Thursday, January 08, 2015

Daily Crime Reported As On 08/01/2015 At 07:00Hrs


ಕಳವು ಪ್ರಕರಣ
  • ಬ್ರಹ್ಮಾವರ: ದಿನಾಂಕ: 06/01/2015 ರಂದು ಬೆಳಿಗ್ಗೆ 8.15 ಗಂಟೆಯಿಂದ 19.00 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಕೀರ್ತಿ ಹೊಟೇಲಿನ ಎದುರು ನಿಲ್ಲಿಸಿದ್ದ ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಮೋಟಾರು ಸೈಕಲ್ ನಂಬ್ರ ಕೆಎ-20-ಇಎ-1605 ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂ 35,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/15 ಕಲಂ 379  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಹಲ್ಲೆ ಪ್ರ ಕರಣ
  • ಗಂಗೊಳ್ಳಿ: ದಿನಾಂಕ:06/01/2015 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ಚಂದು ಇವರು ತಮ್ಮ ಮನೆಯಲ್ಲಿ ಕೆಲಸ ಮಾಡಿಸುತ್ತಿರುವ ಸಮಯ ಆಪಾದಿತರಾದ ಗುರುವ, ಶಂಕರ, ಅಕ್ಕಯ್ಯ, ರಮೇಶ್‌, ಮಾಚಿ, ವಿನೋದ, ರಘು, ಶಾರದ, ಕಮಲ, ಆಶಾ, ವೆಂಕಮ್ಮ,ಂಜು, ನೀಲು, ಲಕ್ಷ್ಮೀ ಎಂಬುವವರು ಪಿರ್ಯಾದಿಯವರ  ಮನೆಯ ಕೆಲಸಕ್ಕೆ ಬಂದಿರುವವರಿಗೆ ಬೈದು, ನಂತರ ಅವರ ಮಗಳಿಗೆ ಹೊಡೆದು ಕೈಯಲ್ಲಿ ಗಾಯ ಮಾಡಿ, ಪಿರ್ಯಾದಿದಾರಿಗೆ ಮತ್ತು ಅವರ ಮಗಳಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಮತ್ತು ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2015 ಕಲಂ 143, 147, 323, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
  • ಗಂಗೊಳ್ಳಿ: ದಿನಾಂಕ:06/01/2015 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ಮಾಚಿ ಪೂಜಾರ್ತಿ ರವರು ಚಂದು ಪೂಜಾರ್ತಿ ಇರುವ ಮನೆಗೆ ಹೋಗಿ ಪಾಲು ಪಟ್ಟಿಯಾಗುವವರೆಗೆ ಯಾವುದೇ ಕೆಲಸಮಾಡಬಾರದೆಂದು ಹೇಳಲು ಹೋಗಿದ್ದಾಗ, ಆಗ  ಆಪಾದಿತರಾದ  ಚಂದು ಪೂಜಾರ್ತಿ ಮತ್ತು ಅವರ ಮಗಳು ಶಾಂತ ಇವರರು ಪಿರ್ಯಾದಿದಾರರ ಅತ್ತಿಗೆ ಅಕ್ಕಯ್ಯ ಇವರ ಮೇಲೆ ಎರಗಿ ಜಗಳಕ್ಕೆ ಬಂದು ಪಿರ್ಯಾದಿದಾರರಿಗೆ ಕೋಲಿನಿಂದ ಕೈಗೆ ಹಾಗೂ ಭುಜಕ್ಕೆ ಹೊಡೆದಿರುತ್ತಾರೆ. ಮತ್ತು ಜಗದೀಶರವರು ಸ್ಥಳ ಕೇಳಲು ಬಂದರೆ ಪಿರ್ಯಾದಿದಾರರ ಕೈಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ 324, 506, 109,  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: