Wednesday, February 26, 2014

Daily Crimes Reported as On 26/02/2014 at 07:00 Hrs

ಅಪಘಾತ ಪ್ರಕರಣ 
  • ಶಂಕರನಾರಾಯಣ : ದಿನಾಂಕ 24/02/2014 ರಂದು ರಾತ್ರಿ 8:00 ಗಂಟೆಯ ಸಮಯಕ್ಕೆ ಆರೋಪಿಯು ತನ್ನ KA 20 B 8080 ನೇ ನಂಬ್ರದ ಪಿಕಪ್‌ವಾಹನವನ್ನು ಹಾಲಾಡಿ – ಬಿದ್ಕಲ್‌ಕಟ್ಟೆ ಮುಖ್ಯರಸ್ತೆಯಲ್ಲಿ ಹಾಲಾಡಿ ಕಡೆಯಿಂದ ಬಿದ್ಕಲ್‌ಕಟ್ಟೆ ಕಡೆಗೆ ಕುಂದಾಪುರ ತಾಲೂಕು 28 ಹಾಲಾಡಿ ಗ್ರಾಮದ ಬಂಡ್ಸಾಲೆ ಎಂಬಲ್ಲಿ ಮುಖ್ಯರಸ್ತೆಯ ಎಡಗಡೆ ಇರುವ ಒಂದು ಮನೆಯ ಕಡೆಯಿಂದ ಒಮ್ಮೇಲೆ ಅತೀವೇಗ  ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಾಲಾಡಿ ಕಡೆಯಿಂದ ಬಿದ್ಕಲ್‌ಕಟ್ಟೆ ಕಡೆಗೆ ಪಿರ್ಯಾದಿ ಶಂಕರ ಪಮ್ಮಾರ ತಂದೆ: ದಿ. ಸೋಮಪ್ಪ ಪಮ್ಮಾರ, ವಾಸ: ದಿಂಡೂರ ತಾಂಡ, ಗಜೇಂದ್ರಗಡ ರಸ್ತೆ, ರೋಣ ತಾಲೂಕು, ಗದಗ ಜಿಲ್ಲೆರವರು ಪ್ರಯಾಣಿಸುತ್ತಿದ್ದ KA 20 C 6368 ನೇ ನಂಬ್ರದ 407 ಮಿನಿ ಟಿಪ್ಪರ್‌ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 407 ಮಿನಿ ಪಿಕಪ್‌ಲಾರಿಯು ಮಗುಚಿ ಬಿದ್ದ ಪರಿಣಾಮ  ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಎಡಕಾಲು, ಮುಖದ ಬಲಭಾಗಕ್ಕೆ ರಕ್ತಗಾಯ ಹಾಗೂ ಎದೆಗೆ ಗುದ್ದಿದ ನೋವಾಗಿದ್ದು ಪಿರ್ಯಾದಿದಾರೊಂದಿಗಿದ್ದ ಸುರೇಶ ಎಂಬವರಿಗೆ ಬಲಕಾಲಿನ ಮೂಳೆ ಮುರಿತ ಹಾಗೂ ಬಲಕೈ ಮತ್ತು ಮುಖದ ಎಡಬದಿಗೆ ರಕ್ತಗಾಯವಾಗಿರುತ್ತದೆ ಈ ಬಗ್ಗೆ ಶಂಕರ ಪಮ್ಮಾರರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 35 /2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು  ಪ್ರಕರಣ
  • ಮಲ್ಪೆ: ಪಿರ್ಯಾದಿ ಕು.ಕಾವ್ಯ (22)ತಂದೆ. ಬಾಲಕೃಷ್ಣ ಶಿವ ಕೃಪ ಕೆಮ್ಮಣ್ಣು ಮೂಡುತೋನ್ಸೆ ಗ್ರಾಮ ಎಂಬವರು  ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ನಿವಾಸಿಯಾಗಿದ್ದು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ತನ್ನ ಮನೆಯಲಿದ್ದು ತನ್ನ ವಿದ್ಯಾಬ್ಯಾಸಕ್ಕಾಗಿ 4 ವರ್ಷಗಳ ಹಿಂದೆ ಖರೀದಿಸಿದ್ದ ಡೆಲ್ ಕಂಪೆನಿಯ ಲ್ಯಾಪ ಟಾಪ್ ಅಂದಾಜು ಬೆಲೆ 10000, ತನ್ನ ಮೊಬೈಲ್ ಅಂದಾಜು ಬೆಲೆ 1000 ಮತ್ತು ವ್ಯಾನಿಟಿ ಬ್ಯಾಗನಲ್ಲಿ  ನಗದು 700 ಇದ್ದದ್ದುನ್ನು ದಿನಾಂಕ 23.02.2014 ರ ರಾತ್ರಿ ತನ್ನ ಬೆಡ್ ರೂಮಿನಲ್ಲಿ ಕಿಟಕಿಯ ಬಳಿ ಇರುವ ಟೇಬಲ್ ನ ಮೇಲೆ ಇಟ್ಟು ಮಲಗಿದ್ದು ದಿನಾಂಕ 24.02.2014 ರಂದು ಬೆಳಿಗ್ಗೆ  ಎದ್ದಾಗ ನೋಡಿದಾಗ ಇವುಗಳೆಲ್ಲ ಇಲ್ಲದಿದ್ದನ್ನು ಕಂಡು ಮನೆಯಲ್ಲಿ ಹುಡುಕಾಡಿ ಪರಿಶೀಲಿಸಿದ್ದು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಿಟಕಿಯ ಮೂಲಕ ಒಳಗೆ  ಕೈ ಹಾಕಿ ಕಳುವು ಮಾಡಿಕೊಂಡು ಹೋಗಿರುವುದಾಗಿ ಕು.ಕಾವ್ಯರವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 37/2014 ಕಲಂ 379, ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: