Thursday, September 25, 2014

Daily Crime Reports as on 25/09/2014 at 17:00 Hrsಹಲ್ಲೆ ಪ್ರಕರಣ

  • ಗಂಗೊಳ್ಳಿ: ದಿನಾಂಕ: 24.09.2014 ರಂದು ಸಾಯಾಂಕಾಲ 07:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಹಕ್ಲಾಡಿ ಎಂಬಲ್ಲಿ ಆಪಾದಿತರುಗಳಾದ 1) ಕೇಶವ 2) ಶಶಿಧರ 3) ಬಸವ 4) ಅಕ್ಷಯ 5)ಗಣೇಶ 6)ಮೋಹನ ಎಂಬವರು ಹಳೆಯ ದ್ಚೇಷದ ಹಿನ್ನೆಲೆಯಲ್ಲಿ ಪಿರ್ಯಾದಿ ರವಿ ಇವರಿಗೆ  ಹಲ್ಲೆ ನಡೆಸುವ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೇಶವನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರಿಗೆ ಹೊಡೆದು ಉಳಿದ ಆಪಾದಿತರು ಕೈಯಿಂದ ಹೊಡೆದು, ತಡೆಯಲು ಬಂದ ಪ್ರವೀಣ ಎಂಬವರಿಗೂ ದೊಣ್ಣೆಯಿಂದ ಮತ್ತು ಕೈಯಿಂದ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ರವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 169/2014 ಕಲಂ 143, 147, 148,341, 324, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಗಂಗೊಳ್ಳಿ: ದಿನಾಂಕ: 24-09-2014 ರಂದು ಸಾಯಂಕಾಲ 06-45 ಗಂಟೆಯ ಸಮಯಕ್ಕೆ ಆಪಾದಿತರುಗಳಾದ 1) ರವಿ ಪೂಜಾರಿ, 2) ಪ್ರವೀಣ, 3) ನವೀನ,4) ಪ್ರಶಾಂತ್‌, 5) ಚಂದ್ರ ಮೊಗವೀರ, 6) ಸಂತೋಷರವರುಗಳು ಹಳೆಯ ದ್ವೇಷದ ಹಿನ್ನಲೆಯಲ್ಲಿ ಪಿರ್ಯಾದಿ ಗಣೇಶ ಇವರಿಗೆ ಹಲ್ಲೆ ನಡೆಸುವ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿರ್ಯಾದಿದಾರನ್ನು  ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಹಕ್ಲಾಡಿ ಶಾಲೆಯ ಹತ್ತಿರ ದಾರಿಯಲ್ಲಿ ತಡೆದು ನಿಲ್ಲಿಸಿ ಪಿರ್ಯಾದಿದಾರರ ಜೊತೆಯಲ್ಲಿದ್ದ ಕೇಶವ ರವರ ಶರ್ಟಿಗೆ ಕೈ ಹಾಕಿದ್ದು, ಪಿರ್ಯಾದಿದಾರರು ಯಾಕೆ ಶರ್ಟಿಗೆ ಕೈ ಹಾಕಿದ್ದು ಎಂದು ವಿಚಾರಿಸಿದಾಗ 1 ನೇ ಆಪಾದಿತನು ದೊಣ್ಣೆಯಿಂದ ಪಿರ್ಯಾದಿದಾರರಿಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು ಪಿರ್ಯಾದಿದಾರರಿಗೆ ಹೊಡೆಯದಂತೆ  ತಪ್ಪಿಸಲು ಬಂದ ಮೋಹನ, ಬಸವ ಮತ್ತು ಕೇಶವರವರಿಗೂ ಆಪಾದಿತರು ದೊಣ್ಣೆಯಿಂದ ಕೈಯಿಂದ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿರುತ್ತಾರೆ. ಹಲ್ಲೆಯ ಪರಿಣಾಮ ಪಿರ್ಯಾದಿದಾರರು ಮೋಹನ ಮತ್ತು ಬಸವರವರು ಗಾಯಗೊಂಡು ಕುಂದಾಫುರ ಸರಕಾರಿ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಗಣೇಶರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 170/2014 ಕಲಂ 143, 147, 148,341 324, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕೊಲ್ಲೂರು: ದಿನಾಂಕ: 24.09.2014 ರಂದು  ಬೆಳಿಗ್ಗೆ 08.00 ಗಂಟೆಗೆ ಸೂಲ್ಯ ಮಡಿವಾಳ ರವರು ತನ್ನ ಬಾಬ್ತು ಕೆ.ಎ 20 ಇ.ಇ 9202ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೊಸೂರು ಜನ್ನಾಲು ಮಾರ್ಗವಾಗಿ ಹೊಸೂರು ಗ್ರಾಮದ ಹೆದ್ದಾರಿ ಮನೆ ಕ್ರಾಸ್ ಎಂಬಲ್ಲಿ ತಲುಪಿದಾಗ ಎದುರು ಬದಿಯಿಂದ ಅಂದರೆ ಹೊಸೂರು ಕಡೆಯಿಂದ ಕೆ.ಎ.20.ಬಿ.8576 ನೇ ನಂಬ್ರದ ದುರ್ಗಾಂಬ ಬಸ್ಸಿನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲ ಭಾಗಕ್ಕೆ ತನ್ನ ಬಸ್ಸನ್ನು ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ  ಬೈಕಿನ ಹತೋಟಿ ತಪ್ಪಿ ರಸ್ತೆಗೆ ಬಿದ್ದುದರಿಂದ ಸದ್ರಿ ಸೂಲ್ಯ ಮಡಿವಾಳರಿಗೆ ಬಲ ಕಾಲಿನ ಮುಂಗಾಲಿನ ಕೆಳಗೆ ಕೋಲು ಕಾಲಿಗೆ ಮೂಳೆ ಮುರಿತದ ಒಳ ಜಖಂ ಹಾಗು ಬಲ ಬದಿಯ ಬೆನ್ನಿನಲ್ಲಿ ನೋವು ಉಂಟಾಗಿರುತ್ತದೆ. ಈ ಬಗ್ಗೆ ಸೂಲ್ಯ ಮಡಿವಾಳ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2014 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಭಾಸ್ಕರ ಶೆಟ್ಟಿ (56 ವರ್ಷ) ಎಂಬುವವರು ಎಲುಬು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಮನೆಯವರು ಅವರಿಗೆ ಇಂಡಿಯನ್  ಆಸ್ಪತ್ರೆ ಮಂಗಳೂರಿನಿಂದ ಚಿಕಿತ್ಸೆ ಕೊಡಿಸಿದ್ದರೂ ಸಹ ಗುಣಮುಖರಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 25-09-2014 ರಂದು ಬೆಳಿಗ್ಗೆ 9:30 ಗಂಟೆಗೆ ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ  17/14 ಕಲಂ: 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.    
  • ಕೋಟ: ಅಬ್ಬಾಸ್  ಅಬ್ದುಲ್ ರೆಹಮಾನ್ ಪ್ರಾಯ 42 ವರ್ಷ ಎಂಬವರು ದಿನಾಂಕ:25/09/2014 ರಂದು ತನ್ನ  ಬಾಬ್ತು ಕೆಎ 20 ಸಿ 8484 ನೇ ನಂಬ್ರದ ಟ್ಯಾಂಕರ್ ಲಾರಿಯನ್ನು ಜನತಾ ಫಿಶ್ ಮೀಲ್ ಬಳಿ  ಕ್ಲೀನರ್ ಸಲಾಂ ಪ್ರಾಯ:19 ವರ್ಷ ಎಂಬವರೊಂದಿಗೆ ರಾತ್ರಿ ಸುಮಾರು 1:00 ಗಂಟೆ ಸಮಯಕ್ಕೆ ಟ್ಯಾಂಕರ್ ಟ್ಯಾಂಕಿಯ ಮೇಲೆ ಹತ್ತಿ ಸ್ವಚ್ಚಗೊಳಿಸುವಾಗ ಲಾರಿಯ ಕ್ಲೀನರ್ ಸಲಾಂ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕಿಯ ಒಳಗೆ ಬಿದ್ದಾಗ ಅವನನ್ನು ಮೇಲೆತ್ತುವ ಸಲುವಾಗಿ ಅಬ್ಬಾಸ್ ಅಬ್ದುಲ್ ರೆಹಮಾನ್ ರವರು ಟ್ಯಾಂಕಿಯ ಒಳಕ್ಕೆ ಇಳಿದಾಗ ಇಬ್ಬರು ಮೂರ್ಛೆಗೊಂಡಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕೊಂಡು ಹೋಗುವಾಗ ಅವರಿಬ್ಬರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ  43/14 ಕಲಂ: 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಇತರೇ ಪ್ರಕರಣ

  • ಶಂಕರನಾರಾಯಣ: ದಿನಾಂಕ 24/09/2014 ರಂದು 11:30 ಗಂಟೆಗೆ ಮಹಮ್ಮದ್‌ ಖಲೀಲ್‌ ಇವರು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಮಲ್ನಾಡ್‌ ಗೇರು ಬೀಜ ಕಾರ್ಖಾನೆಯಲ್ಲಿ ಮಾಡಿನ ಶೀಟನ್ನು ತೆಗೆಯುತ್ತಿರುವಾಗ ಆರೋಪಿತರಾದ  ಅಕಳಂಗ ಪೈ ಮತ್ತು ಮಲ್ನಾಡ್‌ ಕ್ಯಾಶ್ಯೂ ಪ್ಯಾಕ್ಟರಿ ಮಾಲಕರು ಯಾವುದೇ ಮುಂಜಾಗ್ರತೆ ಮಾಡದೇ ಇರುವ ಕಾರಣ ಮಾಡಿನಿಂದ ಕೆಳಗೆ ಜಾರಿ ಸಿಮೆಂಟ್‌ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗೆ ಕರೆದುಕೊಂಡು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಮೃತಪಟ್ಟಿರುತ್ತಾರೆ. ಈ ಬಗ್ಗೆ ಅಬ್ದುಲ್‌ ಜಬ್ಬಾರ್‌ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 146/14, ಕಲಂ: 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: