ಅಪಘಾತ ಪ್ರಕರಣ
- ಕಾಪು: ಪಿರ್ಯಾದುದಾರರಾದ ಅಬ್ದುಲ್ ಇಮ್ರಾನ್ (20), ತಂದೆ ಶರೋಫ್ ವಾಸ ರಾಯಿಕಟ್ಟೆ ಹೌಸ್ ಕೂಳೂರು ಅಂಚೆ ಪಡುಕೋಡಿ ಗ್ರಾಮ ಇವರ ನೊಂದಣಿಯಾಗದ ಹೊಸ ಪಲ್ಸರ್ ಮೋಟರ್ ಸೈಕಲ್‌ನಲ್ಲಿ ಜಾಬಿರ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಣಿಪಾಲದಿಂದ ಕೊರಂಗ್ರಪಾಡಿ ರಸ್ತೆಯಿಂದ ಕಾಪು ಕಡೆಗೆ ಬರುತ್ತಿರುವಾಗ ಮದ್ಯಾಹ್ನ 1:20 ಗಂಟೆಗೆ ಉದ್ಯಾವರ ರಾ.ಹೇ 66 ರಿಂದ ಸುಮಾರು 500 ಅಡಿ ಹಿಂದೆ ಕೊರಂಗ್ರಪಾಡಿ ರಸ್ತೆಯಲ್ಲಿ ತಲುಪುವಾಗ ಲಾರಿ ನಂಬ್ರ ಕೆಎ 19ಡಿ 1957ನೇದನ್ನು ಅದರ ಚಾಲಕ ಶಾಂತರಾಮ ಎಂಬವರು ರಾಹೇ 66 ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಬಲ ಬದಿಗೆ ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಹಾಗೂ ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದುದಾರರಿಗೆ ಹಣೆಗೆ, ಎಡಕಾಲಿನ ಗಂಟಿಗೆ ರಕ್ತಗಾಯ ಹಾಗೂ ಸಹಸವಾರನಿಗೆ ತಲೆಗೆ ತೀವ್ರಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೂ ಹಾಗೂ ಸಹಸವಾರರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿರುತ್ತಾರೆ ಎಂಬುದಾಗಿ ಅಬ್ದುಲ್ ಇಮ್ರಾನ್ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 01/2015 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment