- ಕೋಟಾ: ದಿನಾಂಕ 22/01/2012 ರಂದು ಮಧ್ಯಾಹ್ನ 15:45 ಗಂಟೆಗೆ ಉಡುಪಿ ತಾಲೂಕು ಮಣೂರು ಗ್ರಾಮದ ಹಳೆ ಪೊಲೀಸ್ ಠಾಣೆ ಎದುರು ರಾ.ಹೇ 66 ರಲ್ಲಿ ಪಿರ್ಯಾದಿ ಶರತ್ ಚಂದ್ರ 58 ವರ್ಷ ತಂದೆ:ಸುಬ್ಬ ರಾವ್ ವಾಸ: ಜಯಚಂದ್ರ ಮೈನ್ ಜನ್ಸ್ ಬಜಪೆ ರವರು ಅವರ ಪತ್ನಿ ಜಯಂತಿ ಮಗ ನಿತೇಶ್,ಪ್ರೀತೇಶ್ ಹಾಗೂ ಸಂಬಂಧಿ ಗಣೇಶ ರೊಂದಿಗೆ ಕೆ.ಎ-19-ಎಂಇ-1008 ಮಾರುತಿ 800 ನೇದನ್ನು ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಉಡುಪಿ ಕಡೆಯಿಂದ ಕೆಎ-20--ಪಿ-1848 ನೇದರ ಕಾರಿನ ಚಾಲಕನು ಆತೀವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಶರತ್ ಚಂದ್ರರವರಿಗೆ ಅವರ ಪತ್ನಿಗೆ ತೀವ್ರ ಸ್ವರೂಪ ರಕ್ತ ಗಾಯವಾಗಿದ್ದು ಉಳಿದವರಿಗೆ ಸಾದ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಆರೋಪಿ ಸೂರತ್ ಕುಮಾರ್ ರವರಿಗೂ ಹಾಗೂ ಆರೋಪಿಯ ಕಾರಿನಲ್ಲಿದ್ದವರಿಗೂ ರಕ್ತಗಾಯವಾಗಿರುತ್ತದೆ ಎಂಬುದಾಗಿ ಶರತ್ ಚಂದ್ರರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2012 ಕಲಂ 279 338,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಗಂಗೊಳ್ಳಿ: ದಿನಾಂಕ: 22/01/2012 19:45ಗಂಟೆಗೆ ಪಿರ್ಯಾದಿ ಜಿ. ನಾಗರಾಜ ಕಲೈಕಾರ್ರವರು ತಮ್ಮ ಸ್ಮಂತ ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋಗಿ ವಾಪಸ್ಸು ಮನೆಗೆ ಬರುವರೇ ಅವರ ಬೈಕ್ನಲ್ಲಿ ಬರುತ್ತಿರುವಾಗ ಗಂಗೊಳ್ಳಿ ಎಸ್.ವಿ ಜ್ಯೂನಿಯರ್ ಕಾಲೇಜ್ ಜಂಕ್ಷನ್ ಬಳಿ ಅವರ ಎದುರಿನಿಂದ ಓರ್ವ ಮೋಟಾರ ಸೈಕಲ್ ನಂ ಕೆಎ 20 ಇಎ 4645 ಅದರ ಸವಾರನು ತನ್ನ ಬೈಕ್ನ್ನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಹಠಾತನೇ ಒಂದು ನಾಯಿ ರಸ್ತೆಗೆ ಅಡ್ಡವಾಗಿ ಓಡಿಬಂದಿದ್ದು ಆಗ ಬೈಕ್ ಸವಾರನ್ನು ನಿಯಂತ್ರಣ ತಪ್ಪಿ ಓಮ್ಮೇಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬೈಕ್ ಸವಾರನ ಸಮೇತ ಎಸ್ವಿ ಕಾಲೇಜಿನ ಎದುರುಗಡೆಯಿರುವ ರವಿ ಇಲೇಕ್ಟ್ರೀಕಲ್ ಅಂಗಡಿಯ ಮುಂದಿನ ಕಬ್ಬಿಣದ ಗೇಟ್ಗೆ ಹೋಗಿ ಬಡಿದಿದ್ದು ಪರಿಣಾಮ ಬೈಕ್ ಸವಾರನ ತಲೆಯಿಂದ ಹಾಗೂ ಮೂಗಿನಿಂದ ವಿಪರೀತ್ಯಾ ರಕ್ತ ಬರುತ್ತಿದ್ದು ಜಿ. ನಾಗರಾಜ ಕಲೈಕಾರ್ರವರು ಹಾಗೂ ಇತರರು ಅವರನ್ನು ಒಂದು ಅಂಬಲೇಸ್ಸ್ ತರಿಸಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯಾಧಿಕಾರಿಗಳು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ವ್ಯಕ್ತಿಯು ಜಿ. ನಾಗರಾಜ ಕಲೈಕಾರ್ರವರ ಪರಿಚಯದ ಮೋಹನ ದಾಸ ಗಂಗೊಳ್ಳಿ ಆಗಿರುವುದಾಗಿದೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಜಿ. ನಾಗರಾಜ ಕಲೈಕಾರ್ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2012 ಕಲಂ 279 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹಿರಿಯಡ್ಕ: ದಿನಾಂಕ 22/01/2012 ರಂದು ಸಂಜೆ ಸುಮಾರು 5:30 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ, ಹಿರಿಯಡ್ಕ ಜಂಕ್ಷನ್ ಬಳಿ ಇರುವ ಸ್ವಾತಿ ಮೆಡಿಕಲ್ ಸಮೀಪ ಅಟೋರಿಕ್ಷಾ ನಂಬ್ರ ಕೆಎ.20.ಎ.6390 ನೇದರ ಚಾಲಕ ಸುಧಾಕರ ನಾಯ್ಕರವರು ತಮ್ಮ ಅಟೋ ರಿಕ್ಷಾವನ್ನು ನಿಲ್ಲಿಸಿ, ಅಲ್ಲೇ ಹತ್ತಿರದ ದಿವ್ಯಾ ಜನರಲ್ ಸ್ಟೋರ್ ಗೆ ಹೋಗಲು ರಸ್ತೆ ದಾಟುತ್ತಿರುವ ಸಮಯ ಕೋಟ್ನ ಕಟ್ಟೆಯಿಂದ ಹಿರಿಯಡ್ಕ ಕಡೆಗೆ, ಹಿರಿಯಡ್ಕ –ಕೋಟ್ನ ಕಟ್ಟೆ ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ ಕೆಎ.20.ಎಸ್.4809 ನೇದರ ಸವಾರ ದೀಪಕ್ ಆಚಾರ್ಯ ಎಂಬವರು ತನ್ನ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ, ಸುಧಾಕರ ನಾಯ್ಕರವರಿಗೆ ಢಿಕ್ಕಿ ಹೊಡೆದ ಪರಿಣಾಮ, ಸುಧಾಕರ ನಾಯ್ಕರವರ ಬಲಕಾಲಿಗೆ ಮೂಳೆ ಮುರಿತ ಉಂಟಾಗಿರುತ್ತದೆ ಎಂಬುದಾಗಿ ವಸಂತ ಕುಲಾಲ್, (37), ತಂದೆ: ನಾರಾಯಣ ಕುಲಾಲ್, ವಾಸ: ಶ್ರೀ ವಿಷ್ಣು, ಮಾಣೈ, ಬೆಳ್ಳಲ್, ಬೊಮ್ಮರಬೆಟ್ಟು ಗ್ರಾಮ, ಉಡುಪಿ ಜಿಲ್ಲೆರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2012 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಉಡುಪಿ ನಗರ: ದಿನಾಂಕ 22/01/12 ರಂದು ಶ್ರೀಮತಿ ಮೀನಾಕ್ಷಿ, ಮಹಿಳಾ ಪೊಲೀಸ್ ಉಪನಿರೀಕ್ಷಕರು ಉಡುಪಿನಗರ ಠಾಣೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರವರೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 11:30 ಗಂಟೆ ಸಮಯಕ್ಕೆ ಉಡುಪಿ ಕನಕದಾಸ ರಸ್ತೆಯಲ್ಲಿ ಹೋಗುತ್ತಿರುವಾಗ ಮಾರುತಿ ಜ್ಯುವೆಲ್ಲರಿ ಅಂಗಡಿಯ ಬಳಿ ಒಬ್ಬ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು ನಮ್ಮನ್ನು ನೋಡಿ ಕಟ್ಟಡದ ಅಡ್ಡ ಹೋಗಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಸಂಶಯಗೊಂಡು, ಆತನಿಗೆ ನಿಲ್ಲುವಂತೆ ಸೂಚಿಸಿದಾಗ ಸದ್ರಿಯವನು ಓಡಲು ಪ್ರಯತ್ನಿಸಿದ್ದು ಅಷ್ಟರಲ್ಲಿ ಆತನನ್ನು ಹಿಡಿದು ವಿಚಾರಿಸಿದಾಗ ಆತನು ಹೆಸರು ವಿಳಾಸ ನೀಡಲು ತಡವರಿಸುತ್ತಿದ್ದು ಒಮ್ಮೆ ಆತನ ಹೆಸರು ಜಯರಾಮ ಮಂಗಳೂರು ಎಂಬುದಾಗಿ ತಿಳಿಸಿದ್ದು, ಇನ್ನೊಮ್ಮೆ ಜಯಕರ ಬಜ್ಪೆ ಎಂಬುದಾಗಿ ತಿಳಿಸಿದ್ದು ನಂತರ ಕೂಲಂಕುಶವಾಗಿ ವಿಚಾರಿಸಿದಲ್ಲಿ ಆತನ ಹೆಸರು ಜಯಕರ ಕೋಟ್ಯಾನ್ ಪ್ರಾಯ: 40 ವರ್ಷ, ತಂದೆ: ದಿವಂಗತ ಶೇಖರ ಪೂಜಾರಿ, ವಾಸ: ಪೆರ್ಮುದೆ, ಹುಣ್ಸೆಕಟ್ಟೆ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಈತನು ಸದ್ರಿ ಸ್ಥಳದಲ್ಲಿ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದು ಯಾವುದೋ ಬೇವಾರಂಟ್ ತಕ್ಷೀರು ಮಾಡುವ ಇರಾದೆಯಿಂದ ಹೊಂಚುಹಾಕುತ್ತಿರುವುದಾಗಿ ಬಲವಾಗಿ ಸಂಶಯಗೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ಅದರಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 21/2012 ಕಲಂ 109 ಸಿಆರ್ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಉಡುಪಿ ನಗರ: ಜಯರಾಮ 62 ವರ್ಷ, ತಂದೆ: ದಿ ನೀಲಯ್ಯ ವಾಸ: ಎಂಜಿಎಂ ಕಾಲೇಜ್ ಎದುರು, ಅಜ್ಜಮ್ಮ ಹೋಟೇಲ್, ಕುಂಜಿಬೆಟ್ಟು, ಉಡುಪಿರವರು ಕ್ಯಾಂಟೀನ್ ಇಟ್ಟಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 17/01/2012 ರಂದು ಜಯರಾಮರವರು ಬ್ಯಾಂಕಿಗೆ ಹಣ ಪಾವತಿ ಮಾಡವರೇ ಅವರ ಹೋಟೇಲ್ ನ ಕ್ಯಾಷ್ನ ಪಕ್ಕ ಒಂದು ಡಬ್ಬದಲ್ಲಿ ಸುಮಾರು 85000/- ರೂ ಇಟ್ಟಿದ್ದು, ಅದೇ ದಿನ ಮದ್ಯಾಹ್ನ ಸುಮಾರು 2:00 ಗಂಟೆಯಿಂದ 4:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಜಯರಾಮರವರಿಗೆ ಈ ಕಳ್ಳತನದ ಬಗ್ಗೆ ಬುಡ್ನಾರು ವಾಸಿ ರಿಹಾನ್ ಎಂಬುವರ ಮೇಲೆ ಸಂಶಯವಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಜಯರಾಮರವರು ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 23/2012 ಕಲಂ 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಇತರ ಪ್ರಕರಣ
- ಉಡುಪಿ ನಗರ: ಸರೋಜವಿ ಭಟ್, ಪಾಯ:67 ವರ್ಷ, ಗಂಡ:ದಿ ವೆಂಕಟರಮಣ ಭಟ್,ವಾಸ: ಮನೆನಂ9-4-151, ಬೊಬ್ಬರ್ಯ ಓಣಿ, ವುಡ್ಲ್ಯಾಂಡ್ ಹೋಟೆಲ್ ಹತ್ತಿರ, ಶಿವಳ್ಳಿ ಗ್ರಾಮರವರ ನೆರೆಮನೆಯ ವಾಸಿಯಾದ ವಾಸುದೇವಾ ಭಟ್ರ ಒಕ್ಕಲಿಗನಾದ ದಿನೇಶ್ ಹಿಂಬಾಳೆ ಮತ್ತು ರಾಜೇಶ್ ಶೇಟ್ ಎಂಬವರು ಸರೋಜವಿ ಭಟ್ ರವರ ಮನೆಗೆ ಹಾಕಿದ ನಳ್ಳಿ ನೀರಿನ ಜೋಡಣೆಯನ್ನು ಕಿತ್ತುಹಾಕಿ ಸುಮಾರು 1000/- ನಷ್ಟ ಮಾಡಿರುತ್ತಾರೆ ಮತ್ತು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಈ ಹಿಂದೆರ ಈ ಬಗ್ಗೆ ಅರ್ಜಿಯನ್ನು ತನಿಖೆ ಮಾಡಿ ಮುಕ್ತಾಯಗೊಳಿಸಲಾಗಿರುತ್ತದೆ. ಈ ಬಗ್ಗೆ ದಿನಾಂಕ 02-11-11ರಂದು ನಗರಸಭೆಗೆ ಕ್ರಮ ಕೈಗೊಳ್ಳುವರೇ ಪತ್ರ ಮುಖೇನ ತಿಳಿಸಲಾಗಿದ್ದು, ದಿನಾಂಕ 12-12-11ರಂದು ಉಡುಪಿ ನಗರ ಸಭೆಯವರು ಸದ್ರಿ ಜೋಡಣೆಯು ಖಾಸಗಿ ಜೋಡಣೆಯಾಗಿದ್ದು, ಸದ್ರಿ ಜೋಡಣೆ ಹಾಳು ಕೆಡವಿದಲ್ಲಿ ಸದ್ರಿ ಮಾಲಿಕರು ಪೊಲೀಸ್ ಇಲಾಖೆಗೆ ದೂರು ನೀಡಿದಲ್ಲಿ ಕ್ರಮ ಪೊಲೀಸ್ ಇಲಾಖೆಯದ್ದಾಗಿರುತ್ತದೆ ಎಂದು ತಿಳಿಸಿರುತ್ತಾರೆ ಆದುದರಿಂದ ಆರೋಪಿ ದಿನೇಶ್ ಹಿಂಬಾಳೆಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬುದಾಗಿ ಸರೋಜವಿ ಭಟ್ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2012 ಕಲಂ 504,427 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಬ್ರಹ್ಮಾವರ: ದಿನಾಂಕ 16/01/2012 ರಂದು ಬೆ.10.45 ಗಂಟೆ ಸಮಯಕ್ಕೆ ಪಿರ್ಯಾದಿ ನಟರಾಜ(16) ತಂದೆ:ಲಕ್ಷ್ಮಣ ಶೆಟ್ಟಿ ವಾಸ:ಕೆಸ್ಲಬೈಲು, ಕನ್ನಾರು, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕುರವರು ಆರೋಪಿಯ ಚೇಕಾಡಿ ಗ್ರಾಮದ ಶ್ರೀ ಬೆನಕಾ ಪುಡ್ ಇಂಡಸ್ಟ್ರೀಸ್‌ನಲ್ಲಿ ಹಿಟ್ಟು ಮಿಕ್ಸಿಂಗ್ ಮಿಶನ್‌ನಲ್ಲಿ ಹಿಟ್ಟನ್ನು ಕಡೆಯುವಾಗ ಮಿಶನ್ ತಿರುಗುತ್ತಿರುವಾಗಲೇ ಕೈಹಾಕಿ ಹಿಟ್ಟನ್ನು ತೆಗೆಯುತ್ತಿರುವಾಗ ನಟರಾಜರವರ ಕೈ ಮಿಶನ್ ಒಳಗೆ ಸಿಕ್ಕಿ ಬಲಕೈಗೆ ತೀವ್ರ ತರಹದ ಗಾಯ ಹಾಗೂ ಕುತ್ತಿಗೆಯ ಬಲ ಬದಿಗೆ ರಕ್ತಗಾಯವಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರು ಅವರ ಕೈಯನ್ನು ತುಂಡರಿಸಿರುತ್ತಾರೆ. ಇಂಡಸ್ಟ್ರೀಸ್ನ ಮಾಲಕರಾದ ಶ್ರೀಮತಿ ಕಸ್ತೂರಿ ಎನ್ ಶೆಟ್ಟಿರವರು ಮಿಶನ್ ತಿರುಗುವಾಗ ಒಳಗೆ ಕೈ ಹಾಕಿ ಹಿಟ್ಟು ತೆಗೆದಲ್ಲಿ ಅಪಾಯ ಇದೆ ಎಂದು ತಿಳಿದಿದ್ದರು ಸಹ ಯಾವುದೇ ಮುಂಜಾಗ್ರತೆ ವಹಿಸದೆ ಕೆಲಸ ವಿಳಂಭವಾಗುವುದೆಂದು ನಟರಾಜರವರಿಂದ ಹಿಟ್ಟನ್ನು ತೆಗೆಸಿ ಈ ಅವಘಡಕ್ಕೆ ಕಾರಣರಾಗಿರುತ್ತಾರೆ ಎಂಬುದಾಗಿ ನಟರಾಜರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/12 ಕಲಂ 287,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಗಂಗೊಳ್ಳಿ: ಖಾಸಗಿ ಪಿರ್ಯಾದಿ ನಂ 17/12 ಸಾರಂಶವೇನೆಂದರೆ ಪಿರ್ಯಾದಿ ಜ್ಯೋತಿ ಖಾರ್ವಿ ಹಾಗೂ ಆರೋಪಿ ಲಾರೆನ್ಸ್ ರವರಿಗೆ ದಿನಾಂಕ 21/04/2008 ರಲ್ಲಿ ಶ್ರೀ ದರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿದಿಯಲ್ಲಿ ನಡೆಯುವ ಉಚಿತಿ ಸಾಮೂಹಿಕ ವಿವಾಹವಾಗಿದ್ದು, ವಿವಾಹದ ನಂತರ ಇಬ್ಬರು ಅನೂನ್ಯದಿಂದ 6 ತಿಂಗಳವರೆಗೆ ಸಂಸಾರ ಮಾಡಿದ್ದು, ಮದುವೆಯಾದ 6 ತಿಂಗಳು ನಂತರ ಇಬ್ಬರಲ್ಲಿ ಬಿರುಕುಉಂಟಾಗಿ, ಜ್ಯೋತಿ ಖಾರ್ವಿರವರಿಗೆ ಮಾನಸಿಕ ಕಿರುಕುಳ, ಹಿಂಸೆ ನೀಡಿ , ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ಬೈದು, ಕೈಯಿಂದ ಹಾಗೂ ಸ್ವತ್ತುಗಳಿಂದ ಹಲ್ಲೆಮಾಡಿ ಅವರನ್ನು ಮನೆಯಿಂದ ಓಡಿಸಲು ಪ್ರಯತ್ನ ಮಾಡಿದಲ್ಲದೇ, ಜ್ಯೋತಿ ಖಾರ್ವಿರವರನ್ನು ಸಂಪ್ರಧಾಯಬದ್ದವಾಗಿ ಮದುವೆಯಾಗಿದ್ದು, ಇನ್ನೋಬ್ಬಳೊಂದಿಗೆ ಬೇರೆ ಮದುವೆಯಾಗಲು ಪ್ರಯತ್ನಿಸಿ ವಂಚನೆ ಮಾಡಿ, ಕೊಲೆ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಜ್ಯೋತಿ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2012 ಕಲಂ 498(ಎ) 417, 504, 506, 324, 323 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment