ಸದ್ರಿ ಪರಿಸರದಲ್ಲಿ ಸಂಜ್ಣೆಯ ಅಪರಾಧ ಮಾಡುವ ಸಾಧ್ಯತೆ ಇರುವುದರಿಂದ ಅವರಿಬ್ಬರನ್ನು ವಶಕ್ಕೆ ಪಡೆದು ಅವರುಗಳಿಗೆ ಒಳ್ಳೆಯ ಗುಣ ನೆಡೆತೆ ಬಗ್ಗೆ ಕಲಂ 110 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುವುದಾಗಿದೆ.

No comments: