Daily Crimes Reported as on 23/01/12 at 17:00 Hrs
ಅಪಘಾತ ಪ್ರಕರಣ - ಕುಂದಾಪುರ: ದಿನಾಂಕ 22/01/2012 ರಂದು ಪಿರ್ಯಾದಿದಾರರಾದ ಸಂತೋಷ ಬಿನ್ ದಿವಂಗತ ಡ್ರೈವರ್ ಬಚ್ಚ ವಾಸ: ಹೆಗ್ಡೆ ಹೌಸ್, ಹಂಗಳೂರು ಗ್ರಾಮ ಕುಂದಾಪುರರವರು ಹುಣ್ಸೆಕಟ್ಟೆ ಬೊಬ್ಬರ್ಯ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ಕುಂದಾಪುರಕ್ಕೆ ಬರಲು ಬಸ್ಸಿಗಾಗಿ ಕಾಯುತ್ತಿರುವಾಗ ಬೆಳಿಗ್ಗೆ 8:00 ಗಂಟೆಗೆ ಆರೋಪಿ ಕೆ.ಎ.01 ಎಂಡಿ 7254 ನೇ ಚವರ್ಲೆಟ್ ಕಾರಿನ ಚಾಲಕ ಸುನೀಲ್ ತನ್ನ ಕಾರನ್ನು ಕುಂದಾಪುರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಚಾಲಕನು ನೆಲಕ್ಕೆ ಬಿದ್ದು ಆತನಿಗೆ ತೀವ್ರ ತರವಾದ ಗಾಯಗಳಾಗಿರುತ್ತದೆ ಎಂಬುದಾಗಿ ಸಂತೋಷ ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 14/12 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ- ಮಲ್ಪೆ: ಪಿರ್ಯಾದಿದಾರರಾದ ಸ್ಟೀಫನ್ ಫೆರ್ನಾಂಡಿಸ್ (40) ತಂದೆ ಅಂಜಲಿನ್ ಫೆರ್ನಾಂಡಿಸ್ ಏಣಗುಡ್ಡೆ ಗ್ರಾಮ ಕಟಪಾಡಿ ಉಡುಪಿ ರವರ ಜೊತೆಗೆ ಶಾಮಿಯಾನ ಹಾಕುವ ಕೆಲಸ ಮಾಡಿಕೊಂಡಿದ್ದ ಚಂದ್ರಶೇಖರ್ ಬಿಲ್ಲವ (40) ಇವರು ದಿನಾಂಕ 22/01/2012 ರಂದು ಮಲ್ಪೆ ಪಡುಕೆರೆ ಶನಿಶ್ವರ ಭಜನಾ ಮಂದಿರದ ಬಳಿ ಶಾಮಿಯಾನ ಹಾಕುತ್ತಿರುವ ಸಮಯ ಸಂಜೆ 6:30 ಗಂಟೆಗೆ ಎದೆ ನೋವು ಎಂದು ಹೇಳಿ, ಕುಡಿಯಲು ನೀರು ಕೇಳಿದ್ದು, ನೀರು ಕುಡಿದು ಅಲ್ಲಯೇ ಮಲಗಿದ್ದವರನ್ನು ಪಿರ್ಯಾದಿದಾರರು ಮಾತಾಡಿಸಲು ಹೋದಾಗ ಮಾತನಾಡದೇ ಇರುವುದನ್ನು ಕಂಡು ಕೂಡಲೇ ಒಂದು ವಾಹನದಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಂದ್ರಶೇಖರ ರವರನ್ನು ಪರೀಕ್ಷಿಸಿದ ವೈದ್ಯರು ಚಂದ್ರಶೇಖರ ಬಿಲ್ಲವರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಚಂದ್ರಶೇಖರ್ ರವರು ಎದೆನೋವಿನಿಂದ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತದೇಹವನ್ನು ಶವಾಗಾರದಲ್ಲಿ ಇರಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಜರುಗಿಸುವಂತೆ ಕೋರಿಕೆ ಎಂಬುದಾಗಿ ಸ್ಟೀಫನ್ ಫೆರ್ನಾಂಡಿಸ್ ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 05/12 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment