Thursday, September 25, 2014

Daily Crime Reports as on 25/09/2014 at 07:00 Hrs
ಜುಗಾರಿ ಆಟ ಪ್ರಕರಣ 
  •  ಕಾರ್ಕಳ: ದಿನಾಂಕ 24/09/2014 ರಂದು 18:45 ಗಂಟೆಗೆ ಕಾರ್ಕಳ ತಾಲೂಕಿನ  ಕಸಬಾ  ಗ್ರಾಮದ ಬಸ್ಸು ನಿಲ್ದಾಣದ ಬಳಿಯ ಹೊಟೇಲ್ ಸ್ವಾಗತ್ ರೂಂ ನಂಬ್ರ 215 ರಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳನ್ನು ಉಪಯೋಗಿಸಿಕೊಂಡು ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ 1. ರಾಮಕೃಷ್ಣ , 2. ಪ್ರವೀಣ್  ಕೆ,  3. ಹರೀಶ್ ಪೂಜಾರಿ , 4. ಪ್ರವೀಣ್ ಕುಮಾರ್ , 5. ಸುರೇಶ್ , 6. ಚಂದ್ರಹಾಸ ನಾಯಕ್ , 7. ಮೋಹನ ಭಟ್ ,8. ಸುಂದರ, 9. ಓಂ ಪ್ರಕಾಶ @ ಕುಟೀರ ,10. ನಾರಾಯಣ ಶೆಟ್ಟಿ 11. ಯಶೋಧರ  ಶೆಟ್ಟಿ  ಎಂಬವರನ್ನು ಫಿರ್ಯಾಧಿ ಪಿ.ಎಸ್. ಕಬ್ಬಳ್ ರಾಜ್ ಕಾರ್ಕಳ ನಗರ ಠಾಣೆಯವರಿಗೆ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ತೆರಳಿ ಧಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡು, ಅವರುಗಳು ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ಒಟ್ಟು 47,500/-ನಗದು, ಹಾಗೂ ಇತರ ಪರಿಕರಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ನಗರ ಠಾಣಾ ಅಪರಾಧ ಕ್ರಮಾಂಕ 173/14 ಕಲಂ 80 ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಹಿರಿಯಡ್ಕ: ದಿನಾಂಕ 24/09/14 ರಂದು ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂಟಲ್ಕಟ್ಟೆ ಎಂಬಲ್ಲಿಯ ಮಹಾಮಾಯಿ ದೇವಸ್ಥಾನದ ಬಳಿ ಸರಕಾರಿ  ಹಾಡಿಯಲ್ಲಿ  ಕೋಳಿ ಅಂಕದ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ದೊರೆತಂತೆ ಫಿರ್ಯಾದಿ ರಫೀಕ್ಎಂ ಪಿಎಸ್ ಹಿರಿಯಡ್ಕ ಠಾಣೆರವರು ಸಿಬ್ಬಂದಿಗಳೊಂದಿಗೆ ತೆರಳಿ ಧಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡು  ಜೂಜಾಟಕ್ಕೆ ಬಳಸಿದ ನಗದು  7,775 ಹಾಗೂ ಕೋಳಿಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 91/14  ಕಲಂ 87, 93  ಕೆ.ಪಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ .ಬಂಧಿತರನ್ನು 1] ಜಗದೀಶ ಪೂಜಾರಿ 2] ಉಮ್ಮನ್ನಾಯಕ್3] ಗೋವಿಂದ ಕುಲಾಲ್4] ಸಂಜೀವ ನಾಯ್ಕ5] ಸಂದೇಶ ನಾಯ್ಕ 6] ಚಂದ್ರಶೇಖರದಾಸ್7] ಹರಿಪ್ರಸಾದ್ನಾಯಕ್8] ಜಯಂತ ಪೂಜಾರಿ ಎಂದು ಗುರುತಿಸಲಾಗಿದೆ.

No comments: