Monday, July 28, 2014

Daily Crimes Reported as On 28/07/2014 at 17:00 Hrs


ಸುಲಿಗೆ ಪ್ರಕರಣ
  • ಹಿರಿಯಡ್ಕ:ದಿನಾಂಕ:27/07/2014 ರಂದು ಪಿರ್ಯಾದಿದಾರರಾದ ಸುಮಿತ್ ಆಚಾರ್ಯ (21) ತಂದೆ:ಪುಂಡರೀಕ ಆಚಾರ್ಯ ವಾಸ:ಅನುಗ್ರಹ ಮನೆ, ಶೆಟ್ಟಿಬೆಟ್ಟು ಬೊಬ್ಬರ್ಯ ರಸ್ತೆ, ಪರ್ಕಳ ಪೋಸ್ಟ್‌, ಹೆರ್ಗ ಗ್ರಾಮ, ಉಡುಪಿ ತಾಲೂಕುರವರು ತನ್ನ ಸ್ನೇಹಿತರೊಂದಿಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ನಡೆಯುತ್ತಿದ್ದ ಪುಟ್ಬಾಲ್ ಪಂದ್ಯಾಟ ನೋಡಲು ಹೋಗಿದ್ದು, ಸಂಜೆ ಸುಮಾರು 4:00 ಗಂಟೆ ವೇಳೆಗೆ ಆರೋಪಿತರುಗಳಾದ 1)ರಿತೇಶ್ ಸೋನ್ಸ್ 2)ಸಂದೀಪ 3)ಗಣೇಶ್ 4)ಅಶ್ವಥ್ 5)ಪ್ರಾಣೇಶ್ ಇವರುಗಳು ಒಟ್ಟು ಸೇರಿ ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಸುಮಿತ್ ಆಚಾರ್ಯರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅವರೊಂದಿಗೆ ಜಗಳ ತೆಗೆದು ಕೈಗಳಿಂದ ಹೊಡೆದು, ಕಾಲುಗಳಿಂದ ತುಳಿದುದಲ್ಲದೇ ಸುಮಿತ್ ಆಚಾರ್ಯರವರ ಪ್ಯಾಂಟಿನ ಕಿಸೆಯಲ್ಲಿ ಇದ್ದ 1,150/- ರೂಪಾಯಿ ಹಣ ಇದ್ದ ಪರ್ಸನ್ನು ಬಲಾತ್ಕಾರವಾಗಿ ಕಸಿದುಕೊಂಡು ಹೋಗಿರುತ್ತಾರೆ. ಗಾಯಾಳು  ಸುಮಿತ್ ಆಚಾರ್ಯ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಸುಮಿತ್ ಆಚಾರ್ಯರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 76/2014 ಕಲಂ 392,143,147,323,504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಪಡುಬಿದ್ರಿ:ಪಿರ್ಯಾದಿದಾರರಾದ ಶ್ರೀಮತಿ ಶರಾವತಿ ಯು.ಆರ್ (55) ಗಂಡ:ದಿವಂಗತ ಪಿ.ರವಿರಾಜ, ವಾಸ:ರಾಜಶ್ರೀ ಉಗ್ಗೊಟ್ಟು, ಎಲ್ಲೂರು ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ಎಲ್ಲೂರಿನ ಎಸ್.ವಿ.ಸಿ.ಎಸ್ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದು, ಎಲ್ಲೂರು ರಾಜಶ್ರೀ ಉಗ್ಗೋಟ್ಟು ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಶರಾವತಿ ಯು.ಆರ್.ರವರು ಶಾಲೆಯ ನೂತನ ಕಟ್ಟಡದ ನಿರ್ಮಾಣದ ಕುರಿತು ಹಣ ಸಂಗ್ರಹಣೆ ಮಾಡಲು ದಿನಾಂಕ:20/06/2014 ರಂದು ಮುಂಬೈಗೆ, ನಂತರ ಮಗಳ ಗಂಡನ ಮನೆಯಾದ ಹಾಸನಕ್ಕೆ ಹೋಗಿ ವಾಪಾಸು ದಿನಾಂಕ:06/07/2014 ರಂದು ಬಂದಿರುತ್ತಾರೆ. ದಿನಾಂಕ:27/07/2014 ರಂದು ಶರಾವತಿ ಯು.ಆರ್‌ ರವರ ಮಗಳು ಹಾಗೂ ಅಳಿಯರವರು ಹಾಸನದಿಂದ ಶರಾವತಿ ಯು.ಆರ್‌ ರವರ ಮನೆಗೆ ಬಂದಾಗ, ಮನೆಯೊಳಗೆ ಇದ್ದ ಕಪಾಟನ್ನು ತೆರೆದು ನೋಡಿದಾಗ, ಬೀಗ ಹಾಕಿ ಇಟ್ಟಿದ್ದ ಚಿನ್ನ ಮತ್ತು  ಬೆಳ್ಳಿಯ ವಸ್ತುಗಳು ಇರದೇ ಇದ್ದು, ಮನೆಯ ಮತ್ತು ಗೋದ್ರೇಜ್‌‌ನ ಬೀಗದ ಕೀ ಇಟ್ಟ ಸ್ಥಳದಲ್ಲಿ ಇರಲಿಲ್ಲ. ದಿನಾಂಕ:29/05/2014 ರಿಂದ 26/07/2014 ರ ನಡುವೆ ಯಾರೋ ಕಳ್ಳರು ಮನೆಯಲ್ಲಿ ಇಟ್ಟಿದ್ದ ಕೀಯನ್ನು ಬಳಸಿ ಮನೆಯಲ್ಲಿದ್ದ (1)ಅಂದಾಜು 9.120 ಗ್ರಾಂನ ಚಿನ್ನದ ಬಾರ್-1, (2) ಮುತ್ತಿನ ಬೆಂಡೋಲೆ-1 ಜೊತೆ-ಅಂದಾಜು 4.500 ಗ್ರಾಂ, (3) ಗಂಡಸರ ಉಂಗುರ-1 ಅಂದಾಜು 6 ಗ್ರಾಂ, (4) ಸಪೂರ ಚೈನು ಮತ್ತು ಹವಳದ ಪೆಂಡೆಂಟು 6 ಗ್ರಾಂ, (5)ತಾಳಿ -1 ಅಂದಾಜು 3 ಗ್ರಾಂ, (6) ಬೆಳ್ಳಿ ಕಾಲುದೀಪ-2, (7) ಬೆಳ್ಳಿ ದೊಡ್ಡ ನೀಲಾಂಜನೆ-1, (8) ಬೆಳ್ಳಿ ಚಿಕ್ಕ ನೀಲಾಂಜನೆ-1, (9)  ಊದು ಬತ್ತಿ ಸ್ಟ್ಯಾಂಡ್-1, (10) ಬೆಳ್ಳಿಯ ಅರಳಿ ಎಲೆಯ ದೀಪ-2, (11) ಬೆಳ್ಳಿಯ ಚಿಕ್ಕ ನೀಲಾಂಜನ-2, (12) ತಂಬಿಗೆ-1, (13) ಕೌಳಿಗೆ-1, (14) ಸೌಟು-1, (15) ಲೋಟ-1, (16) ಗಂಡಸರ ಸೊನಾಟ ವಾಚ್-1, (17) ಹೆಂಗಸರ ವಾಚ್-1 ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನ ಹಾಗೂ ಬೆಳ್ಳಿಯ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 1,50,000 ಆಗಬಹುದು ಎಂಬುದಾಗಿ ಶರಾವತಿ ಯು.ಆರ್‌ ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 78/2014 ಕಲಂ:380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: