Wednesday, July 23, 2014

Daily Crime Reports as on 23/07/2014 at 17:00 Hrs

ಆಪಘಾತ ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ಟಿ.ವಿ.ಸುಬ್ರಾಯ್ ಭಟ್ ರವರು ದಿನಾಂಕ; 19/07/2014 ರಂದು ಬೆಳಿಗ್ಗೆ ಕೊಲ್ಲೂರಿನಿಂದ ಕೆಎ-19 ಡಿ-2179 ನೇ ನಂಬ್ರದ ರಾಜಕುಮಾರ ಬಸ್ಸಿನಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ ಸುಮಾರು 1:50 ಗಂಟೆ ಸಮಯಕ್ಕೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಶೌಚಾಲಯದ ಎದುರು ಬಸ್ ನಿಂತುಕೊಂಡಾಗ ಪಿರ್ಯಾದುದಾರರು ಸದ್ರಿ ಬಸ್ಸಿನ ನಿರ್ವಾಹಕನ ಅನುಮತಿ ಪಡೆದು ಶೌಚಾಲಯಕ್ಕೆ ಹೋಗುವರೇ ಬಸ್ಸಿನ ಹಿಂದಿನ ಬಾಗಿಲಿನಿಂದ ಕೆಳಗೆ ಇಳಿಯುತ್ತಿರುವಾಗ ಸದ್ರಿ ಬಸ್ಸಿನ ಚಾಲಕನು ನಿರ್ಲಕ್ಷ್ಯತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ಬಸ್ಸಿನಿಂದ ಕೆಳಗೆ ರಸ್ತೆಗೆ ಬಿದ್ದು ಬೊಬ್ಬೆ ಹೊಡೆದಾಗ ಸದ್ರಿ ಬಸ್ಸಿನ ನಿರ್ವಾಹಕ ಮತ್ತು ಅಲ್ಲಿ ಸೇರಿದವರು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಪಿರ್ಯಾದುದಾರರ ಎಡ ಭುಜಕ್ಕೆ ಮತ್ತು ಬಲ ಪಕ್ಕೆಲುಬಿಗೆ ಒಳ ಜಖಂ ಆಗಿದ್ದು, ಬಸ್ಸಿನ ಚಾಲಕನ ಹೆಸರು ಕೇಳಲಾಗಿ ದಯಾನಂದ ಎಂದು ತಿಳಿಯಿತು, ನಂತರ ಬಸ್ಸಿನ ನಿರ್ವಾಹಕ ಸತೀಶ್ ಮತ್ತು ಪಿರ್ಯಾದುದಾರರ ಹೆಂಡತಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಠಾಣಾ ಅಪರಾಧ  ಕ್ರಮಾಂಕ: 83/2014  ಕಲಂ. 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಶಿರ್ವಾ:  ಅಶೋಕ ಪಿ, ಪೊಲೀಸು ಉಪ ನಿರೀಕ್ಷಕರು, ಶಿರ್ವಾ  ಪೊಲೀಸ್‌ ಠಾಣೆ ಇವರು ದಿನಾಂಕ 23/೦7/2014  ರಂದು  ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು ಬೆಳಗಿನ ಜಾವ 05-00 ಗಂಟೆಗೆ ಶಿರ್ವಾ ಪೇಟೆಯಲ್ಲಿರುವಾಗ ಮೂಡುಬೆಳ್ಳೆ  ಚೆಕ್‌ ಪೋಸ್ಟ್ ಕರ್ತವ್ಯದಲ್ಲಿದ್ದ  ಸಿಬ್ಬಂದಿಯವರು ಕರೆ ಮಾಡಿ  ಕಟ್ಟಿಂಗೇರಿ ಕಡೆಯಿಂದ  ಒಂದು ಅಟೊರಿಕ್ಷಾ ಶಿರ್ವಾ ಕಡೆಗೆ ಬರುತ್ತಾ ಇದೆ, ನಿಲ್ಲಿಸಲು ಸೂಚನೆ ನೀಡಿದರೂ  ನಿಲ್ಲಿಸಿರುವುದಿಲ್ಲ. ಸಂಶಯ ಇದೆ ಎಂದು ತಿಳಿಸಿದ ಮೇರೆಗೆ  ಸದ್ರಿ ಆಟೋರಿಕ್ಷಾವನ್ನು ಶಿರ್ವಾ ಅಟ್ಟಿಂಜೆ ರಸ್ತೆಯಲ್ಲಿ ಬೆಳಗಿನ ಜಾವ ಸುಮಾರು 5:15 ಗಂಟೆಗೆ ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಆಟೋದಲ್ಲಿದ್ದ ಚಾಲಕ ಹಾಗೂ ಇತರರು ಓಡಿ ಹೋಗಿದ್ದು. ಅಟೊರಿಕ್ಷಾವನ್ನು ಪರಿಶೀಲಿಸಿದಾಗ ಅದರ ಹಿಂಬದಿ ಸೀಟಿನ ಮೇಲೆ ಒಂದು ಜರ್ಸಿ ದನವನ್ನು  ತುಂಬಿರುವುದು ಕಂಡು ಬಂತು. ಸದ್ರಿ ಅಟೋರಿಕ್ಷಾದ ಮಾಲಕ, ಚಾಲಕ ಹಾಗೂ ಇತರ ಆರೋಪಿಗಳು ದನವನ್ನು ಎಲ್ಲಿಂದಲೋ ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುವ ಅಟೋರಿಕ್ಷಾದ ಸೀಟಿನಲ್ಲಿ ದನಕ್ಕೆ ಹಿಂಸೆ ಆಗುವ ರೀತಿಯಲ್ಲಿ ತುಂಬಿಸಿ ಸಾಗಿಸಿ, ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ಖಚಿತವಾಗಿದ್ದು. ಸದ್ರಿ ದನವನ್ನು ಮತ್ತು ಅಟೋರಿಕ್ಷಾ ನಂಬ್ರ ಕೆ.ಎ-20-ಸಿ-2218 ನೇದನ್ನು  ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಶಿರ್ವಾ  ಠಾಣಾ ಅಪರಾಧ  ಕ್ರಮಾಂಕ: 134/2014, ಕಲಂ: 379 ಐಪಿಸಿ & ಕಲಂ  8,9,11 ಕರ್ನಾಟಕ ಗೋಹತ್ಯೆ ನಿಷೇದ ಕಾಯ್ದೆ 1964, ಕಲಂ: 11ಡಿ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 & ಕಲಂ 192(ಎ) ಐಎಮ್‌ವಿ ಕಾಯ್ದೆ, 74 ಐಎಮ್‌ವಿ ರೂಲ್ಸ್‌ ನಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: