Friday, July 25, 2014

Daily Crime Reports on 25/07/2014 at 07:00 Hrs

ಜುಗಾರಿ ಆಟ ಪ್ರಕರಣ 
  • ಬ್ರಹ್ಮಾವರ: ದಿನಾಂಕ; 24/07/2014 ರಂದು 17:30 ಗಂಟೆಗೆ ಮಂದಾರತಿ ಬಿಲ್ಡಿಂಗ್ ಹಿಂಬದಿ , ಶಿರೂರು ಮೂರುಕೈ, ಶಿರೂರು ಗ್ರಾಮ, ಉಡುಪಿ ತಾಲೂಕು ಎಂಬಲ್ಲಿ ಆರೋಪಿ ನಾರಾಯಣ ಮರಕಾಲ (65) ತಂದೆ: ದಿ: ಅಪ್ಪು ಮರಕಾಲ, ವಾಸ: ಆರ್ಡಿ ದರ್ಖಾಸು, ಜಾನುವಾರು ಕಟ್ಟೆ, ಬಿಲ್ಲಾಡಿ ಗ್ರಾಮ ಎಂಬಾತನು ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಪಿರ್ಯಾದಿ ಗಿರೀಶ್ ಕುಮಾರ್ ಎಸ್ ಪಿಎಸ್ಐ ಬ್ರ ಹ್ಮಾವರ ಪೊಲೀಸ್ ಠಾಣೆ ರವರು  ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸುತ್ತಿದ್ದುನಗದು ರೂ 950/- ನ್ನು ಹಾಗೂ ಇತರೆ ಸ್ವತ್ತುಗಳನ್ನು ಸ್ವಾಧೀನ ಪಡಿಸಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು  ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2014 ಕಲಂ 78(1)(ಎ)(6) ಕೆಪಿ ಆಕ್ಟ್  ನಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಹಲ್ಲೆ ಪ್ರಕರಣಗಳು  
  • ಶಂಕರನಾರಾಯಣ: ಕುಂದಾಪುರ  ತಾಲೂಕು ಹೊಸಂಗಡಿ ಗ್ರಾಮದ ವಾಸಿ ಜಯರಾಮ ಪೂಜಾರಿ  ರವರು ದಿನಾಂಕ 20/07/2014 ರಂದು ಠಾಣೆಗೆ ಬಂದು ದೂರು ಅರ್ಜಿಯೊಂದನ್ನು ನೀಡಿದ್ದು ಸಾರಾಂಶವೆನೆಂದರೆ ನಾನು 2 ವರ್ಷದ ಹಿಂದೆ ಶನೇಶ್ವರ ಮೇಳದಲ್ಲಿ ಅಶೋಕ ಶೆಟ್ಟಿ ಎಂಬವರಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ಕೆಲಸ ಮಾಡುವ ಸಮಯದಲ್ಲಿ ಅವರ ಹತ್ತಿರ 7,000/- ಸಾವಿರ ರೂಪಾಯಿ ಸಾಲ ಪಡೆದಿರುತ್ತೇನೆ. ಬಳಿಕ ನಾನು ಕಮಲಶಿಲೆ ಮೇಳದಲ್ಲಿ ಕೆಲಸ ಮಾಡಿಕೊಂಡಿದ್ದು ಹಣವನ್ನು ಕೊಡಲು ನಾನು ಹೋದಾಗ ಹಣ ಬೇಡ ಕೆಲಸಕ್ಕೆ ಬಾ ಎಂದು ಹೇಳುತ್ತಿದ್ದು ನಾನು ಕೆಲಸಕ್ಕೆ ಹೋಗಿರುವುದಿಲ್ಲ. ದಿನಾಂಕ 20/07/2014 ರಂದು ನಾನು ಸಿದ್ದಾಪುರದಲ್ಲಿ ಇರುವಾಗ ನನ್ನ ಹತ್ತಿರ ಬಂದು ಕೈಯಿಂದ ಹೊಡೆದು ದೂಡಿ ಹಾಕಿ ಬೆದರಿಕೆ ಹಾಕಿರುತ್ತಾರೆ. ದಿನಾಂಕ: 22/07/2014 ರಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ತನಗಾದ ನೋವಿನ ಬಗ್ಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಅರ್ಜಿದಾರರನ್ನು ವಿಚಾರಿಸಲಾಗಿ ದೂರು ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿಕೊಂಡಿರುತ್ತಾರೆ. ಅರ್ಜಿದಾರರು ನೀಡಿದ ದೂರು ಅರ್ಜಿಯು ಅಸಂಜ್ಞೇಯ ಅಪರಾಧವಾಗಿದ್ದು ದೂರು ಅರ್ಜಿಯನ್ನು ಕಲಂ 323, 506  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮಾನ್ಯ ನ್ಯಾಯಾಲಯದಲ್ಲಿ ಅನುಮತಿ ಕೋರಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿರುತ್ತದೆ. ಅದೆರಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2014 ಕಲಂ 323, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಪರಿಚಿತ ಗಂಡಸಿನ ಶವ ಪತ್ತೆ ಪ್ರಕರಣ
  • ಉಡುಪಿ: ದಿನಾಂಕ:24/07/2014ರಂದು ಸಂಜೆ ಕರಾವಳಿ ಬೈಪಾಸ್‌ ಬಳಿಯ ವಾಸಿ ಶ್ರೀಮತಿ ಪದ್ದು ಶೆಟ್ಟಿಯವರು ಫಿರ್ಯಾಧಿ ವಿಶು ಶೆಟ್ಟಿ, ವಿಳಾಸ : ಎನ್ ಹೆಚ್ 66 ಅಂಬಲಪಾಡಿ ಉಡುಪಿ ರವ ರಿಗೆ  ಪೋನ್‌‌ ಮಾಡಿ ನಮ್ಮ ತೋಟದಲ್ಲಿ ವ್ಯಕ್ತಿಯೋರ್ವ ಬಿದ್ದಿರುವುದಾಗಿ ತಿಳಿಸಿದರು ಕೂಡಲೇ  ಫಿರ್ಯಾದಿದಾರರು ಅವರ ತೋಟಕ್ಕೆ ಹೋಗಿ ನೋಡಿದ್ದಲ್ಲಿ ಸುಮಾರು 55-60 ವರ್ಷ ಪ್ರಾಯದ ಗಂಡಸಿನ ಮೃತ ದೇಹವು ಕೊಳತೆ ಸ್ಧಿತಿಯಲ್ಲಿ   ದಿನಾಂಕ: 24/07/2014ರಂದು ಸಂಜೆ ಸಮಯ 4:00ರಲ್ಲಿ  ಕಂಡು ಬಂದಿದ್ದು ಮೃತ ಶರೀರದ ಮುಖವು ಸಂಪೂರ್ಣ ಕೊಳತೆ ಸ್ಧಿತಿಯಲ್ಲಿ ಇರುವುದರಿಂದ ಸಾರ್ವಜನಿಕರು ಗುರುತಿಸಲು ಅಸಾಧ್ಯವಾಗಿರುತ್ತದೆ ಮೃತರ ಗುರುತು ಪತ್ತೆಯಾಗದೇ ಇರುವುದರಿಂದ ಹಾಗೂ ಮೃತರು ಹೃದಾಯಘಾತ ಅಥವಾ ಬೇರೆ ಯಾವುದೂ ಖಾಯಿಲೆಯಿಂದ ಮೃತ ಪಟ್ಟಿರ ಬಹುದಾಗಿದ್ದರೂ ಮೃತರ  ಮರಣದಲ್ಲಿ ಸಂಶಯವಿರುವುದರಿಂದ  ವೈದ್ಯರ ಪರೀಕ್ಷೆಯಿಂದ ತಿಳಿಯಬೇಕಾಗಿರುತ್ತದೆ ಎಂಬುದಾಗಿ ವಿಶು ಶೆಟ್ಟಿರವರ  ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 47/2014 ಕಲಂ174ಸಿ ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: