ಹುಡುಗಿ ಕಾಣೆ ಪ್ರಕರಣ
- ಬೈಂದೂರು: ನಾಗೇಂದ್ರ ಆಚಾರ್ಯ ತಂದೆ:ಅನಂತಯ್ಯ ಆಚಾರ್ಯ ವಾಸ:ಯೋಜನಾ ನಗರ ಯಡ್ತರೆ ಗ್ರಾಮ ಕುಂದಾಪುರ ತಾಲೂಕುರವರ ತಂಗಿ ದೀಪಿಕಾ ಎಂಬವರು ದಿನಾಂಕ 18/06/2013 ರಂದು ಬೆಳಿಗ್ಗೆ 07:00 ಗಂಟೆಗೆ ತನ್ನ ಮನೆಯಾದ ಯಡ್ತರೆ ಗ್ರಾಮದ ಯೋಜನಾ ನಗರ ಎಂಬಲ್ಲಿಂದ ಕೋಟೇಶ್ವರದಲ್ಲಿರುವ ಬೀಡಿ ಬ್ರಾಂಚಿಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಗ್ಗೆ ಸಹಿ ಹಾಕಲು ಇದೆಯೆಂದು ಮನೆಯವರಲ್ಲಿ ಹೇಳಿ ಹೋದವಳು ವಾಪಾಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ನಾಗೇಂದ್ರ ಆಚಾರ್ಯರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 187/2013 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕುಮಾರಿ ದೀಪಿಕಾ (23 ವರ್ಷ)
ಎಣ್ಣೆಗಪ್ಪು ಮೈ ಬಣ್ಣ,
5’3 ಅಡಿ ಎತ್ತರ,
ಸಾಧಾರಣ ಶರೀರ,
ತಿಳಿ ಗುಲಾಬಿ ಬಣ್ಣದ ಚೂಡಿದಾರ್ ಟಾಪ್ ಮತ್ತು ಶಾಲ್ ಧರಿಸಿರುತ್ತಾರೆ.
ತಿಳಿ ಹಸಿರು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ .
ಕನ್ನಡ ಮಾತನಾಡುತ್ತಾಳೆ
ಅಸ್ವಾಭಾವಿಕ ಮರಣ ಪ್ರಕರಣ
- ಕುಂದಾಪುರ: ಶಂಕರನಾರಾಯಣ ಕರಣಿಕ ತಂದೆ ನಾಗಪ್ಪಯ್ಯ ಕರಣಿಕ ವಾಸ ಕರಣಿಕರ ಬೆಟ್ಟು ನೆಲ್ಲಿಕಟ್ಟೆ ಕಾವ್ರಾಡಿ ಕುಂದಾಪುರರವರ ತಂದೆ ದಿನಾಂಕ 23/06/2013 ರಂದು 02:15 ಗಂಟೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದು ತಂದೆಯವರ ಆರೈಕೆಯಲ್ಲಿದ್ದ ತಾಯಿ ಶ್ರೀಮತಿ ಸಾವಿತ್ರಿ ದೇವಿಯವರು ತಂದೆಯವರೊಂದಿಗೆ ತೀವೃ ಅನ್ಯೋನ್ಯತೆಯಿಂದ ಇದ್ದು, ತಂದೆಯವರು ತೀರಿಕೊಂಡಿದ್ದರಿಂದ ತೀವೃ ತರಹದ ದುಖಃದಿಂದ ಮಾನಸಿಕವಾಗಿ ನೊಂದಿದ್ದು ಮನೆಯ ಪೂರ್ವಬದಿಯಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶಂಕರನಾರಾಯಣ ಕರಣಿಕರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 34/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:
Post a Comment