Monday, July 28, 2014

Daily Crime Reported As On 28/07/2014 At 07:00 Hrs

ಅಪಘಾತ ಪ್ರಕರಣಗಳು
  • ಪಡುಬಿದ್ರಿ: ದಿನಾಂಕ 26.07.2014 ರಂದು 23:30 ಗಂಟೆಗೆ ಉಚ್ಚಿಲ ಬಡಾ ಗ್ರಾಮದ ಮಸೀದಿ ಎದುರುಗಡೆ ರಾ.ಹೆ.66 ರಲ್ಲಿ ಕಾರು ನಂಬ್ರ ಕೆಎ-19 ಎಂ.ಬಿ- 1637 ರ ಚಾಲಕ ಉಡುಪಿಯಿಂದ ಮಂಗಳೂರು ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಾ.ಹೆ.66 ರ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಡಿವೈಡರನ್ನು ದಾಟಿ ಮುಂದಕ್ಕೆ ರಾ.ಹೆ 66 ರ ಬಲ ಬದಿಯಲ್ಲಿ ಮಂಗಳೂರುನಿಂದ ಉಡುಪಿ ಕಡೆಗೆ ಬರುತ್ತಿದ್ದ MH-10-Z-1019 ನೇ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ತೀವ್ರ ತರಹದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಗೆ ತೆರಳಿರುತ್ತಾರೆ. ಲಾರಿಯ ಬಲ ಬದಿ ಹಾಗೂ ಕಾರು ಜಖಂ ಗೊಂಡಿರುತ್ತದೆ ಎಂಬುದಾಗಿ ಸಿರಾಜುದ್ದೀನ್  ತಂದೆ:-ಹಸನಬ್ಬ ವಾಸ:-ನ್ಯೂ ಹೌಸ್, ಪಣಿಯೂರು ರೋಡ್, ಉಚ್ಚಿಲ ಪೋಸ್ಟ್, ಬಡಾ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2014 ಕಲಂ: 279, 337  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಪಡುಬಿದ್ರಿ: ದಿನಾಂಕ 27/07/2014 ರಂದು ಸಂಜೆ 16:30 ಗಂಟೆಗೆ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಕಲ್ಸಂಕ ಸೇತುವೆಯ ಬಳಿ ರಾ.ಹೆ. 66 ರಲ್ಲಿ ಪಡುಬಿದ್ರಿಯಿಂದ ಎರ್ಮಾಳಿಗೆ ಹೋಗುತ್ತಿರುವ ಕೆಎ 20 ಬಿ 3186 ನೇ ಅಟೋರಿಕ್ಷಾಕ್ಕೆ ಉಡುಪಿಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ನಂಬ್ರ ಕೆಎ 04 ಡಿ 7101 ನೇದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾವು ರಸ್ತೆಯ ಬಲಬದಿಯ ಹೊಂಡಕ್ಕೆ ಮಗುಚಿಬಿದ್ದು ಜಖಂಗೊಂಡಿದ್ದು, ಅಟೋರಿಕ್ಷಾವನ್ನು ಚಲಾಯಿಸುತ್ತಿದ್ದ ಸೀತಾರಾಮ ಶೆಟ್ಟಿ ಎಂಬವರಿಗೆ ಕಿವಿ, ಭುಜ ಮತ್ತು ಕಾಲಿಗೆ ರಕ್ತಗಾಯವಾಗಿರುವುದಾಗಿದೆ ಎಂಬುದಾಗಿ ಸೀತಾರಾಮ ಶೆಟ್ಟಿತಂದೆ ಸದಾಶಿವ ಶೆಟ್ಟಿ, ವಾಸ ಪೊಲ, ಹೊಸಮನೆ, ಎರ್ಮಾಳ್ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2014 ಕಲಂ: 279, 337  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರ ಬಂಧನ
  • ಕಾರ್ಕಳ: ದಿನಾಂಕ 27.07.2014 ರಂದು 3:30 ಗಂಟೆಗೆ  ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮುಡಾರು ಗ್ರಾಮದ ಬಜಗೋಳಿ ದಿಡಿಂಬಿರಿ ಸತ್ಯಸಾರಾಮಣಿ ಕಾಲನಿ ಅಂಬೇಡ್ಕರ್‌ ಭವನದ ಬಳಿ ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಮಹಾದೇವ ಶೆಟ್ಟಿ ಪೊಲೀಸ್ ಉಪನಿರೀಕ್ಷಕರು ಕಾರ್ಕಳ ಗ್ರಾಮಾಂತರ ಠಾಣೆರವರು ಸಿಬ್ಬಂದಿಗಳ ಜೊತೆ ಸಂಜೆ 4:45 ಗಂಟೆ ಸಮಯಕ್ಕೆ ಸ್ಥಳಕ್ಕೆ ಧಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾದ ಆರೋಪಿತರುಗಳಾದ 1. ಸೂರ ಹರಿಜನ 2. ಗೋಪಾಲ 3. ಸುರೇಶ್‌ 4. ರಮೇಶ್‌ 5. ರವಿ 6. ರಾಜು 7. ರಾಜು.ಬಿ. 8. ಶಬರೀಶ 9. ವಿಶ್ವನಾಥ (1 ರಿಂದ 9 ನೇವರೆಗಿನ ವಾಸ ; ಸತ್ಯಸಾರಾಮಣಿ ಕಾಲನಿ, ಬಜಗೋಳಿ, ಮುಡಾರು ಗ್ರಾಮ, ಕಾರ್ಕಳ ತಾಲೂಕುರವರು) ರವರುಗಳನ್ನು ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ನಗದು ರೂಪಾಯಿ 2920/- ಇತರ ಪರಿಕರಗಳನ್ನು  ಸ್ವಾಧೀನಪಡಿಸಿಕೊಂಡು ಅದರಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 77/2014 ಕಲಂ 87 ಕೆಪಿ ಕಾಯ್ಡೆಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: